ನಾಪೋಕ್ಲು, ಫೆ. ೨೬: ಸಮೀಪದ ಬಲ್ಲಮಾವಟಿ ಗ್ರಾಮದ ಭಗವತಿ ಕ್ಷೇತ್ರದಲ್ಲಿ ಇಲ್ಲಿನ ಶೌರ್ಯ ತಂಡದ ಸದಸ್ಯರು ಶ್ರಮದಾನ ನಡೆಸಿದರು. ಶೌರ್ಯ ಸಂಯೋಜಕಿ ಬಾಳೆಯಡ ದಿವ್ಯ ಅವರ ನೇತೃತ್ವದಲ್ಲಿ ದೇವಸ್ಥಾನದಲ್ಲಿ ಶುಚಿತ್ವ ಕಾರ್ಯ ನಡೆಸಿದರು. ದೇವಸ್ಥಾನದ ಒಳಾಂಗಣ, ಹೊರಾಂಗಣದಲ್ಲಿ ಅಲ್ಲಲ್ಲಿ ಬಿದ್ದಿದ್ದ ಹೆಂಚು ಚೂರುಗಳು, ಟೈಲ್ಸ್ಗಳನ್ನು ತೆಗೆದು ಹೊರಹಾಕಿ, ಗುಡಿಸಿ ಸೇವಾ ಸಾರ್ಥಕತೆಯನ್ನು ಮೆರೆದರು. ಸೇವಾ ಕಾರ್ಯದಲ್ಲಿ ದಿವ್ಯ ಬಾಳೆಯಡ, ದಿಲೀಶ್ ಎನ್.ಬಿ., ಶಂಕರ್ ಬಿ.ಹೆಚ್., ಉಮಾಲಕ್ಷಿö್ಮ, ಆಶಾಲತಾ, ಚಂದ್ರಕಲಾ, ಶ್ಯಾಮಲಾ, ಗೀತಾ ರೈ, ಆಶಾ, ದಮಯಂತಿ, ರವಿ, ರಾಹುಲ್ ಭಾಗವಹಿಸಿದ್ದರು.