ಸುಂಟಿಕೊಪ್ಪ, ಫೆ. ೨೫: ೭ನೇ ಹೊಸಕೋಟೆ ಗ್ರಾಮ ಪಂಚಾಯಿತಿಗೆ ಸೇರಿದ ಅಂದಗೋವೆ ಮೆಟ್ನಳ್ಳ ಗ್ರಾಮದ ಅಮ್ಮನವರು, ಭೈರವೇಶ್ವರ, ಪಾಷಾಣ ಮೂರ್ತಿ ಮತ್ತು ಪರಿವಾರ ದೇವತೆಗಳ ಸನ್ನಿದಾನದ ಪ್ರಥಮ ವರ್ಷದ ನೇಮೋತ್ಸವ ಮಾ. ೧೦ ಮತ್ತು ೧೧ ರಂದು ನಡೆಯಲಿದೆ. ಮಾ. ೧೦ ರಂದು ಸಂಜೆ ೬ ಗಂಟೆಗೆ ಭಂಡಾರ ಇಳಿಸುವುದು, ರಾತ್ರಿ ೮ ಗಂಟೆಗೆ ಪಂಜುರ್ಲಿ ದೈವದ ನೇಮ, ೧೦ ಗಂಟೆಯಿAದ ಕಲ್ಕುಡ ಮತ್ತು ಪಾಷಾಣ ಮೂರ್ತಿ ದೈವಗಳ ನೇಮ, ಮಂತ್ರ ದೇವತೆ, ಮೈಯಾಂತಿ, ರಾಹುಗುಳಿಗ ದೈವಗಳ ನೇಮೋತ್ಸವ ನಡೆಯಲಿದೆ. ರಾತ್ರಿ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಮಾ. ೧೧ ರಂದು ಬೆಳಿಗ್ಗೆ ೮.೩೦ಕ್ಕೆ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವಗಳು ನಡೆಯಲಿವೆ.