ನಾಪೋಕ್ಲು, ಫೆ. ೨೨: ಮಾಜಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಂ.ಆರ್. ಸೀತಾರಾಮ್ ಅವರ ಪುತ್ರರಾದ ರಕ್ಷಾ ರಾಮಯ್ಯ ಹಾಗೂ ಸುಂದರ್ ರಾಮಯ್ಯ ಸಹೋದರರು ರೂ. ೧೩ ಲಕ್ಷ ವೆಚ್ಚದಲ್ಲಿ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳದ ಮುಂಭಾಗಿಲ ಮೆಟ್ಟಿಲ ಬಳಿ ಗೋಪುರ ಹಾಗೂ ಗೇಟ್ ನಿರ್ಮಿಸಿಕೊಟ್ಟಿದ್ದಾರೆ. ಸೀತಾರಾಮ್ ಆಪ್ತರಾಗಿರುವ ಕದ್ದಣಿಯಂಡ ಹರೀಶ್ ಬೋಪಣ್ಣ ಅವರ ಕೋರಿಕೆ ಮೇರೆಗೆ ಅವರ ಪುತ್ರರು ಈ ದೇವಳಕ್ಕೆ ಗೋಪುರ ಹಾಗೂ ಗೇಟ್ ನಿರ್ಮಿಸಿಕೊಟ್ಟಿದ್ದಾರೆ.

ಗೋಪುರ ಮೇಲ್ಭಾಗದಲ್ಲಿ ಗಜಮುಖ, ಪರಮೇಶ್ವರನ ಮೂರ್ತಿಯನ್ನು ಇರಿಸಲಾಗಿದೆ. ಪುರಾತನ ಕಾಲದಿಂದಲೂ ಈ ಮೆಟ್ಟಿಲುಗಳ ಮೂಲಕ ಭಕ್ತಾದಿಗಳು ಸಂಚರಿಸುವುದು ವಿರಳವಾಗಿದೆ. ಇದಕ್ಕೆ ಐತಿಹಾಸಿಕ ಹಿನ್ನೆಲೆಯಿದ್ದು, ಅದಕ್ಕೆ ಸಂಬAಧಪಟ್ಟAತೆ ಮಾತ್ರ ಇದನ್ನು ಬಳಸಲಾಗುವುದು.