ಮಡಿಕೇರಿ, ಫೆ. ೨೫: ಕೊಟ್ಟ ಮುಡಿಯ ಉದ್ಯಮಿ ಯೋರ್ವರನ್ನು ಕೊಲೆಗೈದ ಘಟನೆಗೆ ಸಂಬAಧಿಸಿ ದಂತೆ ಶಿಕ್ಷೆ ಅನುಭವಿಸುತ್ತಿದ್ದ ಅಪರಾಧಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೆ.ಆರ್.ನಗರದಲ್ಲಿ ನಡೆದಿದೆ.

ಮೂಲತಃ ಮೂರ್ನಾಡಿನ ಕೆ.ಆರ್.ನಗರದ ಉಪಬಂದಿ

ಖಾನೆಯಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಹಮೀದ್ (೩೫) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ೨೦೨೧ ಮಾರ್ಚ್ ೨೯ ರಂದು ಕೊಟ್ಟಮುಡಿಯ ಅಡಿಕೆ ವ್ಯಾಪಾರಿ ಹ್ಯಾರೀಸ್ ಎಂಬವರನ್ನು ಪಿರಿಯಾಪಟ್ಟಣದ

ಅಡಿಕೆ ಶೆಡ್ ವೊಂದರಲ್ಲಿ ಹಣದ ವಿಚಾರಕ್ಕೆ ಹಮೀದ್ ಕೊಲೆಗೈದು ಬಂಧನಕ್ಕೊಳಪಟ್ಟು ಬಳಿಕ ಹುಣಸೂರು ನ್ಯಾಯಾಲಯದಲ್ಲಿ

ವಿಚಾರಣೆ ನಡೆದು ಕೆ.ಆರ್.ನಗರದ

(ಮೊದಲ ಪುಟದಿಂದ) ಜೈಲಿಗೆ ಸ್ಥಳಾಂತರಿಸಿ ಶಿಕ್ಷೆ ಅನುಭವಿಸುತ್ತಿದ್ದರು.

ತಾ. ೨೪ ರಂದು ಬಂದಿಖಾನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಬಳಿಕ ಮೃತನ ಮರಣೋತ್ತರ ಪರೀಕ್ಷೆ ನಡೆಸಿ ಮೂರ್ನಾಡಿಗೆ ಮೃತದೇಹವನ್ನು ರವಾನಿಸಲಾಗಿದೆ.