ಮಡಿಕೇರಿ, ಫೆ. ೨೬: ಸಿರಿಗನ್ನಡ ವೇದಿಕೆ ಕೊಡಗು ಹಾಗೂ ಮಹಿಳಾ ಘಟಕ ಮತ್ತು ಮಡಿಕೇರಿ ತಾಲೂಕು ಮಹಿಳಾ ಘಟಕದ ವತಿಯಿಂದ ಮಹಾಶಿವರಾತ್ರಿ ಅಂಗವಾಗಿ ಏರ್ಪಡಿಸಲಾಗಿದ್ದ ಶಿವನ ಕುರಿತಾದ ಕವನ ಸ್ಪರ್ಧೆಯಲ್ಲಿ ಮೂರ್ನಾಡು ಕೊಡಂಬೂರುವಿನ ರಮ್ಯ ಕೆ.ಜಿ. ಪ್ರಥಮ, ಸೋಮವಾರಪೇಟೆಯ ಎಲಿಜಬೆತ್ ಲೋಬೋ ದ್ವಿತೀಯ, ಮಡಿಕೇರಿಯ ಬಿ.ಜಿ. ಅನಂತಶಯನ ತೃತೀಯ ಹಾಗೂ ಮಡಿಕೇರಿಯ ಶೋಭಾ ರಕ್ಷಿತ್, ಹುದಿಕೇರಿಯ ಚೆಕ್ಕೇರ ತ್ಯಾಗರಾಜ್ ಅಪ್ಪಯ್ಯ, ಬೋಯಿಕೇರಿಯ ಪಿ.ಎಸ್. ವೈಲೇಶ್ ನಾಲ್ಕನೇ ಬಹುಮಾನ ಪಡೆದುಕೊಂಡಿದ್ದಾರೆ.
ವೇದಿಕೆ ವತಿಯಿಂದ ಏರ್ಪಡಿಸಲಾಗುವ ಸಮಾರಂಭದಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಕವನ ವಾಚನ ಮಾಡಲು ಅವಕಾಶ ನೀಡುವದಲ್ಲದೆ, ಪ್ರಶಂಸನಾ ಪತ್ರ ಹಾಗೂ ವಿಜೇತರಿಗೆ ಬಹುಮಾನ ನೀಡಲಾಗುವದೆಂದು ವೇದಿಕೆ ಅಧ್ಯಕ್ಷ ಅಲ್ಲಾರಂಡ ವಿಠಲ ನಂಜಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಉಳುವಂಗಡ ಕಾವೇರಿ ಉದಯ, ಮಡಿಕೇರಿ ತಾಲೂಕು ಅಧ್ಯಕ್ಷೆ ಈರಮಂಡ ಹರಿಣಿ ವಿಜಯ್ ಅವರುಗಳು ತಿಳಿಸಿದ್ದಾರೆ.