ಮುಳ್ಳೂರು, ಫೆ. ೨೬: ಹಾಸನ- ಅರಕಲಗೂಡು ೬೬ ಕೆ.ವಿ. ವಿದ್ಯುತ್ ದ್ವಿ ಮಾರ್ಗದ ತಂತಿ ಎಳೆಯುವ ಕೆಲಸದ ಹಿನ್ನೆಲೆಯಲ್ಲಿ ತಾ.೨೭ರಂದು (ಇಂದು) ಬೆಳಿಗ್ಗೆ ೯ ಗಂಟೆಯಿAದ ಸಂಜೆ ೫ ಗಂಟೆಯವರೆಗೆ ಶನಿವಾರಸಂತೆ ವಿದ್ಯುತ್ ಉಪಕೇಂದ್ರಕ್ಕೆ ಒಳಪಡುವ ಶನಿವಾರಸಂತೆ ಪಟ್ಟಣ, ಗುಡುಗಳಲೆ, ಗೋಪಾಲಪುರ, ಮುಳ್ಳೂರು, ಹಂಡ್ಲಿ, ಗೌಡಳ್ಳಿ, ಶುಂಠಿ, ಮಾದ್ರೆ, ಕಾಜೂರು, ದೊಡ್ಡಕೊಳತ್ತೂರು ಮತ್ತು ಕೊಡ್ಲಿಪೇಟೆಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.