ಖಲಿಸ್ತಾನಿ ನಾಯಕನಿಂದ ಪೊಲೀಸರಿಗೆ ಬೆದರಿಕೆ
ನವದೆಹಲಿ, ಫೆ. ೨೩: ಕೇಸ್ ರದ್ದುಗೊಳಿಸಿ ಇಲ್ಲವೇ ಪರಿಣಾಮ ಎದುರಿಸಿ ಎಂದು ಖಲಿಸ್ತಾನಿ ನಾಯಕÀ ಅಮೃತಪಾಲ್ ಸಿಂಗ್ ಅಮೃತಸರದಲ್ಲಿ ಬೆದರಿಕೆಯೊಡ್ಡಿದ್ದಾರೆ. ಸ್ವಯಂ ಘೋಷಿತ ಖಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ ‘ವಾರಿಸ್ ಪಂಜಾಬ್ ದೇ' ಮುಖ್ಯಸ್ಥ. ಅವರು ಮತ್ತು ಅವರ ಐದು ಸಹಾಯಕರು ಅಪಹರಣ, ಕಳ್ಳತನ, ಗಲಭೆ, ಹಲ್ಲೆ ಮತ್ತು ಕಾನೂನು ಬಾಹಿರ ಸಭೆಯ ಆರೋಪದ ನಂತರ ಬಂಧನವನ್ನು ಎದುರಿಸುತ್ತಿದ್ದಾರೆ, ಇದು ಅಮೃತಸರದಲ್ಲಿ ಬೃಹತ್ ಪ್ರತಿಭಟನೆಗೆ ಕಾರಣವಾಯಿತು. ಅಮೃತಸರದಲ್ಲಿ ಅಮೃತಪಾಲ್ ಸಿಂಗ್ ಬೆಂಬಲಿಗರು ಪೊಲೀಸರೊಂದಿಗೆ ಘರ್ಷಣೆ ನಡೆಸಿದರು. ಸ್ವಯಂ ಘೋಷಿತ ಖಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ ಮತ್ತು ಅವರ ಬೆಂಬಲಿಗರು ಅಮೃತಸರದÀಲ್ಲಿ ಪೊಲೀಸರೊಂದಿಗೆ ಘರ್ಷಣೆ ನಡೆಸಿದರು. ಖಲಿಸ್ತಾನ್ ಪರ ನಾಯಕ ಅಮೃತಪಾಲ್ ಸಿಂಗ್ ಅವರ ಆಪ್ತ ಸಹಾಯಕ ಲವ್ಪ್ರೀತ್ ತೂಫಾನ್ ಅವರನ್ನು ಗುರುವಾರ ಬಂಧಿಸಿರುವುದನ್ನು ವಿರೋಧಿಸಿ ಬೃಹತ್ ಪ್ರತಿಭಟನೆಗಳು ಇಂದು ಭುಗಿಲೆದ್ದವು. 'ವಾರಿಸ್ ಪಂಜಾಬ್ ದೇ' ಮುಖ್ಯಸ್ಥರ ಬೆಂಬಲಿಗರು ಕತ್ತಿಗಳು ಮತ್ತು ಬಂದೂಕುಗಳನ್ನು ಹಿಡಿದು ಅಮೃತಸರದ ಅಜ್ನಾಲಾ ಪೊಲೀಸ್ ಠಾಣೆಯ ಹೊರಗೆ ನಿರ್ಮಿಸಲಾಗಿದ್ದ ಪೊಲೀಸ್ ಬ್ಯಾರಿಕೇಡ್ಗಳನ್ನು ಭೇದಿಸಿದರು. ಪ್ರತಿಭಟನೆಯ ನಡುವೆ ಆರು ಪೊಲೀಸರು ಗಾಯಗೊಂಡಿದ್ದು, ಅವರನ್ನು ಅಜ್ನಾಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಧಿತನನ್ನು ಬಿಡುಗಡೆಗೊಳಿಸಿ ಎಲ್ಲ ಮೊಕದ್ದಮ್ಮೆಗಳನ್ನು ಹಿಂತೆಗೆದುಕೊಳ್ಳಲು ಆಗ್ರಹಿಸಿ ಈ ಪ್ರತಿಭಟನೆ ನಡೆಯಿತು.
ಕಾಂಗ್ರೆಸ್ ನಾಯಕ ಖೇರ್ ಬಂಧನ: ಜಾಮೀನು
ನವದೆಹಲಿ, ಫೆ. ೨೩: ಅದಾನಿ ಹಿಂಡೆನ್ಬರ್ಗ್ ವಿವಾದಕ್ಕೆ ಸಂಬAಧಿಸಿದAತೆ ಜಂಟಿ ಸಂಸದೀಯ ತನಿಖೆಗೆ ಒತ್ತಾಯಿಸುವ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ನರೇಂದ್ರ ಗೌತಮ್ದಾಸ್ ಕ್ಷಮಿಸಿ, ದಾಮೋದರದಾಸ್ ಎಂದು ಉಲ್ಲೇಖಿಸಿದ್ದ ಕಾಂಗ್ರೆಸ್ ನಾಯಕ ಪವನ್ಖೇರಾ ಅವರನ್ನು ಅಸ್ಸಾಂ ಪೊಲೀಸರು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಕಾಂಗ್ರೆಸ್ ನಾಯಕ ಪವನ್ಖೇರಾ ಅವರು ದೆಹಲಿಯಿಂದ ಛತ್ತೀಸ್ಘಡ ರಾಜಧಾನಿ ರಾಯಪುರಕ್ಕೆ ಇಂಡಿಗೋ ಏರ್ಲೈನ್ಸ್ ಮೂಲಕ ಪ್ರಯಾಣಿಸಲು ಮುಂದಾದ ಮೇಲೆ ಅವರ ಪ್ರಯಾಣವನ್ನು ತಡೆಹಿಡಿಯುವುದರೊಂದಿಗೆ ಅವರನ್ನು ವಿಮಾನದಿಂದ ಕೆಳಗಿಳಿಸಿ ಅಸ್ಸಾಂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ ಅಂದಾಜು ೫೦ಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರು ಪವನ್ಖೇರ್ ಬಂಧನ ಖಂಡಿಸಿ ವಿಮಾನ ನಿಲ್ದಾಣದಲ್ಲಿಯೇ ಪ್ರತಿಭಟನೆ ನಡೆಸಿ ಖೇರಾ ಬಂಧನವÀನ್ನು ತೀವ್ರವಾಗಿ ಖಂಡಿಸಿದ್ದಾರೆ.ಈ ಎಲ್ಲ ನಾಯಕರು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಸಭೆಗಾಗಿ ರಾಯಪುರಕ್ಕೆ ಪವನ್ ಖೇರ್ ಅವರೊಂದಿಗೆ ಪ್ರಯಾಣಿಸುತ್ತಿದ್ದರೆನ್ನಲಾಗಿದ್ದು, ಖೇರ್ ಅವರ ಬಂಧನದ ನಂತರ ವಿಮಾನದ ಪಕ್ಕದಲ್ಲಿಯೇ ಪ್ರತಿಭಟನೆ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮಾತನಾಡಿ ಬಂಧನಕ್ಕೊಳಗಾಗಿರುವ ಕಾಂಗ್ರೆಸ್ ನಾಯಕ ಪವನ್ ಖೇರಾಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಅರ್ಜಿದಾರರನ್ನು ರಕ್ಷಿಸುವುದಕ್ಕಾಗಿ ಪವನ್ ಖೇರಾಗೆ ಜಾಮೀನು ನೀಡಬೇಕೆಂದು ಸುಪ್ರೀಂ ಕೋರ್ಟ್ ಹೇಳಿದ್ದು, ನ್ಯಾಯ ವ್ಯಾಪ್ತಿಯ ನ್ಯಾಯಾಲಯದ ಮೂಲಕ ನೀಡುವ ಜಾಮೀನಿನ ಆಧಾರದಲ್ಲಿ ಬಿಡುಗಡೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸಮುದಾಯ ಭವನವನ್ನು ವಶಕ್ಕೆ ಪಡೆದ ಎನ್ಐಎ
ದಕ್ಷಿಣ ಕನ್ನಡ, ಫೆ. ೨೩: ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬAಧಿಸಿದAತೆ ಬಂಟ್ವಾಳ ಪೇಟೆ ಸಮೀಪದ ಇಡುಕ್ಕಿ ಗ್ರಾಮದ ಸಮುದಾಯ ಭವನವನ್ನು ರಾಷ್ಟಿçÃಯ ತನಿಖಾ ದಳ (ಎನ್ಐಎ) ವಶಕ್ಕೆ ತೆಗೆದುಕೊಂಡಿದೆ. ಇಡುಕ್ಕಿ ಗ್ರಾಮದ ಮಿತ್ತೂರು ಫ್ರೀಡಂ ಕಮ್ಯುನಿಟಿ ಹಾಲ್ಅನ್ನು ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಬಳಸಲಾಗುತ್ತಿತ್ತು. ಹೀಗಾಗಿ, ತನಿಖಾ ಸಂಸ್ಥೆಯು ೨೦ ಗುಂಟೆಗಳ ಸಂಪೂರ್ಣ ಆವರಣವನ್ನು ವಶಕ್ಕೆ ತೆಗೆದುಕೊಂಡಿದೆ. ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾಗೆ (ಪಿಎಫ್ಐ) ಸೇರ್ಪಡೆಗೊಂಡ ಕಾರ್ಯಕರ್ತರು ದೇಶ ವಿರೋಧಿ ಮತ್ತು ವಿಧ್ವಂಸಕ ಚಟುವಟಿಕೆಗಳನ್ನು ನಡೆಸಲು ಇಲ್ಲಿ ತರಬೇತಿ ಪಡೆಯುತ್ತಿದ್ದರು. ಅಲ್ಲದೆ, ಇಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಗೆ ಯೋಜನೆ ರೂಪಿಸಲಾಗಿತ್ತು. ಈ ಬಗ್ಗೆ ಸಮುದಾಯ ಭವನದ ಮಾಲೀಕರಿಗೂ ಅಧಿಕೃತ ಮಾಹಿತಿ ನೀಡಲಾಗಿದ್ದು, ಸಮುದಾಯ ಭವನವನ್ನು ಬಾಡಿಗೆಗೆ ನೀಡುವಂತಿಲ್ಲ. ಸಮುದಾಯ ಭವನದಲ್ಲಿ ಓಡಾಟ ಅಥವಾ ಸಭಾಂಗಣದಲ್ಲಿ ಯಾವುದೇ ಕೆಲಸಗಳನ್ನು ನಡೆಸುವುದನ್ನು ಎನ್ಐಎ ನಿಷೇಧಿಸಿದೆ.
ಜಾವೇದ್ ಅಖ್ತರ್ ವಿರುದ್ಧ ಪಾಕಿಸ್ತಾನದಲ್ಲಿ ಟೀಕೆ
ಲಾಹೋರ್, ಫೆ. ೨೩: ಮುಂಬೈ ಮೇಲೆ ದಾಳಿ ನಡೆಸಿದವರು (೨೬/೧೧) ಪಾಕಿಸ್ತಾನದಲ್ಲಿ ಮುಕ್ತವಾಗಿ ಓಡಾಡಿಕೊಂಡಿದ್ದಾರೆ ಎಂಬ ಕವಿ, ಗೀತರಚನೆಕಾರ ಜಾವೆದ್ ಅಖ್ತರ್ ನೀಡಿದ ಹೇಳಿಕೆಯು ಟ್ವಿಟರ್ನಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ ಮತ್ತು ಅಸಂಖ್ಯಾತ ಪಾಕಿಸ್ತಾನಿ ಸೆಲೆಬ್ರಿಟಿಗಳು ಅವರ ಹೇಳಿಕೆಯನ್ನು ಖಂಡಿಸಿ ಮಾತನಾಡಿದ್ದಾರೆ. ಲಾಹೋರ್ನಲ್ಲಿ ನಡೆದ ಉರ್ದುವಿನ ಪ್ರಸಿದ್ಧ ಕವಿ ಫೈಜ್ ಅಹಮದ್ ಫೈಜ್ ಅವರ ಸ್ಮರಣಾರ್ಥ ಭಾನುವಾರ ಇಲ್ಲಿ ಆಯೋಜಿಸಿದ್ದ ಫೈಜ್ ಉತ್ಸವದ ಕೊನೆಯ ದಿನದ ಕಾರ್ಯಕ್ರಮದ ವೇಳೆ ಅಖ್ತರ್ ಮಾತನಾಡಿದ್ದರು. ವಿವಿಧ ಸೆಲೆಬ್ರಿಟಿಗಳು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಚಿತ್ರಗಳು ಮತ್ತು ವೀಡಿಯೋಗಳನ್ನು ಹಂಚಿಕೊAಡಿದ್ದು, ಸಮಾರಂಭದಲ್ಲಿ ಅಖ್ತರ್ ಹೇಳಿಕೆಗೆ ಕಿಡಿಕಾರಿದ್ದಾರೆ. ಆದಾಗ್ಯೂ, ಭಾರತೀಯ ಕವಿಯ ಭಾಷಣದ ವೀಡಿಯೋ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ೨೬/೧೧ ಮುಂಬೈ ದಾಳಿಯ ದಾಳಿಕೋರರಿಗೆ ದೇಶದಲ್ಲಿ "ಮುಕ್ತವಾಗಿ ತಿರುಗಾಡಲು" ಪಾಕಿಸ್ತಾನ ಅವಕಾಶ ಮಾಡಿಕೊಟ್ಟಿದೆ ಎಂದು ಅಖ್ತರ್ ಆರೋಪಿಸಿದ್ದರು.
೬ ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಬೆಂಗಳೂರು, ಫೆ. ೨೩: ರಾಜ್ಯ ಸರ್ಕಾರ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿ ಕುಮಾರ್ ಸೇರಿದಂತೆ ಆರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಗುರುವಾರ ಆದೇಶ ಹೊರಡಿಸಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರನ್ನು ರೈಲ್ವೆ ಡಿಐಜಿಯಾಗಿ, ಬೆಂಗಳೂರು ಪಶ್ಚಿಮ ಸಂಚಾರ ವಿಭಾಗದ ಡಿಸಿಪಿಯಾಗಿದ್ದ ಕುಲದೀಪ್ ಕುಮಾರ್ ಆರ್. ಜೈನ್ ಅವರನ್ನು ಮಂಗಳೂರು ನಗರ ನೂತನ ಪೊಲೀಸ್ ಆಯುಕ್ತರಾಗಿ ನೇಮಕ ಮಾಡಲಾಗಿದೆ. ಬೆಂಗಳೂರು ದಕ್ಷಿಣ (ಸಂಚಾರ) ವಿಭಾಗದ ಡಿಸಿಪಿಯಾಗಿ ಮೊಹಮ್ಮದ್ ಸುಜೀತ, ಬೆಂಗಳೂರು ನಗರ ಸಿಎಆರ್ನ ಡಿಸಿಪಿಯಾಗಿ ಅರುಣಾಂಗ್ಷು ಗಿರಿ ಅವರನ್ನು ನೇಮಕ ಮಾಡಲಾಗಿದೆ. ಗುಪ್ತಚರ ಇಲಾಖೆಯ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ಡೆಕ್ಕ ಕಿಶೋರ್ ಬಾಬು ಅವರನ್ನು ಹಾಗೂ ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿಯಾಗಿ ಯಶೋಧಾ ವಂಟಗೋಡಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಇನ್ನು, ಕೆಎನ್ಆರ್ಪಿ ೧ನೇ ಬೆಟಾಲಿಯನ್ ಕಮಾಂಡೆAಟ್ ಆಗಿರುವ ಡಾ. ಕೋನ ವಂಶಿಕೃಷ್ಣ ಅವರಿಗೆ ವೈರ್ಲೆಸ್ ಎಸ್ಪಿ ಹುದ್ದೆ ಹೆಚ್ಚುವರಿ ಹೊಣೆಯಾಗಿ ನೀಡಲಾಗಿದೆ.