ಪೊನ್ನಂಪೇಟೆ, ಫೆ. ೨೨: ಪೊನ್ನಂಪೇಟೆ ತಾಲೂಕಿನ ಕಿರುಗೂರು ಗ್ರಾಮದ ಕೊರಕುಟ್ಟಿರ ರಾಜ ಎಂಬವರ ಕಾಫಿ ತೋಟದಲ್ಲಿ ಇಂದು ಸಂಜೆ ೫ ಗಂಟೆ ಸಮಯದಲ್ಲಿ ಹುಲಿಯೊಂದು ಪ್ರತ್ಯಕ್ಷವಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ತೋಟಕ್ಕೆ ನೀರು ಹಾಯಿಸಲು ಪೈಪ್ ಜೋಡಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದ ಸಂದರ್ಭ ರಾಜ ಅವರ ಮಗ ಸವಿ ಚಂಗಪ್ಪ ಎಂಬವರಿಗೆ ಹುಲಿ ಕಾಣಿಸಿಕೊಂಡಿದೆ. ಸ್ಥಳಕ್ಕೆ ಪೊನ್ನಂಪೇಟೆಯ ವಲಯ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುವ ಸಂದರ್ಭ ಅರಣ್ಯ ಇಲಾಖೆ ಸಿಬ್ಬಂದಿಗೂ
ಹುಲಿ ಕಾಣಿಸಿರುವುದಾಗಿ ತಿಳಿದು ಬಂದಿದೆ.
ಕಿರುಗೂರು ಗ್ರಾಮದಲ್ಲಿ ಹುಲಿ ಪ್ರತ್ಯಕ್ಷ
(ಮೊದಲ ಪುಟದಿಂದ) ಸ್ಥಳಕ್ಕೆ ಎಸಿಎಫ್ ಸೀಮಾ, ಡಿಸಿಎಫ್ ಶಿವಬಸಪ್ಪ, ಆರ್‌ಎಫ್‌ಓ ಶಂಕರ್, ಪೊನ್ನಂಪೇಟೆ ಠಾಣಾಧಿಕಾರಿ ಮಂಜು, ಅರಣ್ಯ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿಗಳು ಹುಲಿ ಪತ್ತೆಗೆ ಕಾರ್ಯಾಚರಣೆ ಕೈಗೊಂಡಿದ್ದು, ಹುಲಿ ಪತ್ತೆಗೆ ೮ ಸ್ಥಳಗಳಲ್ಲಿ ಕ್ಯಾಮರ ಅಳವಡಿಸಿದ್ದಾರೆ. ಕಿರುಗೂರು ಸುತ್ತಮುತ್ತಲಿನ ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಪೊನ್ನಂಪೇಟೆ ಪೊಲೀಸ್ ಠಾಣೆ ವತಿಯಿಂದ ಧ್ವನಿವರ್ಧಕದಲ್ಲಿ ಮಾಹಿತಿ ನೀಡಲಾಗಿದೆ.