ಸುಂಟಿಕೊಪ್ಪ, ಫೆ. ೨೩: ಸುಂಟಿಕೊಪ್ಪ ಬಿಜೆಪಿಯ ೨ ಶಕ್ತಿ ಕೇಂದ್ರಗಳ ವತಿಯಿಂದ ವಿಜಯ ಸಂಕಲ್ಪ ಅಭಿಯಾನವನ್ನು ಕನ್ನಡ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಧ್ವಜ ಹಿಡಿದು ರಾಷ್ಟç ಹಾಗೂ ರಾಜ್ಯ ನಾಯಕರುಗಳಿಗೆ ಜೈಕಾರ ಮೊಳಗಿಸುವ ಮೂಲಕ ಹಮ್ಮಿಕೊಂಡರು. ಈ ಸಂದರ್ಭ ಗ್ರಾ.ಪಂ. ಬಿಜೆಪಿ ಬೆಂಬಲಿತ ಸದಸ್ಯರುಗಳಾದ ಪಿ.ಆರ್. ಸುನಿಲ್ ಕುಮಾರ್, ವಸಂತಿ, ಗೀತಾ, ಬಿಜೆಪಿ ಯುವ ಮೋರ್ಚಾ ಅಧÀ್ಯಕ್ಷ ವಿಘ್ನೇಶ್ ಹಾಗೂ ಬಿಜೆಪಿ ಕಾರ್ಯಕರ್ತರು ಇದ್ದರು.