ಮಡಿಕೇರಿ, ಫೆ. ೨೭: ಮಡಿಕೇರಿಯ ಮಲ್ಲಿಕಾರ್ಜುನ ನಗರದಲ್ಲಿ ತಲೆ ಎತ್ತಿರುವ ಶ್ರೀ ಕೋದಂಡರಾಮ ದೇವಾಲಯದ ಪ್ರತಿಷ್ಠಾಪನಾ ಮಹೋತ್ಸವ ಮೇ ೨,೩ ಹಾಗೂ ೪ ರಂದು ನಡೆಯಲಿದ್ದು, ಈ ಸಂಬAಧ ಇಂದು ದೇವಾಲಯದ ಬಳಿಯ ಗೆಜ್ಜೆ ಸಂಗಪ್ಪ ಸಭಾಂಗಣದಲ್ಲಿ ಪೂರ್ವಸಿದ್ಧತಾ ಸಭೆ ಹಾಗೂ ಸಮಿತಿಗಳ ರಚನೆ ಸಂಬAಧ ಸಭೆ ನಡೆಯಿತು. ಪ್ರತಿಷ್ಠಾಪನೆ ಸುಸೂತ್ರವಾಗಿ ನೆರವೇರಲು ಪ್ರತಿಷ್ಠಾಪನಾ ಸಮಿತಿ ಸೇರಿದಂತೆ ವಿವಿಧ ಉಪಸಮಿತಿಗಳಿಗೆ ಪದಾಧಿಕಾರಿಗಳನ್ನು ನೇಮಕ ಗೊಳಿಸಲಾಯಿತು. ಪ್ರತಿಷ್ಠಾಪನಾ ಸಮಿತಿಯ ಅಧ್ಯಕ್ಷರಾಗಿ ಎಸ್.ಎಸ್. ಸಂಪತ್ ಕುಮಾರ್ ಅವರನ್ನು ನೇಮಕ ಗೊಳಿಸಲಾಯಿತು. ಉಪಾಧ್ಯಕ್ಷರಾಗಿ ಕೆ. ಮಧುಕರ್ ಅವರು ಆಯ್ಕೆಗೊಂಡರು. ಕಾರ್ಯಾಧ್ಯಕ್ಷರಾಗಿ ಜಿ.ರಾಜೇಂದ್ರ ಅವರನ್ನು ನೇಮಕ ಮಾಡಲಾಯಿತು. ಪ್ರಧಾನÀ ಕಾರ್ಯದಶಿಯಾಗಿ ಗೋಪಿನಾಥ್ ಹಾಗೂ ಖಜಾಂಚಿಯಾಗಿ ಕುಶಲ ಅವರು ಆಯ್ಕೆಯಾದರು.

ವೇದಿಕೆ ಸಮಿತಿಗೆ ಪ್ರಜ್ವಲ್, ಅಗಸ್ತö್ಯ, ಮದನ್ ಹಾಗೂ ಶರತ್, ಮೆರವಣಿಗೆ ಸಮಿತಿ ಮುಖ್ಯಸ್ಥರಾಗಿ ಪರಮೇಶ್, ಸಾಂಸ್ಕೃತಿಕ ಸಮಿತಿಗೆ ಮಹೇಶ್ ಹಾಗೂ ವಿಶಾಲಾಕ್ಷಿ ಅವರುಗಳು ನೇಮಕಗೊಂಡರು. ಅಲಂಕಾರ ಸಮಿತಿಯ ಮುಖ್ಯಸ್ಥರಾಗಿ ರವೀಂದ್ರ, ವೈದಿಕ ಸಮಿತಿಯ ಪ್ರಮುಖರಾಗಿ ರಮೇಶ್ ಹೊಳ್ಳ, ಲಲಿತಾ ರಾಘವನ್, ಪುರುಷೋತ್ತಮ್ ಹಾಗೂ ಜಗದೀಶ್ ನೇಮಕ ಗೊಂಡರು. ಸ್ವಾಗತ ಸಮಿತಿಗೆ ವಿನೋದ್ ಕುಮಾರ್ ಆಯ್ಕೆಗೊಂಡರು. ಸನ್ಮಾನ ಸಮಿತಿಯ ಪ್ರಮುಖರಾಗಿ ನಂಜುAಡ, ಉಗ್ರಾಣ ಸಮಿತಿ ಮುಖ್ಯಸ್ಥರಾಗಿ ಕಾಳಪ್ಪ ಹಾಗೂ ಶುಚಿತ್ವ ಸಮಿತಿಯ ಜವಾಬ್ದಾರಿಯನ್ನು ಅನಿತಾ ತಿಮ್ಮಯ್ಯ ವಹಿಸಿಕೊಂಡರು. ಪ್ರಸಾದ ಸಮಿತಿಗೆ ಗೀತಾ ಸಂಪತ್, ಉಷಾ ರಾಜೇಂದ್ರ ಹಾಗೂ ಗೌರಮ್ಮ ಮಾದಮ್ಮಯ್ಯ ಅವರುಗಳು ನೇಮಕಗೊಂಡರು. ಕಳಶ ಸಮಿತಿ ಜವಾಬ್ದಾರಿಯನ್ನು ತಿಮ್ಮಯ್ಯ ಅವರು ವಹಿಸಿಕೊಂಡರು. ನೀರಾವರಿ ವ್ಯವಸ್ಥೆಯನ್ನು ಸುಬ್ರಮಣಿ, ಪ್ರತಿಷ್ಠಾಪನೆ ಸಂದರ್ಭ ಆಹಾರ ಸಮಿತಿ ನಿರ್ವಹಣೆ ಯನ್ನು ಸುಧಾಕರ್ ನೆರವೇರಿಸಲಿದ್ದಾರೆ. ಜ್ಯೋತಿ ಯುವಕ ಸಂಘದ ಸದಸ್ಯರು ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಆಯ್ಕೆ ಪ್ರಕ್ರಿಯೆ ಸಂದರ್ಭ ವೇದಿಕೆಯಲ್ಲಿ ದೇವಾಲಯದ ಟ್ರಸ್ಟ್ ಅಧ್ಯಕ್ಷ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಸುಧಾಕರ್, ಟ್ರಸ್ಟಿಗಳಾದ ಸಂಪತ್ ಕುಮಾರ್ ,ಜಿ.ರಾಜೇಂದ್ರ, ಮಂಡಿರ ದೇವಿ ಪೂಣಚ್ಚ, ಮಧುಕರ್, ವಿನೋದ್ ಕುಮಾರ್, ರಾಮ ಸೇವಾ ಸಮಿತಿ ಅಧ್ಯಕ್ಷ ತಿಮ್ಮಯ್ಯ, ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಎಂ. ಗಣೇಶ್ ಇದ್ದರು.