ಮಡಿಕೇರಿ, ಫೆ. ೨೧: ಅಮ್ಮತ್ತಿ ಸನಿಹದ ಕಾವಾಡಿಯಲ್ಲಿ ಇಂದು ಬೆಳಗ್ಗಿನ ಜಾವ ಸರಕಾರಿ ಬಸ್ ಒಂದು ನಿಯಂತ್ರಣ ತಪ್ಪಿ ಕಾಫಿ ತೋಟಕ್ಕೆ ಉರುಳಿದ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಕೇರಳದ ಎರ್ನಾಕುಲಂನಿAದ ಈ ಬಸ್ (ಕೆಎ ೧೩ ಎಫ್ ೨೩೪೭) ಅಮ್ಮತ್ತಿ ಕಾವಾಡಿ ಮಾರ್ಗವಾಗಿ ಹಾಸನಕ್ಕೆ ತೆರಳುತಿತ್ತು. ಬಸ್‌ನಲ್ಲಿ ಸುಮಾರು ೪೦ ರಷ್ಟು ಪ್ರಯಾಣಿಕರು ಇದ್ದರು. ಕಾವಾಡಿಯ ರಸ್ತೆ ಬದಿಯ ತಿರುವು ಅಪಾಯಕಾರಿಯಾಗಿದ್ದು, ಇಲ್ಲಿಂದ ಬಸ್ ಮಾಚಿಮಂಡ ವಸಂತ್ ಅವರ ತೋಟಕ್ಕೆ ಉರುಳಿ ಬಿದ್ದಿದೆ. ಅವಘಡವನ್ನು ವೀಕ್ಷಿಸಿದರೆ ಬಸ್‌ನ ಚಾಲಕ ಸೇರಿದಂತೆ ಬಸ್‌ನಲ್ಲಿದ್ದವರು ಪವಾಡಸದೃಶ ರೀತಿಯಲ್ಲಿ ಬದುಕುಳಿದಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಚಾಲಕ ಸೇರಿ ಒಂದಿಬ್ಬರಿಗೆ ಸಣ್ಣ ಗಾಯ ಹೊರತುಪಡಿಸಿದರೆ ಘಟನೆಯಿಂದ ಯಾರಿಗೂ ಗಂಭೀರ ಪೆಟ್ಟಾಗದಿರುವುದು ನಿಟ್ಟುಸಿರು ಬಿಡುವಂತಾಗಿದೆ. ತೋಟದ ಮಾಲೀಕರು ವೀರಾಜಪೇಟೆ ಗ್ರಾಮಾಂತರ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಪ್ರಯಾಣಿಕರನ್ನು ಪೊಲೀಸರು, ಸ್ಥಳೀಯರು ಸುರಕ್ಷಿತವಾಗಿ ಕರೆತಂದಿದ್ದಾರೆ. ಬಳಿಕ ಕ್ರೇನ್ ಸಹಾಯದಿಂದ ಬಸ್ ಅನ್ನು ಮೇಲೆತ್ತಲಾಯಿತು. ಹೆಚ್ಚಿನ ಅನಾಹುತ ಸಂಭವಿಸದ ಹಿನ್ನೆಲೆಯಲ್ಲಿ ಈ ಬಗ್ಗೆ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.ಇಲಾಖೆಯ ನಿರ್ಲಕ್ಷö್ಯ ಕಾರಣ
ಈ ದುರಂತಕ್ಕೆ ಲೋಕೋಪಯೋಗಿ ಇಲಾಖೆಯ ನಿರ್ಲಕ್ಷö್ಯವೇ ಕಾರಣ ಎಂಬುದಾಗಿ ಸ್ಥಳೀಯರು ಆಕ್ಷೇಪಿಸಿದ್ದಾರೆ. ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಮಾಚಿಮಂಡ ವಸಂತ್ ಅವರು ಈ ಸ್ಥಳ ಅಪಾಯಕಾರಿಯಾಗಿದ್ದು, ಇಲ್ಲಿ ಕಳಪೆ ಕೆಲಸ ನಡೆಸಲಾಗಿದೆ. ಇಲ್ಲಿ ತಡೆಗೋಡೆ ನಿರ್ಮಿಸಬೇಕೆಂದು ಸಂಬAಧಿಸಿದ ಅಧಿಕಾರಿಗಳ ಗಮನಕ್ಕೆ ಈ ಹಿಂದೆಯೇ ತರಲಾಗಿದ್ದರೂ, ಅಧಿಕಾರಿಗಳು ಸ್ಪಂದಿಸಿಲ್ಲ. ತಡೆಗೋಡೆಗೆ ಜಾಗ ಬಿಡಲು ಮಾಲೀಕರು ಒಪ್ಪಿದ್ದರೂ ಕೂಡ ಇಲಾಖೆ ನಿರ್ಲಕ್ಷö್ಯ ವಹಿಸಿದೆ. ಇತ್ತೀಚೆಗೆ ಮಾರುತಿ ವ್ಯಾನ್ ಒಂದು ಇಲ್ಲಿ ಅವಘಡಕ್ಕೀಡಾಗಿತ್ತು. ಇನ್ನಷ್ಟು ಅಪಾಯಸಂಭವಿಸುವ ಮುನ್ನ ಈ ಬಗ್ಗೆ ತ್ವರಿತವಾಗಿ ಇಲಾಖೆ ಗಮನ ಹರಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಈ ತಿರುವು ಅಪಾಯಕಾರಿಯಾಗಿದ್ದು, ಎದುರಿನಿಂದ ಬಂದ ಟಿಂಬರ್ ಲಾರಿಯೊಂದಕ್ಕೆ ಅವಕಾಶ ಮಾಡಿಕೊಡುವ ಸಂದರ್ಭ ಕಿರಿದಾದ ಈ ಜಾಗದ ಅರಿವಿಲ್ಲದಂತೆ ಬಸ್ ಮಗುಚಿಕೊಂಡಿದೆ ಎಂದು ಬಸ್ ನಿರ್ವಾಹಕ ಭುವನೇಶ್ವರ್ ಮಾಹಿತಿ ನೀಡಿದ್ದಾರೆ. ಸುಮಾರು ೧೫ ಅಡಿಯಷ್ಟು ಆಳಕ್ಕೆ ಬಸ್ ಬಿದ್ದಿದ್ದು, ಅಪಾಯ ತಪ್ಪಿರುವ ಬಗ್ಗೆ ಅವರು ನೆಮ್ಮದಿ ವ್ಯಕ್ತಪಡಿಸಿದರು. ಬಸ್ ಚಾಲಕ ನಾಗರಾಜ್ ಅವರಿಗೆ ಸಣ್ಣಪುಟ್ಟ ಗಾಯವಾಗಿದೆ.