ಪೊನ್ನಂಪೇಟೆ, ಫೆ. ೨೧: ಕರ್ನಾಟಕ ರಾಜ್ಯ ಕರಾಟೆ ಸಂಸ್ಥೆಯ ಮತ್ತು ದಕ್ಷಿಣ ಭಾರತ ಕರಾಟೆ ಸಂಸ್ಥೆಯ ಅಧ್ಯಕ್ಷರಾದ ಕೊಡಗಿನ ಸಿ.ಎಸ್. ಅರುಣ್ ಮಾಚಯ್ಯ ಅವರ ನೇತೃತ್ವದ ಕರ್ನಾಟಕ ಕರಾಟೆ ತಂಡ ಎರಡು ಚಿನ್ನದ ಪದಕ ಸೇರಿದಂತೆ ಒಟ್ಟು ೪ ಪ್ರಶಸ್ತಿಗಳನ್ನು ಪಡೆದು ಸಾಧನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಕರಾಟೆ ತಂಡ ಮುಂಬರುವ ಜೂನ್ ತಿಂಗಳಿನಲ್ಲಿ ಮಲೇಷ್ಯಾದಲ್ಲಿ ನಡೆಯಲಿರುವ ಏಷ್ಯನ್ ಕರಾಟೆ ಚಾಂಪಿಯನ್ಶಿಪ್ನಲ್ಲಿ ಭಾರತ ಕರಾಟೆ ತಂಡವನ್ನು ಪ್ರತಿನಿಧಿಸಿ ಭಾಗವಹಿಸಲು ಅರ್ಹತೆ ಪಡೆದುಕೊಂಡಿದೆ.
ಫೆಬ್ರವರಿ ೧೬ ರಿಂದ ೧೯ ರವರೆಗೆ ಡೆಹ್ರಾಡೂನ್ನಲ್ಲಿ ನಡೆದ ಕರಾಟೆ ಇಂಡಿಯಾ ಆರ್ಗನೈಸೇಶನ್ ಅಖಿಲ ಭಾರತ ಹಿರಿಯರ ರಾಷ್ಟಿçÃಯ ಕರಾಟೆ ಚಾಂಪಿಯನ್ಶಿಪ್-೨೦೨೩ನಲ್ಲಿ ಅರುಣ್ ಮಾಚಯ್ಯ ನೇತೃತ್ವದಲ್ಲಿ ಒಟ್ಟು ೨೭ ಕರಾಟೆಪಟುಗಳ ಕರ್ನಾಟಕದ ತಂಡ ಪಾಲ್ಗೊಂಡಿತ್ತು. ಈ ಪೈಕಿ ೨೧ ವರ್ಷದೊಳಗಿನ ಕಟ್ಟಾ ವಿಭಾಗದಲ್ಲಿ ಕರ್ನಾಟಕದ ಜಾಗೃತ್ ಗೌಡ, ವಿಘ್ನೇಶ್, ದಿಲೀಪ್ ಮತ್ತು ಅತೀಶ್ ಅವರನ್ನೊಳಗೊಂಡ ತಂಡ ಇದೇ ಮೊದಲ ಬಾರಿಗೆ ಚಿನ್ನದ ಪದಕ ಗೆಲ್ಲುವ ಮೂಲಕ ಚಾಂಪಿಯನ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.
ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಸಂಸ್ಥೆಯ ಕೊಡಗಿನ ಸೋಮಣ್ಣ ಸೇರಿದಂತೆ ಕೆ.ಪಿ. ಜೋಸ್ ಶಿವದಾಸ್, ಶಂಕರ್, ಭಾರತಿ, ಜಾನ್ಸನ್, ಕಾರ್ನಿಕ್, ಭರತ್, ಅಭಿಷೇಕ್ ಮತ್ತು ಅಭಿಲಾಶ್ ಈ ರಾಷ್ಟಿçÃಯ ಚಾಂಪಿಯನ್ಶಿಪ್ನಲ್ಲಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದರು.