ವೀರಾಜಪೇಟೆ, ಫೆ. ೨೬: ತಾಲೂಕಿನ ಸೌಲಭ್ಯ ವಿಶೇಷಚೇತನರ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ವಿಶೇಷ ಸಭೆಯಲ್ಲಿ ವಿಶೇಷ ಚೇತನ ಫÀಲಾನುಭವಿಗಳಿಗೆ ಚೆಕ್ ವಿತರಣೆ ಕಾರ್ಯಕ್ರಮ ನಡೆಯಿತು.
ಫÀಲಾನುಭವಿಗಳಿಗೆ ಚೆಕ್ ವಿತರಿಸಿದ ಪ್ರಧಾನ ಕಚೇರಿಯ ಉಪಾಧ್ಯಕ್ಷೆ ಆಯಿಷಾ ಅವರು ಮಾತನಾಡಿ, ವೀರಾಜಪೇಟೆ ತಾಲೂಕಿನ ಹಾಲುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಡAಗೇರಿ ಗ್ರಾಮದ ಫÀಲಾನುಭವಿಗಳಿಗೆ ಸ್ವ ಸಹಾಯ ಗುಂಪುಗಳಲ್ಲಿ ೧೧ ಮಂದಿ ಫÀಲಾನುಭವಿಗಳಿಗೆ ಸದಸ್ಯರಿದ್ದು, ಅದರಲ್ಲಿ ೫ ಮಂದಿ ಸರಕಾರದ ಸೌಲಭ್ಯ ಪಡೆದುಕೊಳ್ಳಲು ಮುಂದಾಗಿದ್ದು, ಗುಂಪಿನ ಅಧ್ಯಕ್ಷ ಕಾಶಿಂ, ಕಾರ್ಯದರ್ಶಿ ಪಾಜೀಯ, ಅಬ್ದುಲ್ ರೆಹಮನ್, ಮುನಾವೀರ್, ಸುಬೈದ ಅವರುಗಳಿಗೆ ರೂ. ೧೦ ಸಾವಿರದಂತೆ ಒಟ್ಟು ೫೦ ಸಾವಿರ ವೈಯಕ್ತಿಕ ಸಾಲ ನೀಡಲಾಗಿದ್ದು, ಸಾಲ ಪಡೆದ ಫÀಲಾನುಭವಿಗಳಿಗೆ ಸದಸ್ಯರು ಸ್ವ ಉದ್ಯೋಗಗಳಿಗೆ ಬಳಸಿಕೊಂಡು ಅಭಿವೃದ್ಧಿ ಹೊಂದುವAತಾಗಬೇಕು ಎಂದು ಆಯಿಷಾ ಹೇಳಿದರು.
ವಿಶೇಷಚೇತನರಿಗೆ ಚೆಕ್ ವಿತರಣೆ ಸಂದರ್ಭ ವೀರಾಜಪೇಟೆ ಕಚೇರಿಯ ಸಲಹಾ ಸಮಿತಿ ಅಧ್ಯಕ್ಷ ಬಿ.ಜಿ. ಸಾಯಿನಾಥ್ ನಾಯ್ಕ್, ಸದಸ್ಯರಾದ ಬಿ.ಬಿ. ವಸಂತ, ಕಚೇರಿ ವ್ಯವಸ್ಥಾಪಕಿ ವಿ.ಕೆ. ಚೈತ್ರ, ಯೋಜನಾಧಿಕಾರಿ ಟಿ.ಯು. ವಿದ್ಯಾಶ್ರೀ, ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.