ಮಡಿಕೇರಿ, ಫೆ. ೨೫: ಅಮ್ಮತ್ತಿ ಗ್ರಾಮದ ಪೊಲೀಸ್ ಪೇದೆ ವೆಂಕಟೇಶ್ ಅವರ ಮನೆಯ ಅಂಗಳದಲ್ಲಿ ನಾಗರಹಾವು ಸೇರಿಕೊಂಡಿದ್ದು, ಕೂಡಲೇ ವೆಂಕಟೇಶ್ ಅವರು ಅಮ್ಮತ್ತಿ ಗ್ರಾಮದ ಉರಗ ರಕ್ಷಕ ರೋಷನ್ ಅವರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದರು. ರೋಷನ್ ಅವರು ಸ್ಥಳಕ್ಕೆ ಆಗಮಿಸಿ ಸುರಕ್ಷಿತವಾಗಿ ಹಾವನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾದರು. ಈಗಾಗಲೇ ರೋಷನ್ ಅವರು ಎರಡು ಸಾವಿರಕ್ಕಿಂತಲೂ ಅಧಿಕ ಹಾವುಗಳನ್ನು ರಕ್ಷಣೆ ಮಾಡಿ ಮಾಲ್ದಾರೆ ಅರಣ್ಯಕ್ಕೆ ಬಿಟ್ಟಿದ್ದಾರೆ. ಹಾವುಗಳು ಕಂಡುಬAದಲ್ಲಿ ರೋಷನ್ ಅವರ ಮೊಬೈಲ್ ಸಂಖ್ಯೆ ೭೦೨೨೩೭೩೯೨೧ ಅನ್ನು ಸಂಪರ್ಕಿಸಬಹುದು.