ಮಡಿಕೇರಿ, ಫೆ. ೨೩: ಕೊಡಗು ಜಿಲ್ಲೆಯ ಚಿಕ್ಕ ಅಳುವಾರದಲ್ಲಿ ಸ್ಥಾಪನೆ ಯಾಗಿರುವ ಪ್ರತ್ಯೇಕ ವಿಶ್ವ ವಿದ್ಯಾನಿಲಯಕ್ಕೆ ಉಪ ಕುಲಪತಿ ನೇಮಕ ಸಂಬAಧ ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಪ್ರಶ್ನೆಗೆ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್ ನಾರಾಯಣ್ ಉತ್ತರಿಸಿದರು.

ಸದನದಲ್ಲಿ ಈ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ನೂತನ ವಿಶ್ವವಿದ್ಯಾನಿಲಯಗಳಿಗೆ ತಲಾ ರೂ. ೨ ಕೋಟಿಗಳ ಅವರ್ತಕ ವೆಚ್ಚ ಬಳಸಿ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ ಎಂದರು.

ಕುಶಾಲನಗರದಲ್ಲಿನ ಇಂಜಿನಿಯರಿAಗ್ ಕಾಲೇಜಿನಲ್ಲಿ ಮಂಜೂರಾಗಿರುವ ಹುದ್ದೆ ಹಾಗೂ ಕಾರ್ಯನಿರ್ವಹಿಸುತ್ತಿರುವ ಹುದ್ದೆಯ ಬಗ್ಗೆ ಮಾಹಿತಿಗೆ ಉತ್ತರಿಸಿರುವ ಸಚಿವರು, ೨೦೬ ಹುದ್ದೆಗಳು ಮಂಜೂರಾಗಿದ್ದು, ೫೯ ಹುದ್ದೆ ಭರ್ತಿಯಾಗಿದೆ. ೧೪೭ ಹುದ್ದೆಗಳು ಖಾಲಿ ಇವೆ. ೧೭ ಅರೆಕಾಲಿಕ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗಿದೆ ಎಂದು ಅಶ್ವತ್ಥ್ ನಾರಾಯಣ್ ವಿವರಿಸಿದರು.

ಮಾದಪುರ ಗ್ರಾಮದ ೨೮ ಕಿ.ಮೀ ಅಂತರದಲ್ಲಿ ೩ ಸರಕಾರಿ ಪ್ರಥಮ ದರ್ಜೆ ಕಾಲೇಜು ಇರುವುದರಿಂದ ನೂತನ ಕಾಲೇಜು ನಿರ್ಮಾಣ ಉದ್ದೇಶವಿಲ್ಲ ಎಂದು ರಂಜನ್ ಪ್ರಶ್ನೆಗೆ ಸಚಿವರು ಪ್ರತಿಕ್ರಿಯಿಸಿದ್ದಾರೆ.

ಮಾದಕ ದ್ರವ್ಯ ತಡೆಗೆ ಕ್ರಮ

ಮಾದಕ ದ್ರವ್ಯ ಸರಬರಾಜು, ಮಾರಾಟ ತಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕಟಿಬದ್ಧವಾಗಿದ್ದು, ಹಲವಾರು ಕ್ರಮಗಳನ್ನು ಕೈಗೊಂಡು ಕಾರ್ಯನಿರ್ವಹಿಸುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ರಂಜನ್ ಪ್ರಶ್ನೆಗೆ ಉತ್ತರಿಸಿದ್ದಾರೆ.

ಅದರೊಂದಿಗೆ ಗೋ ಸಾಗಾಟ ಪ್ರಕರಣಗಳನ್ನು ಮಟ್ಟಹಾಕಲಾಗುತ್ತಿದೆ. ಪದೇ ಪದೇ ಕೃತ್ಯವೆಸಗುತ್ತಿರುವರ ವಿರುದ್ಧ ರೌಡಿ ಹಾಳೆ ತೆರೆಯಲಾಗಿದೆ. ಗಡಿಗಳಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ ಎಂದು ವಿವರಿಸಿದ ಅವರು, ಕಳೆದ ೩ ವರ್ಷಗಳಲ್ಲಿ ೧೦ ಮತಾಂತರ ಪ್ರಕರಣ ದಾಖಲಾಗಿದ್ದು, ಅದನ್ನು ತಡೆಯುವ ನಿಟ್ಟಿನಲ್ಲಿ ಕ್ರಮವಹಿಸಲಾಗಿದೆ ಎಂದು ಹೇಳಿದ್ದಾರೆ.