ಕೊಯನಾಡು: ಕೊಯನಾಡು ಶ್ರೀ ಮಹಾಗಣಪತಿ ದೇವಸ್ಥಾನ ಮತ್ತು ಶ್ರೀ ಗಣೇಶ್ ಯುವ ಬಳಗÀ ಆಶ್ರಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಕ್ರೀಡೋತ್ಸವ ಹಾಗೂ ಸನ್ಮಾನ ಕಾರ್ಯಕ್ರಮವು ಶ್ರೀ ಮಹಾಗಣಪತಿ ದೇವಸ್ಥಾನದ ವಠಾರದಲ್ಲಿ ನಡೆಯಿತು. ಸಮಾರಂಭದ ಮೊದಲ ಹಂತವಾಗಿ ಮಹಾಶಿವರಾತ್ರಿ ದಿನ ಧ್ವಜಾರೋಹಣವನ್ನು ಶ್ರೀ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷ ಪಿ.ಡಿ. ವಿಶ್ವನಾಥ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಉಪಾಧ್ಯಕ್ಷ ಲೋಕಯ್ಯ ನಡುಬೆಟ್ಟು, ಶ್ರೀ ಗಣೇಶ ಯುವ ಬಳಗದ ಉಪಾಧ್ಯಕ್ಷ ಜಯಂತ ಪೆಲತಡ್ಕ ಉಪಸ್ಥಿತರಿದ್ದರು.

ನಂತರ ಸಾರ್ವಜನಿಕರಿಗಾಗಿ ವಿವಿಧ ಆಟೋಟ ಸ್ಪರ್ಧೆಗಳು ನಡೆದವು. ಸಂಜೆ ೭.೩೦ಕ್ಕೆ ಸಭಾ ಕಾರ್ಯಕ್ರಮ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಪಿ.ಡಿ. ವಿಶ್ವನಾಥ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಕ ದಾಮೋದರ, ಉಪನ್ಯಾಸಕಿ ಲೋಕ್ಯಾ ನಾಯ್ಕ ಬಿ., ಶ್ರೀ ಗಣೇಶ ಯುವ ಬಳಗದ ಅಧ್ಯಕ್ಷ ಕೃಷ್ಣ ಹಾಗೂ ಇತರರು ಇದ್ದರು.

ಸಮಾರಂಭದಲ್ಲಿ ಸಮಾಜ ಸೇವೆ ಮತ್ತು ಧಾರ್ಮಿಕ ಸೇವೆಗಾಗಿ ಉಲ್ಲಾಸ ಕೇನಾಜೆ, ಕೃಷಿ ವಿಜ್ಞಾನಿ ಪಿ.ಎಚ್.ಡಿ ಪದವಿ ಪುರಸ್ಕೃತೆ ಸುಪ್ರೀತ ಗಣಪತಿ ಬಲ್ಯಮನೆ ಹಾಗೂ ಎಸ್.ಎಸ್.ಎಲ್.ಸಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿ ನಿಖಿಲ್ ತೀರ್ಥಪ್ರಸಾದ್ ಕೋಲ್ಚಾರ್ ಅವರುಗಳನ್ನು ಸನ್ಮಾನಿಸಲಾಯಿತು. ನಂತರ ಸಾರ್ವಜನಿಕರಿಗಾಗಿ ಆಯೋಜಿಸಿದ್ದ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಸಮಾರಂಭದಲ್ಲಿ ಸ್ಥಳೀಯರಾದ ಪಿ.ಪಿ. ಜಗದೀಶ ಮತ್ತು ಯಶೋಧರ ಬಿ.ಜೆ. ನಿರೂಪಿಸಿ, ಬಾಲಕೃಷ್ಣ ಕೊಯನಾಡು ಸ್ವಾಗತಿಸಿದರು. ಭಕ್ತಾದಿಗಳಿಗೆ ಅನ್ನದಾನದ ನಂತರ ವಿವಿಧ ತಂಡಗಳಿAದ ಭಜನಾ ಕಾರ್ಯಕ್ರಮ ನಡೆದು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಹೊದ್ದೂರು ಶ್ರೀ ಮಹಾದೇವರ ಸನ್ನಿಧಿ

ಹೊದ್ದೂರು: ಹೊದ್ದೂರು ಶ್ರೀ ಮಹಾದೇವರ ದೇಗುಲದಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆಗಳು ನಡೆದವು. ಅರ್ಚಕರಾದ ಶ್ರೀಕಾಂತ್ ಭಟ್ಟರ ಸಮ್ಮುಖದಲ್ಲಿ ರುದ್ರಾಭಿಷೇಕ, ಕಲಶಾಭಿಷೇಕ, ಜಲಾಭಿಷೇಕದ ಬಳಿಕ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗದೊಂದಿಗೆ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಸಲಾಯಿತು. ನಾಡ್ ತಕ್ಕರಾದ ನೆರವಂಡ ಸಂಜಯ್ ಪೂಣಚ್ಚ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.ಪಂಚಲಿAಗೇಶ್ವರ ದೇವಸ್ಥಾನ

ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ಅತ್ತೂರು ಗ್ರಾಮದ ಶ್ರೀ ಪಂಚಲಿAಗೇಶ್ವರ ದೇವಸ್ಥಾನದಲ್ಲಿ ಮೂರು ದಿನಗಳ ಕಾಲ ಶಿವರಾತ್ರಿ ಉತ್ಸವವನ್ನು ವಿಜೃಂಭಣೆಯಿAದ ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಗುಡ್ಡೆಹೊಸೂರು, ಕುಶಾಲನಗರ ಮತ್ತು ಸುತ್ತಮುತ್ತಲಿನ ಸಾವಿರಾರು ಮಂದಿ ಭಕ್ತರು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು. ಇತ್ತೀಚಿನ ವರ್ಷಗಳಲ್ಲಿ ಜೀರ್ಣೋ ದ್ಧಾರಗೊಂಡ ಪಂಚ ಲಿಂಗೇಶ್ವರ ದೇವಸ್ಥಾನಕ್ಕೆ ಭಕ್ತರ ದಂಡು ಹರಿದು ಬರುತ್ತಿದೆ. ಅಲ್ಲದೆ ಗ್ರಾಮಸ್ಥರ ಸಹಕಾರದಲ್ಲಿ ಸುಂದರವಾಗಿ ದೇವಾ ಲಯ ನಿರ್ಮಿಸಲಾಗಿದೆ. ಅರಣ್ಯದ ಮಧ್ಯಭಾಗ ದಲ್ಲಿರುವ ಈ ದೇವಸ್ಥಾನದಲ್ಲಿ ಪ್ರತಿಷ್ಠಾ ಪಿಸಿದ ಶಿವಲಿಂಗವು ಅಲ್ಲಿಯ ಸನಿಹದಲ್ಲಿ ಭಾರೀ ಆಳದಲ್ಲಿ ಮಣ್ಣಿನ ತಳಭಾಗದಲ್ಲಿ ಪತ್ತೆಯಾಗಿತ್ತು. ಗ್ರಾಮಸ್ಥರ ಸಹಕಾರದಿಂದ ದೇವಸ್ಥಾನ ಬಹು ವಿಶಿಷ್ಟ ರೀತಿಯಲ್ಲಿ ನಿರ್ಮಾಣವಾಗಿದೆ. ಗುಡ್ಡೆಹೊಸೂರಿನಿಂದ ಹಾರಂಗಿ ರಸ್ತೆಯಲ್ಲಿ ಎರಡು ಕಿ.ಮೀ. ಸಾಗಿದರೆ ಅರಣ್ಯದ ಮಧ್ಯಭಾಗಲ್ಲಿ ಶ್ರೀ ಪಂಚಲಿAಗೇಶ್ವರ ದೇವರು ನೆಲೆಸಿದ್ದಾರೆ. ಪ್ರತಿ ಸೋಮವಾರ ಇಲ್ಲಿ ದೇವರಿಗೆ ವಿಶೇಷ ಪೂಜೆ, ವಿವಿಧ ಅರ್ಚನೆಗಳು ನಡೆಯುತ್ತವೆ. ನೂರಾರು ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ದೇವಸ್ಥಾನ ಇತ್ತು ಎಂಬುದು ಗ್ರಾಮಸ್ಥರ ನಂಬಿಕೆ. ಅಲ್ಲದೆ ಇದೀಗ ಪ್ರತಿಷ್ಠಾಪನೆ ಮಾಡಿರುವ ಶಿವಲಿಂಗವೇ ಸಾಕ್ಷಿ. ಈ ಬಾರಿಯ ಶಿವರಾತ್ರಿ ಸಮಯದಲ್ಲಿ ಹಲವು ದಾನಿಗಳ ಸಹಕಾರದಿಂದ ಸುಮಾರು ೫ ಲಕ್ಷ ಹಣದಲ್ಲಿ ಬೆಳ್ಳಿಯ ಶಿವನ ಮುಖವಾಡವನ್ನು ನಿರ್ಮಿಸಲಾಗಿದೆ. ಶಿವರಾತ್ರಿಯ ಜಾಗರಣೆ ದಿನ ಸ್ಥಳೀಯರಿಂದ ಮತ್ತು ರಸಮಂಜರಿ ತಂಡದ ಸಹಕಾರದಲ್ಲಿ ವಿವಿಧ ಮನರಂಜನಾ ಕಾರ್ಯಕ್ರಮಗಳು ೨ ದಿನಗಳ ಕಾಲ ಏರ್ಪಡಿಸಲಾಗಿತ್ತು.

ಎರಡು ದಿನಗಳ ಕಾಲ ದೇವಸ್ಥಾನದಲ್ಲಿ ಗಣಪತಿಹೋಮ, ಕಲಶಾಭಿಷೇಕ, ಶ್ರೀ ದೇವರ ಪೂಜೆ, ದೇವರಬಲಿ, ಪ್ರಸಾದ ವಿತರಣೆ, ದೀಪಾರಾಧನೆ, ಸೋಪಾನ ಸಂಗೀತಾ, ದೇವರ ಬೂತ ಬಲಿ, ದರ್ಶನ ಬಲಿ ನಡೆಯಿತು. ಹಾರಂಗಿ ನದಿಯಿಂದ ಗ್ರಾಮಸ್ಥರು ಸೇರಿ ೧೦೧ ಕಲಶ ಮೆರವಣಿಗೆಯಲ್ಲಿ ಸಾಗಿ ದೇವಸ್ಥಾನಕ್ಕೆ ಸಾಗಿ ಮಹಾಪೂಜೆ ನಡೆಸಲಾಯಿತು.

ದೇವಸ್ಥಾನದಿಂದ ಸ್ಥಳೀಯ ಬಸವೇಶ್ವರ ದೇವಸ್ಥಾನಕ್ಕೆ ಚಂಡೆ, ವಾಲಗ ಸಮೇತ ಸಾಗಿ ನಂತರ ವಿವಿಧ ಪೂಜಾ ವಿದಿವಿಧಾನಗಳನ್ನು ನಡೆಸಲಾಯಿತು. ದೇವಸ್ಥಾನ ಸಮಿತಿಯ ಅಧ್ಯಕ್ಷ ಉಗ್ರಾಣಿ ಮನೋಜ್ ಮತ್ತು ಸಮಿತಿಯ ಎಲ್ಲಾ ಪದಾಧಿಕಾರಿಗಳು ಸಕ್ರಿಯಾವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಮೂರು ದಿನಗಳ ಕಾಲ ಸಾವಿರಾರು ಮಂದಿಗೆ ನಿರಂತರ ಅನ್ನಸಂತರ್ಪಣೆ ಕಾರ್ಯ ನಡೆಸಲಾಯಿತು. ಪ್ರಕೃತಿಯ ರಮಣೀಯ ಸ್ಥಳದಲ್ಲಿ ಶಿವನಸನ್ನಿದಿ ಎಲ್ಲರನ್ನು ಸೆಳೆಯುತ್ತಿದೆ. ಶಿವರಾತ್ರಿ ಉತ್ಸವದ ಪೂಜಾ ಕಾರ್ಯವನ್ನು ಕ್ಷೇತ್ರದ ತಂತ್ರಿಯವರಾದ ಬ್ರಹ್ಮಶ್ರೀ ವೇದಮೂರ್ತಿ ಗಣೇಶ್ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈಧಿಕ ಧಾರ್ಮಿಕ ಕಾರ್ಯಗಳು ನಡೆದವು.