ಸಿದ್ದಾಪುರ, ಫೆ. ೨೩: ಶರೀರದ ಬಹುತೇಕ ಭಾಗ ಬೆಂದು ಹೋಗಿದ್ದ ಬಾಬು ಎಂಬ ವ್ಯಕ್ತಿ ನೆಲ್ಲಿಹುದಿಕೇರಿ ಭಾಗದಲ್ಲಿ ಕಳೆದ ಒಂದು ತಿಂಗಳಿನಿAದ ಅಲೆದಾಡುತ್ತಿದ್ದು, ಇವರನ್ನು ಸಿದ್ದಾಪುರದ ಜಮಾಅತೇ ಇಸ್ಲಾಮಿ ಕಾರ್ಯಕರ್ತರು, ನೆಲ್ಲಿಹುದಿಕೇರಿ ನೈಮ ಸಂಘದ ಕಾರ್ಯಕರ್ತ ರವೂಫ್, ಸಿದ್ದಾಪುರ ನಿವಾಸಿ ಹನೀಫ ಸೇರಿ ಸ್ನಾನ ಮಾಡಿಸಿ ಹೊಸ ಉಡುಗೆ ತೊಡಿಸಿ ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮಡಿಕೇರಿಯಲ್ಲಿರುವ ಆತನ ಪತ್ನಿ ಮತ್ತು ಮಗಳ ಬಳಿ ಬಿಟ್ಟಿದ್ದಾರೆ.