ವೀರಾಜಪೇಟೆ, ಫೆ. ೨೭: ವೀರಾಜಪೇಟೆಯ ಕಾವೇರಿ ಶಾಲೆಯ ೩ನೇ ತರಗತಿಯ ವಿದ್ಯಾರ್ಥಿ ಮೊಹಮ್ಮದ್ ದಿನ್‌ಡಾ ರಾಷ್ಟçಮಟ್ಟದ ಲೆವಲ್-೧ ಅಬಾಕಸ್ ಪರೀಕ್ಷೆಯಲ್ಲಿ ಶೇ. ೧೦೦/೧೦೦ ರಷ್ಟು ಅಂಕ ಪಡೆದು ಪ್ರಥಮ ರ‍್ಯಾಂಕ್ ಗಳಿಸಿರುತ್ತಾರೆೆ. ಇತ್ತೀಚೆಗಷ್ಟೆ ಮೈಸೂರಿನ ವೈದ್ಯಕೀಯ ವಿದ್ಯಾಲಯದ ಸಭಾಂಗಣದಲ್ಲಿ ನಡೆದ ನಕ್ಷತ್ರ-೨೩ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ವಿದ್ಯಾರ್ಥಿಯನ್ನು ಸನ್ಮಾನಿಸಲಾಯಿತು. ಅಬಾಕಸ್ ತರಬೇತಿಯನ್ನು ತರಬೇತುದಾರರಾದ ದೇಚಮ್ಮ ಅವರಿಂದ ಪಡೆದಿರುತ್ತಾರೆ.