ಕೂಡಿಗೆ, ಫೆ. ೨೧: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಕಾಳಿಕಾಂಬ ಯುವಕ ಸಂಘದ ವತಿಯಿಂದ ತಾ. ೨೫, ೨೬ ರಂದು ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಹುದುಗೂರುವಿನ ನೂತನ ಕ್ರೀಡಾಂಗಣದಲ್ಲಿ ನಡೆಯಲಿದೆ.
ಸೋಮವಾರಪೇಟೆ, ಕುಶಾಲನಗರ ತಾಲೂಕು ವ್ಯಾಪ್ತಿಯ ವಾಲಿಬಾಲ್, ಕಬಡ್ಡಿ, ಸೇರಿದಂತೆ ಮಹಿಳೆಯರಿಗೆ ಥ್ರೋಬಾಲ್, ಮಕ್ಕಳಿಗೆ, ಗ್ರಾಮದ ಹಿರಿಯರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿವೆ ಎಂದು ಸಂಘದ ಕಾರ್ಯದರ್ಶಿ ಶರತ್ ತಿಳಿಸಿದ್ದಾರೆ.