ಮಡಿಕೇರಿ, ಫೆ. ೨೫: ಕೊಡಗಿನ ಜನತೆಗೆ ಯೋಗ್ಯ ಆರೋಗ್ಯ ಸೇವೆಯನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಕೊಡಗು ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆಯ ಅಗತ್ಯತೆ ಇದೆ ಎಂದು ಕೆಪಿಸಿಸಿ ಪ್ರಮುಖರು ಹಾಗೂ ರಾಜ್ಯ ಉಚ್ಚ ನ್ಯಾಯಾಲಯದ ನಿಕಟಪೂರ್ವ ಸರ್ಕಾರಿ ಅಭಿಯೋಜಕ ಹೆಚ್.ಎಸ್. ಚಂದ್ರಮೌಳಿ ಅಭಿಪ್ರಾಯಿಸಿದರು.

ಕೊಡಗು ಪತ್ರಕರ್ತರ ಸಂಘದ ಕ್ಷೇಮಾಭಿವೃದ್ಧಿ ಸಮಿತಿ ವತಿಯಿಂದ ಮಡಿಕೇರಿ ಲಯನ್ಸ್ ಕ್ಲಬ್ ಹಾಗೂ ಮೈಸೂರಿನ ಸುಯೋಗ್ ಆಸ್ಪತ್ರೆ ಸಹಯೋಗದಲ್ಲಿ ಪತ್ರಕರ್ತರು ಹಾಗೂ ಪತ್ರಕರ್ತರ ಕುಟುಂಬದವರು ಮತ್ತು ಸಾರ್ವಜನಿಕರಿಗಾಗಿ ನಗರದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ

(ಮೊದಲ ಪುಟದಿಂದ) ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆರೋಗ್ಯ ಕ್ಷೇತ್ರದಲ್ಲಿ ಕೊಡಗು ಸಾಕಷ್ಟು ಹಿಂದುಳಿದಿದೆ. ಹಲವಾರು ಸಂಕಷ್ಟಕರ ಸಂದರ್ಭಗಳಲ್ಲಿ ಅಗತ್ಯ ಚಿಕಿತ್ಸೆ ಸ್ಥಳೀಯವಾಗಿ ದೊರಕದೆ, ಹೊರ ಜಿಲ್ಲೆಗಳಿಗೆ ರೋಗಿಗಳನ್ನು ಕರೆದೊಯ್ಯಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆಯೆಂದು ಬೇಸರ ವ್ಯಕ್ತಪಡಿಸಿದ ಅವರು, ಸ್ವಾಸ್ಥö್ಯ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬ ನಾಗರಿಕರು ಆರೋಗ್ಯಯುತವಾಗಿರುವುದು ಅತ್ಯವಶ್ಯವೆಂದು ಪ್ರತಿಪಾದಿಸಿದರು.

ಕೋವಿಡ್ ಸಾಂಕ್ರಾಮಿಕದ ಆರಂಭಿಕ ಹಂತದಲ್ಲಿ ಕನಿಷ್ಟ ಪ್ರಾಥಮಿಕ ಹಂತದ ಚಿಕಿತ್ಸೆಯೂ ಜಿಲ್ಲೆಯಲ್ಲಿ ದೊರಕದಂತಹ ಪರಿಸ್ಥಿತಿ ಇತ್ತು. ಆ ಸಂದರ್ಭ ಸಂಘ ಸಂಸ್ಥೆಗಳು ಸಂಕಷ್ಟದಲ್ಲಿರುವವರಿಗೆ ನೆರವನ್ನು ಒದಗಿಸಲು ಕೈಜೋಡಿಸುವ ಮೂಲಕ ಮಹತ್ತರ ಕಾರ್ಯವೆಸಗಿದ್ದಾರೆಂದು ಉದಾಹರಿಸಿ, ಸಮಾಜದ ಪ್ರತಿಯೊಬ್ಬರೂ ಅವಕಾಶ ದೊರೆತಾಗ ಇಂತಹ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಕೊಡಗು ಪತ್ರಕರ್ತರ ಸಂಘÀದ ಕ್ಷೇಮಾಭಿವೃದ್ಧಿ ಸಮಿತಿ ಆರೋಗ್ಯ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ. ಆರೋಗ್ಯ ಕಾರ್ಯಕ್ರಮಗಳಿಗೆ ತನ್ನಿಂದಾದ ನೆರವನ್ನು ಸದಾ ಒದಗಿಸುವುದಾಗಿ ಭರವಸೆ ನೀಡಿದರು.

ವಿಧಾನ ಪÀರಿಷತ್ ಮಾಜಿ ಸದಸ್ಯ ಮಂಡೇಪAಡ ಸುನಿಲ್ ಸುಬ್ರಮಣಿ ಮಾತನಾಡಿ, ಪ್ರಸ್ತುತ ವ್ಯವಸ್ಥೆಯಡಿ ಪ್ರತಿಯೊಬ್ಬರೂ ಒಂದಲ್ಲ ಒಂದು ಒತ್ತಡಗಳಲ್ಲಿ ಸಿಲುಕಿರುತ್ತಾರೆ. ಸಮಾಜದ ಡೊಂಕನ್ನು ತಿದ್ದಿ ಸರಿದಾರಿಗೆ ತರುವ ಕಾರ್ಯದಲ್ಲಿ ಮಗ್ನರಾಗಿರುವ ಪತ್ರಕರ್ತರು ಒತ್ತಡದಲ್ಲಿ ಕಾರ್ಯನಿರ್ವಹಿಸಬೇಕಿದೆ. ಇವುಗಳ ನಡುವೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಂತ ಪ್ರಮುಖವಾಗುತ್ತದೆ. ವೈಯಕ್ತಿಕವಾಗಿ ನಮ್ಮ ಆರೋಗ್ಯ ಮತ್ತು ಕುಟುಂಬದ ಆರೋಗ್ಯದೊಂದಿಗೆ ಸಮಾಜದ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಇಂತಹ ಶಿಬಿರಗಳು ಅತ್ಯಂತ ಅವಶ್ಯಕವಾಗಿದೆಯೆಂದು ಅಭಿಪ್ರಾಯಿಸಿದರು.

ಮಡಿಕೆೆÃರಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಕನ್ನಂಡ ಕವಿತಾ ಮಾತನಾಡಿ, ಸಮಾಜ ಸೇವೆಯೆ ಲಯನ್ಸ್ ಸಂಸ್ಥೆಯ ಮುಖ್ಯ ಧ್ಯೇಯವಾಗಿದೆ. ಇಂದು ಕೊಡಗು ಪತ್ರಕರ್ತರ ಸಂಘದ ಕ್ಷೇಮಾಭಿವೃದ್ಧಿ ಸಂಘದಿAದ ಆರೋಗ್ಯ ಶಿಬಿರವನ್ನು ಆಯೋಜಿಸಿರುವುದು ಸ್ತುತ್ಯಾರ್ಹ. ಎಲ್ಲಾ ಸಂಘ ಸಂಸ್ಥೆಗಳು ವಾರ್ಷಿಕವಾಗಿ ಇಂತಹ ಎರಡರಿಂದ ಮೂರು ಶಿಬಿರಗಳನ್ನು ಆಯೋಜಿಸಿದಲ್ಲಿ ಸಾರ್ವಜನಿಕರು ಚಿಕಿತ್ಸಾ ಸೌಲಭ್ಯ ಪಡೆದು ಆರೋಗ್ಯ ಸಂರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಆರೋಗ್ಯದ ಬಗೆಗಿನ ಕಾಳಜಿ ಪ್ರತಿಯೊಬ್ಬರಿಗೂ ಇರಬೇಕೆಂದು ತಿಳಿಸಿದರು.

ಲಯನ್ಸ್ ಪದಾಧಿಕಾರಿ ಹಾಗೂ ಉದ್ಯಮಿ ಅಂಬೆಕಲ್ ನವೀನ್ ಮಾತನಾಡಿ, ಆರೋಗ್ಯ ಸಂರಕ್ಷಣೆ ಪ್ರತಿಯೊಬ್ಬರಿಗೂ ಅತ್ಯವಶ್ಯ. ಕನಿಷ್ಟ ಆರು ತಿಂಗಳಿಗೊಮ್ಮೆಯಾದರೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದೆಂದರು. ಸುಯೋಗ್ ಆಸ್ಪತ್ರೆಯ ಜನರಲ್ ಸರ್ಜನ್ ಡಾ.ಪೊನ್ನಪ್ಪ, ಪ್ರತಿಯೊಬ್ಬರೂ ರೋಗಬಾಧೆಗೆ ಒಳಗಾಗುವುದಕ್ಕೂ ಮುನ್ನವೆ, ಆರೋಗ್ಯವಂತರಾಗಿರುವುದರತ್ತ ಹೆಚ್ಚಿನ ಕಾಳಜಿ ವಹಿಸಬೇಕೆಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ. ಮುರಳೀಧರ್ ಪ್ರಾಸ್ತಾವಿಕವಾಗಿ ಮಾತನಾಡಿ, ಆರಂಭಿಕ ಹಂತದಲ್ಲೇ ರೋಗ ಪತ್ತೆಗೆ ಆರೋಗ್ಯ ಶಿಬಿರಗಳು ಅತ್ಯಂತ ಸಹಕಾರಿಯಾಗಿದೆಯೆಂದು ತಿಳಿಸಿ, ಈ ಉಚಿತ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು ಔಷಧಿಯ ಅಗತ್ಯವಿರುವವರಿಗೆ ಶೇ.೫೦ ರ ರಿಯಾಯಿತಿ ದರದಲ್ಲಿ ಔಷಧಿಗಳನ್ನು ತಮ್ಮ ‘ವಿನೋದ್ ಮೆಡಿಕಲ್ಸ್’ನಲ್ಲಿ ಒದಗಿಸುವುದಾಗಿ ಔಷಧಿ ಮಾರಾಟಗಾರರ ಸಂಘದ ಪ್ರಮುಖರಾದ ಅಂಬೆಕಲ್ ಜೀವನ್ ತಿಳಿಸಿದ್ದಾರೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದರು. ಸಂಘದ ಪತ್ರಕರ್ತ ಸದಸ್ಯರಿಗೆಲ್ಲ ಆರೋಗ್ಯ ಕಾರ್ಡ್ ಒದಗಿಸುವ ಮೂಲಕ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿ ರಿಯಾಯಿತಿ ನೀಡುವ ಸೌÀಲಭ್ಯ ದೊರಕುವಂತಾಗಬೇಕೆನ್ನುವ ಆಶಯ ವ್ಯಕ್ತಪಡಿಸಿದರು.

ಸಭಾಧ್ಯಕ್ಷತೆಯನ್ನು ಕೊಡಗು ಪತ್ರಕರ್ತರ ಸಂಘದ ಕ್ಷೇಮಾಭಿವೃದ್ಧಿ ಸಮಿತಿಯ ಅಧ್ಯಕ್ಷ ಹೆಚ್.ಆರ್. ಹರೀಶ್ ಕುಮಾರ್ ವಹಿಸಿದ್ದರು. ವೇದಿಕೆಯಲ್ಲಿ ಸುಯೋಗ್ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಭರತ್, ಸ್ತಿçÃರೋಗ ತಜ್ಞೆ ಡಾ. ಅಂಜು, ಸಂಘÀದ ಉಪಾಧ್ಯಕ್ಷ ಜಿ.ವಿ. ರವಿಕುಮಾರ್ ಉಪಸ್ಥಿತರಿದ್ದರು.

ಮೌಲ್ಯ ಬಜೆÀಕೋಡಿ ಪ್ರಾರ್ಥಿಸಿದರೆ, ಸಂಘದ ಪ್ರಧಾನ ಕಾರ್ಯದರ್ಶಿ ಉಜ್ವಲ್ ರಂಜಿತ್ ಸ್ವಾಗತಿಸಿದರು. ಸದಸ್ಯ ರಂಜಿತ್ ಕವಲಪಾರ ನಿರೂಪಿಸಿದರು. ಕ್ಷೇಮಾಭಿವೃದ್ಧಿ ಸಮಿತಿಯ ಖಜಾಂಚಿ ಕೆ. ತಿಮ್ಮಪ್ಪ ವಂದಿಸಿದರು. ಶಿಬಿರದಲ್ಲಿ ಪತ್ರಕರ್ತರು, ಸಾರ್ವಜನಿಕರು ಸೇರಿದಂತೆ ೧೫೦ಕ್ಕೂ ಅಧಿಕ ಮಂದಿ ತಪಾಸಣೆ ಹಾಗೂ ಚಿಕಿತ್ಸೆ ಪಡೆದುಕೊಂಡರು. ರಕ್ತ, ಮಧುಮೇಹ ಪರೀಕ್ಷೆ, ಹೃದ್ರೋಗ, ಸ್ತಿçÃರೋಗ, ವೈದ್ಯಕೀಯ ತಪಾಸಣೆ, ಇಸಿಜಿ, ಇಕೋ ಚಿಕಿತ್ಸಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು. ಅವಶ್ಯವೆನಿಸಿದವರಿಗೆ ರಿಯಾಯಿತಿ ದರದಲ್ಲಿ ಔಷಧಿ ವಿತರಣೆ ಮಾಡಲಾಯಿತು.