(ಹೆಚ್.ಕೆ. ಜಗದೀಶ್)
ಗೋಣಿಕೊಪ್ಪಲು, ಫೆ. ೨೧: ದಕ್ಷಿಣ ಕೊಡಗಿನ ನಾಗರಿಕರನ್ನು ಬೆಚ್ಚಿ ಬೀಳಿಸಿದ್ದ ಹುಲಿಗಳ ಸಂಚಾರ ಇದೀಗ ಗ್ರಾಮೀಣ ಪ್ರದೇಶದ ಕಾಫಿ ತೋಟ ಹಾಗೂ ಇತರೆಡೆಯ ಜನವಸತಿ ಸ್ಥಳಗಳಲ್ಲಿ ಕಂಡು ಬಾರದ ಹಿನ್ನಲೆಯಲ್ಲಿ ಈ ಭಾಗದ ನಾಗರಿಕರು ಕೊಂಚ ಮಟ್ಟಿಗೆ ನಿರಾಳರಾಗಿದ್ದಾರೆ.
ಕಳೆದ ೧ ವಾರದ ಹಿಂದೆ ಹುಲಿ ಸೆರೆಗೆ ಕಾರ್ಯಾಚರಣೆ ಆರಂಭಿಸಿದ್ದ ೧೫೦ಕ್ಕೂ ಅಧಿಕ ಸಿಬ್ಬಂದಿಗಳು ಇದೀಗ ಕಾರ್ಯಾಚರಣೆಯನ್ನು ಸಡಿಲಗೊಳಿಸಿದ್ದಾರೆ.
ಅರಣ್ಯ ಇಲಾಖೆಯು ಗುರುತಿಸಿದ್ದ ೨ ಹುಲಿಗಳು ನಾಗರಹೊಳೆಯ ರಾಷ್ಟಿçÃಯ ಉದ್ಯಾನವನದ ಹುಲಿ ಸಂರಕ್ಷಿತ ಪ್ರದೇಶಕ್ಕೆ ವಾಪಸ್ಸಾಗಿರಬಹುದೆಂದು ಅಂದಾಜಿಸಲಾಗಿದೆ. ಕೆಲವು ದಿನಗಳಿಂದ ದ.ಕೊಡಗಿನ ಯಾವುದೇ ಪ್ರದೇಶದಲ್ಲಿ ಹುಲಿಯ ಸಂಚಾರದ ಬಗ್ಗೆ ಸದ್ಯದ ಮಟ್ಟಿಗೆ ಮಾಹಿತಿ ಲಭ್ಯವಾಗಿಲ್ಲ.
ಇಲಾಖೆ ವತಿಯಿಂದ ರೈತರ ಕಾಫಿ ತೋಟದಲ್ಲಿ ಹಾಗೂ ಇತರೆಡೆಯಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾಗಳಿಗೆ ಹುಲಿಯ ಚಲನವಲನದ ಬಗ್ಗೆ ಯಾವುದೇ ಚಿತ್ರ ಸೆರೆಯಾಗಿಲ್ಲ.
(ಮೊದಲ ಪುಟದಿಂದ) ಹುಲಿಯ ಕಾರ್ಯಾಚರಣೆಗೆ ಮತ್ತಿಗೋಡು ಸಾಕಾನೆ ಶಿಬಿರದಿಂದ ಅಭಿಮನ್ಯು ಆನೆಯೊಂದಿಗೆ ಮಾವುತರಾದ ವಸಂತ ಹಾಗೂ ರಾಜ, ಅಶ್ವಥಾಮ ಆನೆಯ ಮಾವುತರಾದ ಶಿವು ಹಾಗೂ ಗಣೇಶ, ಭೀಮ ಆನೆಯ ಮಾವುತರಾದ ಗುಂಡು ಹಾಗೂ ನಂಜುAಡ, ಗಣೇಶ ಆನೆಯ ಮಾವುತರಾದ ಜಯ, ರಾಮು ಹಾಗೂ ಮಧು ತಮ್ಮ ಆನೆಗಳೊಂದಿಗೆ ಮತ್ತಿಗೋಡು ಶಿಬಿರಕ್ಕೆ ವಾಪಸ್ಸಾಗಿದ್ದಾರೆ.
ಹುಲಿಯ ಸಂಚಾರ ಕಡಿಮೆಯಾಗುತ್ತಿದ್ದಂತೆಯೇ ಸುತ್ತಮುತ್ತಲಿನ ಗ್ರಾಮಸ್ಥರು ತಮ್ಮ ಕಾಫಿ ತೋಟದಲ್ಲಿ ದೈನಂದಿನ ಚಟುವಟಿಕೆಗಳನ್ನು ಆರಂಭಿಸಿದ್ದಾರೆ. ಗ್ರಾಮದಿಂದ ಹುಲಿಯು ಅರಣ್ಯ ಪ್ರದೇಶಕ್ಕೆ ಮರಳಿರಬಹುದೆಂಬ ನಂಬಿಕೆಯಿAದ ಕಾರ್ಮಿಕರು ತೋಟಗಳಲ್ಲಿ ದೈರ್ಯವಾಗಿ ತಮ್ಮ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
ಹುಲಿಯ ಸಂಚಾರದ ಬಗ್ಗೆ ಖಚಿತ ಸುಳಿವಿಲ್ಲದಿದ್ದರೂ ನಾಗರಹೊಳೆ ವನ್ಯ ಜೀವಿಯ ನಿರ್ದೇಶಕರಾದ ಹರ್ಷ ಕುಮಾರ್ ಹಾಗೂ ಎಸಿಎಫ್ ಗೋಪಾಲ್ ಮುಂಜಾಗ್ರತಾ ಕ್ರಮವಾಗಿ ಹುಲಿ ಸಂಚಾರದ ಹಲವು ಸ್ಥಳಗಳಲ್ಲಿ ಇಲಾಖೆಯ ಸಿಬ್ಬಂದಿಗಳನ್ನು ನೇಮಿಸಿ ಕಾಲ್ನಡಿಗೆಯಲ್ಲಿ ‘ಕೂಂಬಿAಗ್’ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಹುಲಿಯ ಹೆಜ್ಜೆ ಗುರುತುಗಳು ಕಂಡು ಬಂದಲ್ಲಿ ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನೀಡಲು ನಿರ್ದೇಶನ ನೀಡಿದ್ದಾರೆ. ಕೆ. ಬಾಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೂರಿಕಾಡು ಬಳಿಯ ಕಾಫಿ ತೋಟದಲ್ಲಿ ಎರಡು ಅಮಾಯಕ ಜೀವ ಬಲಿ ಪಡೆದಿದ್ದ ೧೨ ವರ್ಷದ ಹೆಣ್ಣು ಹುಲಿಯನ್ನು ಸೆರೆ ಹಿಡಿದ ಬಳಿಕ ಈ ಸುತ್ತಮುತ್ತಲಿನ ಪ್ರದೇಶದಲ್ಲಿ ಇಲ್ಲಿಯ ತನಕ ಯಾವುದೇ ಅಪಾಯ ಸಂಭವಿಸಿಲ್ಲ. ರೈತರ ಜಾನುವಾರುಗಳ ಮೇಲೆಯು ದಾಳಿ ನಡೆಸಿದ ಬಗ್ಗೆ ವರದಿಯಾಗಿಲ್ಲ.