ಗೋಣಿಕೊಪ್ಪಲು, ಫೆ. ೨೩: ಜನವಸತಿ ಪ್ರದೇಶದಲ್ಲಿ ನಾಗರಿಕರಿಗೆ ಹುಲಿಯೊಂದು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಎಚ್ಚೆತ್ತ ಅರಣ್ಯ ಇಲಾಖೆಯ ಸಿಬ್ಬಂದಿ ರಾತ್ರಿ ವೇಳೆ ಸುತ್ತಮುತ್ತಲಿನ ಪ್ರದೇಶದಲ್ಲಿ ಪಟಾಕಿ ಸಿಡಿಸಿ ಹುಲಿಯನ್ನು ಜನವಸತಿ ಪ್ರದೇಶದಿಂದ ಕಾಡಿನತ್ತ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಿರುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಈ ಪ್ರದೇಶದಲ್ಲಿ ಬುಧವಾರ ಸಂಜೆಯ ವೇಳೆ ಗ್ರಾಮದ ಕೊರಕುಟ್ಟಿರ ರಾಜಪ್ಪ ಎಂಬವರಿಗೆ ಹುಲಿಯೊಂದು ಕಾಣಿಸಿಕೊಂಡಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದರು. ಮಾಹಿತಿ ತಿಳಿದ ಪೊನ್ನಂಪೇಟೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಿರುಗೂರು ಭಾಗಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಈ ವೇಳೆ ಹುಲಿ ಪ್ರತ್ಯಕ್ಷಗೊಂಡಿದ್ದ ಕಾಫಿ ತೋಟದ ಅನತಿ ದೂರದಲ್ಲಿ ಬುಧವಾರ ಸಂಜೆ ಗ್ರಾಮದ ಹ್ಯಾರಿ ಎಂಬುವರಿಗೆ ಸೇರಿದ ಕರುವೊಂದನ್ನು ಹುಲಿ ಕೊಂದು ತಿಂದು ಹಾಕಿರುವುದು ಬೆಳಕಿಗೆ ಬಂದಿದೆ.

ಸAಜೆ ಆಗುತ್ತಿದ್ದಂತೆಯೇ ಮುಂಜಾಗ್ರತ ಕ್ರಮವಾಗಿ ಕಾಫಿ ತೋಟ ಹಾಗೂ ಭತ್ತದ ಗದ್ದೆಗಳಲ್ಲಿ ಪಟಾಕಿ ಸಿಡಿಸಿದರು. ಅಲ್ಲದೆ ರಾತ್ರಿಯ ವೇಳೆ ಸಿಬ್ಬಂದಿಗಳು ಗಸ್ತು ಕಾರ್ಯ ನಡೆಸಿದರು.ಮುಂಜಾನೆ ವೇಳೆ ನೂರಕ್ಕೂ ಅಧಿಕ ಸಿಬ್ಬಂದಿ ಹುಲಿ ಸಂಚಾರವಿರುವ ಪ್ರದೇಶದಲ್ಲಿ ಕೂಂಬಿAಗ್ ಕಾರ್ಯಾಚರಣೆ ಕೈಗೊಂಡಿದ್ದು ಸಂಜೆಯವರೆಗೂ ಕೂಂಬಿAಗ್ ಕಾಂರ್ಯಾಚರಣೆ ಮುಂದುವರೆದರೂ ಹುಲಿಯ ಸುಳಿವು ಸುತ್ತಮುತ್ತಲಿನ ಜಾಗಗಳಲ್ಲಿ ಪತ್ತೆಯಾಗಿಲ್ಲ.

ಅರಣ್ಯ ಸಿಬ್ಬಂದಿ ಆಯಾಕಟ್ಟಿನ ಸ್ಥಳದಲ್ಲಿ ಕ್ಯಾಮೆರಾ ಟ್ರಾö್ಯಪ್ ಅಳವಡಿಸಿದ್ದಾರೆ. ರೈತರ ಕಾಫಿ ತೋಟ ಸೇರಿದಂತೆ ದೇವರ ಕಾಡು ಅರಣ್ಯ ಪ್ರದೇಶಗಳು ಕೆರೆ, ತೋಡು ಮುಂತಾದ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿ ಹುಲಿ ಸಂಚರಿಸುವ ಹೆಜ್ಜೆ ಗುರುತುಗಳನ್ನು ಕಂಡು ಹಿಡಿಯಲು ಮುಂದಾಗಿದ್ದಾರೆ. ಆದರೆ ಹುಲಿಯ ಹೆಜ್ಜೆ ಗುರುತುಗಳು ಕಾರ್ಯಚರಣೆ ತಂಡಕ್ಕೆ ಎಲ್ಲಿಯೂ ಕಂಡು ಬರಲಿಲ್ಲ. ಪೊನ್ನಂಪೇಟೆ ವಲಯ ಅರಣ್ಯ ಅಧಿಕಾರಿಗಳಾದ ಶಂಕರ್ ಮುಂದಾಳತ್ವದಲ್ಲಿ ನೂರಾರು ಸಿಬ್ಬಂದಿಯೊAದಿಗೆ ಕಿರುಗೂರು ವ್ಯಾಪ್ತಿಯಲ್ಲಿ ಹುಲಿಯ ಸೆರೆಗೆ ಬೋನು ಇರಿಸಿ ಬೋನಿನಲ್ಲಿ ಜೀವಂತ ಆಡನ್ನು ಕಟ್ಟಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ಕಾರ್ಯಾಚರಣೆ ತಂಡಕ್ಕೆ ಹುಲಿಯ ಹೆಜ್ಜೆ ಗುರುತುಗಳು ಕಂಡು ಬಾರದಿರುವುದರಿಂದ ಹುಲಿಯು ಈ ಭಾಗದಿಂದ ಸಮೀಪದ ಅರಣ್ಯ ಪ್ರದೇಶಕ್ಕೆ ತೆರಳಿರಬಹುದೆಂದು ಅಂದಾಜಿಸಲಾಗಿದೆ. ಕಾಫಿತೋಟದಲ್ಲಿ ನೀರು ಹಾಯಿಸುವ ಕೆಲಸ ಅವಶ್ಯವಾಗಿ ನಡೆಯಲೇಬೇಕಾದ ಅನಿವಾರ್ಯತೆ ಇರುವುದರಿಂದ ಈ ಭಾಗದ ರೈತರು, ಕಾರ್ಮಿಕರು ತಮ್ಮ ತೋಟದಲ್ಲಿ ಭಯದ ನಡುವೆ ನೀರು ಹಾಯಿಸುವ ಕೆಲಸ ನಡೆಸಿದರು. -ಹೆಚ್.ಕೆ. ಜಗದೀಶ್