ಸೋಮವಾರಪೇಟೆ, ಫೆ. ೨೬: ಜಿಲ್ಲಾ ಕಾಂಗ್ರೆಸ್‌ನ ಇತರ ಹಿಂದುಳಿದ ವರ್ಗಗಳ ಸಮಿತಿಗೆ ಘಟಕದ ಜಿಲ್ಲಾಧ್ಯಕ್ಷ ಬಾನಂಡ ಪ್ರತ್ಯು ಅವರ ಶಿಪಾರಸ್ಸಿನ ಮೇರೆ, ರಾಜ್ಯ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರುಗಳ ಅನುಮೋದನೆಯೊಂದಿಗೆ, ನೂತನ ಪದಾಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಕಾಂಗ್ರೆಸ್ ಓಬಿಸಿ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಜಿ. ಇಂದ್ರೇಶ್ ತಿಳಿಸಿದ್ದಾರೆ.
ಘಟಕದ ಜಿಲ್ಲಾ ಸಮಿತಿಯ ಉಪಾಧ್ಯಕ್ಷರುಗಳನ್ನಾಗಿ ಸಿದ್ದಾಪುರದ ಬಿಜಾಯಿ, ಸೋಮವಾರಪೇಟೆಯ ಶಶಿಕಲಾ ಚೌಟ, ಕಾರ್ಯದರ್ಶಿಯಾಗಿ ಬಾಳೆಲೆಯ ಅಚ್ಚುತ್ತ, ಸಂಘಟನಾ ಕಾರ್ಯದರ್ಶಿಯಾಗಿ ಕೆದಕಲ್‌ನ ವೆಂಕಪ್ಪ ಪೂಜಾರಿ ಅವರುಗಳನ್ನು ನೇಮಕಗೊಳಿಸಲಾಗಿದೆ.
ಘಟಕದ ಜಿಲ್ಲಾ ಸಮಿತಿಯ ಕಾರ್ಯಕಾರಿಣಿ ಪದಾಧಿಕಾರಿಗಳನ್ನಾಗಿ ಹೆಬ್ಬಾಲೆಯ ಹೆಚ್.ಬಿ. ಗಣೇಶ್, ಗಿರೀಶ್, ಕಾಕೇರ ರವಿ, ಕೋಡಿಯಂಡ ದಿಲನ್, ಐನಂಡ ಸತೀಶ್, ಬಿಲ್ಲವರ ಧನು, ಆರ್. ಲೋಹಿತಾಶ್ವ, ಬಿ. ಬಸವರಾಜು, ಟಿ.ವಿ. ಗಣೇಶ್, ಪೆರುಮಾಳ್, ಸತೀಶ್ ಮಡಿವಾಳ, ಬೊಪ್ಪಂಡ ಬೀನಾ ಅಪ್ಪಯ್ಯ, ಎನ್. ಆರ್. ಶಿವಾಜಿ ಅವರುಗಳನ್ನು ನೇಮಕಗೊಳಿಸಲಾಗಿದೆ ಎಂದು ಇಂದ್ರೇಶ್ ತಿಳಿಸಿದ್ದಾರೆ.