ಮಡಿಕೇರಿ, ಫೆ. ೨೭: ೧೬ನೇ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಮಾರ್ಚ್ ತಿಂಗಳ ೪ ಮತ್ತು ೫ ರಂದು ಗೋಣಿಕೊಪ್ಪಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ.
ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಮೈಸೂರಿನ ಯುವರಾಜ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕರೂ ಆಗಿರುವ ಡಾ. ಎಂ. ಪಿ. ರೇಖಾ ಅವರನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಸಮ್ಮೇಳನದ ಸ್ವಾಗತ ಸಮಿತಿಯ ಮಹಾಪ್ರಧಾನ ಕಾರ್ಯದರ್ಶಿ ಕೋಳೆರ ದಯಾ ಚಂಗಪ್ಪ, ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಹೋಬಳಿ ಗೌರವ ಕಾರ್ಯದರ್ಶಿ ಟಿ.ಬಿ. ಜೀವನ್, ಕೋಶಾಧಿಕಾರಿ ಎಂ.ಕೆ. ಚಂದನ್ ಕಾಮತ್, ಮೈಸೂರಿನ ರೇಖಾ ಅವರ ಮನೆಯಲ್ಲಿ ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ರೇಖಾ ಅವರ ಪತಿ ವಸಂತ್ ಮತ್ತು ಪುತ್ರ ಇದ್ದರು.