ಕೂಡಿಗೆ, ಫೆ. ೨೫: ರಾಜ್ಯ ಸರಕಾರ ಹಾಗೂ ಕೃಷಿ ಇಲಾಖೆಯ ವತಿಯಿಂದ ವರ್ಷಂಪ್ರತಿ ನೀಡುವ ರಾಜ್ಯ ಮಟ್ಟದ ಕೃಷಿ ಪ್ರಶಸ್ತಿಯನ್ನು ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದ ಟಿ.ಜೆ. ಕಾಳಪ್ಪ ಪಡೆದುಕೊಂಡಿದ್ದಾರೆ. ಟಿ.ಜೆ. ಕಾಳಪ್ಪ ಕಳೆದ ೪೨ ವರ್ಷಗಳಿಂದ ಪ್ರಗತಿಪರ ರೈತನಾಗಿ ತನ್ನ ಜಮೀನಿನಲ್ಲಿ ಭತ್ತ, ಶುಂಠಿ, ಕಾಫಿ ಬೆಳೆಯುತ್ತಿದ್ದಾರೆ. ಉತ್ತಮವಾಗಿ ಭತ್ತ ಬೆಳೆದು ಅಧಿಕ ಇಳುವರಿ ಸಾಧಿಸಿದ ಹಿನ್ನೆಲೆ ಕೃಷಿ ಇಲಾಖೆಯ ಶಿಫಾರಸಿನಿಂದ ಪ್ರಶಸ್ತಿ ಲಭಿಸಿದೆ.

ಕಾಳಪ್ಪಗೆ ರಾಜ್ಯ ಕೃಷಿ ಪ್ರಶಸ್ತಿ

(ಮೊದಲ ಪುಟದಿಂದ) ಧಾರಾವಾಡ ಕೃಷಿ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮತ್ತು ಕೃಷಿ ಸಚಿವ ಬಿ.ಸಿ. ಪಾಟೀಲ್, ಸೇರಿದಂತೆ ರಾಜ್ಯ ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.