ಕಣಿವೆ, ಫೆ. ೨೭: ನಿರೀಕ್ಷೆಯಂತೆ ಕುಶಾಲನಗರ ತಾಲೂಕಿಗೆ ಜಿಲ್ಲಾಡಳಿತ ಹೊಸದಾಗಿ ತಾಲೂಕು ಪಂಚಾಯಿತಿ ಕಾರ್ಯಾಲಯ ವನ್ನು ಅನುಷ್ಠಾನ ಗೊಳಿಸಿದೆ.
ಈ ಹಿಂದೆ ಗ್ರಾಮ ಪಂಚಾಯಿತಿ ಯಾಗಿದ್ದ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಕಾರ್ಯಾಲಯ ಈಗ ತಾಲೂಕು ಪಂಚಾಯಿತಿಯಾಗಿದೆ. ಜೊತೆಗೆ ಕಳೆದ ಒಂದು ವರ್ಷದ ಹಿಂದಷ್ಟೆ ನಿರ್ಮಿಸಿದ್ದ ಗ್ರಾಮಾಡಳಿತದ ಸಭಾಂಗಣ ಈಗ ತಾಲೂಕು ಪಂಚಾಯಿತಿ ಸಭಾಂಗಣವಾಗಿದೆ.
ನೆನೆಗುದಿಗೆ ಬಿದ್ದಿರುವ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಗಳಿಗೆ ಚುನಾವಣಾ ಆಯೋಗ ಚುನಾವಣೆ ನಡೆಸಿದ ನಂತರ ಈ ತಾಲೂಕು ಪಂಚಾಯಿತಿ ಕಾರ್ಯಾಲಯ ಹಾಗೂ ಸಭಾಂಗಣ ರಂಗು ಪಡೆದುಕೊಳ್ಳಲಿದೆ.
ಕುಶಾಲನಗರ ತಾಲೂಕು ರಚನೆಯಾದ ಬಳಿಕ ಮೊದಲನೆ ಯದಾಗಿ ತಾಲೂಕು ತಹಶೀಲ್ದಾರ್ ಕಚೇರಿ ತೆರೆದುಕೊಂಡಿತ್ತು. ಇದೀಗ ಎರಡನೆ ಬೆಳವಣಿಗೆಯಾಗಿ ತಾಲೂಕು ಪಂಚಾಯಿತಿ ಕಾರ್ಯಾಲಯ ರೂಪು ಪಡೆದಿದೆ. ಉಳಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸೇರಿದಂತೆ ಉಳಿದೆಲ್ಲಾ ವಿವಿಧ ಇಲಾಖೆಗಳ ತಾಲೂಕು ಕಚೇರಿಗಳು ಆರಂಭವಾಗಬೇಕಿವೆ.
ಕುಶಾಲನಗರದಿAದ ಕೂಡಿಗೆ ರಸ್ತೆಯ ಮುಳ್ಳುಸೋಗೆ ಗ್ರಾ.ಪಂ. ಆಡಳಿತ ಸೌಧ ತಾ.ಪಂ. ಬದಲಾಗಿರುವುದು ಗ್ರಾಮೀಣ ವಾಸಿಗಳಿಗೆ ಒಂದಷ್ಟು ಸಮಾಧಾನ ತಂದಿದೆ.