ಗೋಣಿಕೊಪ್ಪ ವರದಿ, ಫೆ. ೨೬: ಮಾಯಮುಡಿ ಗ್ರಾಮದ ಕಮಟೆ ಶ್ರೀ ಮಹಾದೇವರ ವಾರ್ಷಿಕೋತ್ಸವ ಮಾರ್ಚ್ ೩ ರಿಂದ ಮಾ. ೭ ರವರೆಗೆ ಆಚರಿಸಲಾಗುತ್ತದೆ.

ಮಾರ್ಚ್ ೭ ರಂದು ಮಧ್ಯಾಹ್ನ ೧೨ ಗಂಟೆಗೆ ಮಹಾಪೂಜೆ, ಸಾಯಂಕಾಲ ೬ ಗಂಟೆಗೆ ದೇವರ ದರ್ಶನ, ಅಭ್ಯಂಜನ ಮತ್ತು ದೇವರ ನೃತ್ಯ ಪ್ರದಕ್ಷಿಣೆ ನಡೆಯಲಿದೆ. ವಸಂತ ಪೂಜೆ, ವಿಷ್ಣುಮೂರ್ತಿ ಪೂಜೆ, ಗುಳಿಗ ಪೂಜೆ ನಡೆಯಲಿದೆ.

ಮಾ. ೩ ರಂದು ಸಂಜೆ ೭ ಗಂಟೆಗೆ ಕೊಡಿಮರ ನಿಲ್ಲಿಸುವುದು, ಮಾ. ೪ ರಂದು ಬೆಳಿಗ್ಗೆ ೧೧ ಗಂಟೆಗೆ ಗಣಪತಿಗೆ ಪಂಚ ಕಜ್ಜಾಯ, ಈಶ್ವರನಿಗೆ ಬಿಲ್ವಪತ್ರಾರ್ಚನೆ, ಮಾ. ೫ ರಂದು ಬೆ. ೧೧ ಗಂಟೆಗೆ ಈಶ್ವರನಿಗೆ ಕ್ಷೀರಾಭಿಷೇಕ, ಮ. ೬ ರಂದು ಬೆ. ೧೧ ಗಂಟೆಗೆ ಸುಬ್ರಹ್ಮಣ್ಯನಿಗೆ ಕ್ಷೀರಾಭಿಷೇಕ, ಈಶ್ವರನಿಗೆ ಅಲಂಕಾರ ಪೂಜೆ, ಸಾಯಂಕಾಲ ೬ ಗಂಟೆಗೆ ನೆರ್ಪು ನಡೆಯಲಿದೆ. ಹಬ್ಬದ ೪ ದಿನ ಮಂಗಳಾರತಿ, ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ಅನ್ನದಾನ, ಗುಡಿಗಲಿಗೆ ಸಾಮೂಹಿಕ ಅಲಂಕಾರ, ತೂಚಂಬಲಿ ಪೂಜೆ ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.