ಚೆಟ್ಟಳ್ಳಿ, ಫೆ. ೨೬: ಚೆಟ್ಟಳ್ಳಿ ಸಮೀಪದ ಕಂಡಕೆರೆಯಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ನಡೆಯಿತು. ಬಳಿಕ ಮಾತನಾಡಿದ ಜೆಡಿಎಸ್ ಪ್ರಮುಖ ನಾಪಂಡ ಮುತ್ತಪ್ಪ, ಜಿಲ್ಲೆಯ ಮತದಾರರು ಬದಲಾವಣೆ ಬಯಸಿದ್ದಾರೆ. ಜಾತಿ, ಧರ್ಮಗಳ ನಡುವೆ ಒಡಕು ಮೂಡಿಸುವ ರಾಜಕೀಯದಿಂದ ಜನರು ಬೇಸತ್ತಿದ್ದಾರೆ. ಜಿಲ್ಲೆಯಲ್ಲಿ ಕಳೆದ ಎರಡು ದಶಕಗಳಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಸಂಪೂರ್ಣವಾಗಿ ಕೊಡಗು ಜಿಲ್ಲೆಯನ್ನು ಕಡೆಗಣಿಸಲಾಗಿದೆ. ಈ ಬಾರಿ ಜೆಡಿಎಸ್ ಪಕ್ಷಕ್ಕೆ ಬೆಂಬಲ ವ್ಯಕ್ತವಾಗುತ್ತಿದ್ದು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಯಾ ಗುತ್ತಿದ್ದಾರೆ. ಮಡಿಕೇರಿ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸಾಧಿಸಲಿದೆ ಎಂದು ಹೇಳಿದರು. ಕಂಡಕರೆ ಗ್ರಾಮದಲ್ಲಿ ಇದುವರೆಗೆ ನೆಟ್‌ವರ್ಕ್ ಭಾಗ್ಯ ದೊರೆತಿಲ್ಲ ಹಾಗೂ ಯುವಕರಿಗೆ ಆಟ ಆಡಲು ಮೈದಾನವಿಲ್ಲ ಇದರ ಬಗ್ಗೆ ಜನಪ್ರತಿನಿಧಿಗಳು ಕಾಳಜಿ ವಹಿಸುತ್ತಿಲ್ಲ. ಇದರ ಬಗ್ಗೆ ತಾವು ಮುತುರ್ವಜಿ ವಹಿಸಿ ಸಮಸ್ಯೆ ಬಗೆಹರಿಸಿ ಕೊಡಬೇಕಾಗಿ ಅವರ ನೇತೃತ್ವದ ಯುವಕರ ತಂಡ ಮುತ್ತಪ್ಪನವರ ಗಮನಕ್ಕೆ ತಂದರು. ಸಮಸ್ಯೆಯನ್ನು ಬಗೆಹರಿಸುವುದಾಗಿ ನಾಪಂಡ ಮುತ್ತಪ್ಪ ಭರವಸೆ ನೀಡಿದರು.

ಈ ಸಂದರ್ಭ ಜೆಡಿಎಸ್ ಯುವ ಘಟಕದ ಪದಾಧಿಕಾರಿಗಳಾದ ವಿಜಯ್, ಶಿಯಬ್ ವಿಪಿಎಸ್ ನೆಲ್ಲಿಹುದಿಕೇರಿ, ಮಂಜು, ಶೈಜು, ಸುಹೈಲ್, ಷರೀಪ್, ಅಶ್ರಫ್, ಉನೈಸ್, ಸವಾದ್, ಇರ್ಷಾದ್, ಶಿಬಿಲ್, ಸಲ್ಮಾನ್, ಶುಕ್ಕೂರ್, ಗಾಂಧಿ ಯುವಕ ಸಂಘದ ಅಧ್ಯಕ್ಷ ಷರೀಫ್ ಪಿ.ಎಂ. ಹಾಗೂ ೫೦ಕ್ಕೂ ಹೆಚ್ಚು ಯುವಕರು ಇದ್ದರು.