ಮಡಿಕೇರಿ, ಫೆ. ೧೯: ಎಲ್ಲೆಲ್ಲೂ ಶಿವಜಪ... ವಿಶೇಷಪೂಜೆ - ಪುನಸ್ಕಾರಗಳು ಉಪವಾಸ... ಜಾಗರಣೆ; ಸಾಂಸ್ಕೃತಿಕ - ಕ್ರೀಡೆಗಳ ಸಂಭ್ರಮ ಸಂಗೀತ ಸುಧೆಯಂತಹ ಹತ್ತು ಹಲವು ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಕೈಲಾಸವಾಸಿ ಶಿವನ ಆರಾಧನೆ ಜಿಲ್ಲೆಯಾದ್ಯಂತ ಭಕ್ತಿ ಪೂರ್ವಕವಾಗಿ ಜರುಗಿತು.

ಶಿವರಾತ್ರಿಯ ಧಾರ್ಮಿಕ ಕಾರ್ಯಗಳೊಂದಿಗೆ ಶಿವಭಕ್ತರು ಈ ವಿಶೇಷ ದಿನವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು. ಜಿಲ್ಲೆಯ ಎಲ್ಲಾ ಶಿವದೇವಾಲಯಗಳು ಸೇರಿದಂತೆ ಪ್ರಮುಖ ದೇಗುಲಗಳಲ್ಲಿ ಶಿವರಾತ್ರಿಯ ಪೂಜೆ - ಪುನಸ್ಕಾರದೊಂದಿಗೆ ಶನಿವಾರ ಹಗಲು ಹಾಗೂ ರಾತ್ರಿ ಶಿವಜಪ ಮೊಳಗಿತು. ಶಿವರಾತ್ರಿಯ ಅಂಗವಾಗಿ ಉಪವಾಸ ಜಾಗರಣೆಯಲ್ಲೂ ಭಕ್ತ ಸಮೂಹ ಭಾಗಿಯಾಗಿತ್ತು. ಮನೆ ಮನೆಗಳಲ್ಲೂ ಭಕ್ತರು ವಿವಿಧ ಹೆಸರುಗಳ ಮೂಲಕ ಕರೆಯಲ್ಪಡುವ ಶಿವನನ್ನು ಆರಾಧಿಸುವ ಮೂಲಕ ಜಿಲ್ಲೆಯಾದ್ಯಂತ ಉತ್ಸವದ ಸಂಭ್ರಮ ಕಂಡು ಬಂದಿತು.

ಜಿಲ್ಲಾ ಕೇಂದ್ರವಾದ ಮಡಿಕೇರಿಯೂ ಸೇರಿದಂತೆ ನಗರದ ಅಕ್ಕಪಕ್ಕದ ದೇವಾಲಯಗಳಲ್ಲಿ, ಜಿಲ್ಲೆಯ ಇನ್ನಿತರ ಭಾಗಗಳಲ್ಲಿರುವ ಶಿವದೇಗುಲ ಸೇರಿದಂತೆ ಇತರ ದೈವಸನ್ನಿಧಿಗಳಲ್ಲೂ ಶಿವನ ಸ್ಮರಣೆಯೊಂದಿಗೆ ಧಾರ್ಮಿಕ ಹಾಗೂ ಇನ್ನಿತರ ವೈವಿಧ್ಯಮ ಕಾರ್ಯಕ್ರಮಗಳು ಜರುಗಿದವು.

ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯ ಮೇಕೇರಿಯ ಗೌರಿಶಂಕರ, ಶನಿವಾರಸಂತೆಯ ಮಳೆ- ಮಲ್ಲೇಶ್ವರ, ಕರ್ಣಂಗೇರಿಯ ರಾಜರಾಜೇಶ್ವರಿ, ಪೇರ್ಮಾಡು ಈಶ್ವರ, ಇರ್ಪು ಶ್ರೀ ರಾಮೇಶ್ವರ, ಕಡಗದಾಳು ಬೊಟ್ಲಪ್ಪ ದೇವಾಲಯ, ಮಡಿಕೇರಿಯ ವೀರಭದ್ರ ಮುನೀಶ್ವರ ದೇವಾಲಯ, ಬಸವೇಶ್ವರ ಸನ್ನಿಧಿ, ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯ ಭಾಗಮಂಡಲ ಸೇರಿದಂತೆ ನಾಡಿನೆಲ್ಲೆಡೆ ಭಕ್ತಿಪೂರ್ವಕವಾಗಿ ಶಿವರಾತ್ರಿಯ ಸಂಭ್ರಮ ಮೇಳೈಸಿತ್ತು.

ಮಡಿಕೇರಿಯ ಓಂಕಾರೇಶ್ವರ ದೇವಾಲಯದಲ್ಲಿ ಬೆಳಿಗ್ಗೆ ರುದ್ರಹೋಮ, ಮಹಾಪೂಜೆ, ಪ್ರಸಾದ ವಿನಿಯೋಗ ನಡೆಯಿತು. ಶಾಸಕ ಕೆ.ಜಿ. ಬೋಪಯ್ಯ ಪೂಜೆಯಲ್ಲಿ ಪಾಲ್ಗೊಂಡಿದ್ದರು. ರಾತ್ರಿ ೯ ಗಂಟೆಗೆ ಮಹಾಪೂಜೆ ಬಳಿಕ ಮುಂಜಾನೆವರೆಗೆ ಜಾಮಪೂಜಾ ವಿಧಿ ವಿಧಾನಗಳು ನೆರವೇರಿದವು. ದೇವಾಲಯ ಕಾರ್ಯನಿರ್ವಹಣಾಧಿಕಾರಿ ದೇವರಾಜ್, ದೇವಾಲಯ ಸಮಿತಿ ಮಾಜಿ ಅಧ್ಯಕ್ಷ ರಮೇಶ್ ಹೊಳ್ಳ ಮತ್ತಿತರರು ಹಾಜರಿದ್ದರು. ವೀರಭದ್ರ ಮುನೀಶ್ವರ ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ಮೃತ್ಯುಂಜಯ ಹೋಮ, ಅನ್ನದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಇದೇ ಸಂದರ್ಭ ಶ್ರೀ ಮಡಿವಾಳ ಮಾಚಿದೇವ ಮಹಾದ್ವಾರದ ಉದ್ಘಾಟನೆ ನೆರವೇರಿತು. ಅತಿಥಿಗಳಾಗಿ ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಜಿ. ರಾಜೇಂದ್ರ, ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಸದಸ್ಯರುಗಳಾದ ಕೆ.ಎಸ್. ರಮೇಶ್, ಎಸ್.ಸಿ. ಸತೀಶ್, ಮಡಿವಾಳ ಅಭಿವೃದ್ಧಿ ಸಂಘದ ಹಿರಿಯ ಸಲಹೆಗಾರರಾದ ಎಂ.ಎನ್. ಸುಬ್ರಮಣಿ, ಶಕುಂತಲಾ ಸುಬ್ರಮಣಿ, ಮುತ್ತಪ್ಪ ದೇವಾಲಯದ ಅಧ್ಯಕ್ಷ ಟಿ.ಕೆ. ಸುಧೀರ್, ರಾಜ್ಯ ಮಡಿವಾಳ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಾ. ಕಟೀಲ್ ಸಜೀವ ಮಡಿವಾಳ ಪಾಲ್ಗೊಂಡಿದ್ದರು.

ನಗರ ಮುಖ್ಯ ಬೀದಿಗಳಲ್ಲಿ ವೀರಭದ್ರ ಮುನೀಶ್ವರ ದೇವರ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು. ಪೂಜಾ ಕಾರ್ಯಕ್ರಮದಲ್ಲಿ ಶಾಸಕ ಬೋಪಯ್ಯ ಪಾಲ್ಗೊಂಡಿದ್ದರು. ೧೭೭೭ ಕೃತಕ ಗುಲಾಬಿಹೂಗಳಿಂದ ಶಿವಲಿಂಗ ರಚನೆ ಮಾಡಲಾಗಿತ್ತು. ಕರ್ಣಂಗೇರಿಯ ರಾಜರಾಜೇಶ್ವರಿ ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ಕಾಶಿಲಿಂಗಕ್ಕೆ ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ಪಂಚಲಿAಗಕ್ಕೆ ಪವಿತ್ರ ಗಂಗಾಜಲದಿAದ ಅಭಿಷೇಕ, ಶಿವನ ಮೂರ್ತಿಗೆ ಪುಷ್ಪಾರ್ಚನೆ, ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಬ್ರಹ್ಮಕುಮಾರೀಸ್ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ಧ್ವಜಾರೋಹಣ, ೮೭ ಜ್ಯೋತಿಗಳನ್ನು ಬೆಳಗಲಾಯಿತು.

ಬ್ರಹ್ಮಕುಮಾರೀಸ್ ಜಿಲ್ಲಾ ಸಂಚಾಲಕರಾದ ಗಾಯತ್ರಿಜಿ ಅವರು ಆಶೀರ್ವಚನ ನೀಡಿದರು. ಬೈಲುಕುಪ್ಪೆಯ ಟಿಬೆಟಿಯನ್ (ಮೊದಲ ಪುಟದಿಂದ) ಕ್ಯಾಂಪ್‌ನ ಗುರುಗಳು, ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಇತರರು ಪಾಲ್ಗೊಂಡರು. ಧ್ವಜಾರೋಹಣ ಸಂದರ್ಭ ಸ್ತಿçÃರೋಗ ತಜ್ಞರಾದ ಸುಮಂಗಲ, ಇಎನ್‌ಟಿ ವೈದ್ಯರಾದ ಮೋಹನ್ ಅಪ್ಪಾಜಿ, ನಿವೃತ್ತ ಏರ್ ಮಾರ್ಷಲ್ ನಂದಾ ಕಾರ್ಯಪ್ಪ ಪಾಲ್ಗೊಂಡಿದ್ದರು. ಮಡಿಕೇರಿ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ನಗರಾಧಿಪತಿ ಎಂದು ಖ್ಯಾತಿಗಳಿಸಿರುವ ಶಿವಲಿಂಗಕ್ಕೆ ವಿಶೇಷ ಕ್ಷೀರಾಭಿಷೇಕ ನಡೆಯಿತು. ಅರ್ಚಕ ವೆಂಕಟರಮಣ ಭಟ್ ಅವರಿಂದ ವಿಶೇಷ ಪೂಜೆ ನಡೆಯಿತು. ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು. ಮಡಿಕೇರಿಯ ವೈದಿಕ ಸಮಿತಿಯಿಂದ ಏಕದಶಾರುದ್ರ ಪಠಣ ನಡೆಯಿತು.ಮೇಕೇರಿ

ಮೇಕೇರಿ: ಮೇಕೇರಿಯ ಶ್ರೀ ಗೌರಿಶಂಕರ ದೇವಾಲದಲ್ಲಿ ಮಹಾಶಿವರಾತ್ರಿ ಮಹೋತ್ಸವ ವಿಜೃಂಭಣೆಯಿAದ ನಡೆಯಿತು. ಬೆಳಗ್ಗೆ ೯.೩೦ರಿಂದ ಮೇಕೇರಿಯ ಶಕ್ತಿನಗರ, ಕಾವೇರಿ ಬಡಾವಣೆ, ಸುಭಾಶ್ ನಗರ ಮತ್ತು ಮೇಕೇರಿ ಬಿಳಿಗೇರಿ ಜಂಕ್ಷನ್‌ನಿAದ ಚಂಡೆ ವಾದ್ಯ ಸಹಿತ ಮೆರವಣಿಗೆಯಲ್ಲಿ ಬಂದ ಭಕ್ತಾದಿಗಳು ಹೊರೆ ಕಾಣಿಕೆ ಸಮರ್ಪಿಸಿದರು. ಮಹಾ ಮೃತ್ಯುಂಜಯ ಹೋಮ, ರುದ್ರಾಭಿಷೇಕ, ಮಹಾಪೂಜೆ, ಅನ್ನ ಸಂತರ್ಪಣೆ ನೆರವೇರಿತು.

ಸಂಜೆ ೬ ರಿಂದ ವಿವಿಧ ಪೂಜೆಯೊಂದಿಗೆ ರುದ್ರಾಭಿಷೇಕ, ರಾತ್ರಿ ೯.೩೦ಕ್ಕೆ ರಂಗಪೂಜೆ, ಪ್ರಸಾದ ವಿತರಣೆ ನಡೆಯಿತು. ಶಿವರಾತ್ರಿ ಜಾಗರಣೆ ಹಿನ್ನೆಲೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಯಕ್ಷಗಾನ ನಾಟ್ಯ ವೈಭವ ಎಂಬ ವಿನೂತನ ಪ್ರದರ್ಶನ ನೆರೆದಿದ್ದವರ ಗಮನ ಸೆಳೆಯಿತು. ಭಾನುವಾರ ಬೆಳಿಗ್ಗೆ ೬ ಗಂಟೆಯಿAದ ಮಧ್ಯಾಹ್ನದವರೆಗೆ ವಿವಿಧ ಪೂಜೆ ಹಾಗೂ ಮಹಾಪೂಜೆ ನಡೆಯಿತು. ಬಳಿಕ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನೆರವೇರಿತು.

ಕೂಡಿಗೆ: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಉಮಾಮಹೇಶ್ವರ ದೇವಾಲಯ ಆವರಣದಲ್ಲಿ ಶಿವರಾತ್ರಿ ಹಬ್ಬದ ಅಂಗವಾಗಿ ವಿವಿಧ ಹೋಮ ಹವನಗಳು ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಬೆಳಿಗ್ಗೆಯಿಂದ ಶ್ರೀ ಮಹಾಗಣಪತಿ ಹೋಮ, ಮಹಾ ಮೃತ್ಯುಂಜಯ ಹೋಮ, ಶ್ರೀ ರುದ್ರಹೋಮ, ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ನಡೆದವು. ಸಂಜೆ ಶ್ರೀ ಉಮಾಮಹೇಶ್ವರ ಸ್ವಾಮಿ ಉತ್ಸವ ಮೂರ್ತಿಯ ಮೆರವಣಿಗೆಯು ಕೇರಳದ ಚಂಡೆ ವಾದ್ಯದೊಂದಿಗೆ ವಿದ್ಯುತ್ ಅಲಂಕೃತ ಭವ್ಯ ಮಂಟಪದಲ್ಲಿ ನಡೆಯಿತು. ಮಧ್ಯಾಹ್ನ ಮತ್ತು ರಾತ್ರಿ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭ ದೇವಾಲಯ ಸಮಿತಿಯ ಅಧ್ಯಕ್ಷ ಟಿ.ಎಂ. ಚಾಮಿ, ಉಪಾಧ್ಯಕ್ಷ ಎನ್, ಎಸ್ ಮುತ್ತಪ್ಪ, ಕಾರ್ಯದರ್ಶಿ ಬಿ, ಎಲ್ ಸುರೇಶ್, ಸದಸ್ಯರಾದ ಹೆಚ್, ಸಿ ಮೋಹನ್ ಕುಮಾರ್ ಮತ್ತಿತರರು ಇದ್ದರು. ಕುಶಾಲನಗರ: ಕುಶಾಲನಗರದ ಶ್ರೀ ಸೋಮೇಶ್ವರ ದೇವಾಲಯ, ಕಣಿವೆ ಶ್ರೀ ರಾಮಲಿಂಗೇಶ್ವರ ದೇವಸ್ಥಾನ, ಕೊಪ್ಪ ಗ್ರಾಮದ ಪುರಾತನ ಶಿಡ್ಲು ಮಲ್ಲಿಕಾರ್ಜುನ ದೇವಾಲಯ, ಅತ್ತೂರು ಶ್ರೀ ಪಂಚಲಿAಗೇಶ್ವರ ದೇವಸ್ಥಾನ, ಮಾದಾಪಟ್ಟಣ ಕಾಶಿ ವಿಶ್ವನಾಥ ದೇವಾಲಯ, ಗಂಧದಕೋಟೆ ಪುರಾತನ ಶಿವ ದೇವಾಲಯ ಸೇರಿದಂತೆ ಹಲವೆಡೆ ಶಿವರಾತ್ರಿ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಎಲ್ಲಾ ದೇವಾಲಯಗಳಲ್ಲಿ ಭಕ್ತಾದಿಗಳಿಗೆ ಅನ್ನಸಂಪರ್ಪಣೆ ನಡೆಯಿತು.

ಕುಶಾಲನಗರ ಶ್ರೀ ಅಯ್ಯಪ್ಪ ದೇವಾಲಯದಲ್ಲಿ ಲಕ್ಷದೀಪೋತ್ಸವ ಕಾರ್ಯಕ್ರಮ ಜರಗಿತು. ಕುಶಾಲನಗರ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ ಕಾರ್ಯಕ್ರಮಗಳು ನಡೆದವು.

ಶ್ರೀ ಸೋಮೇಶ್ವರ ಸ್ವಾಮಿ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ೨೪ ಗಂಟೆಗಳ ಕಾಲ ವಿಶೇಷ ಕಾರ್ಯಕ್ರಮಗಳು ಜರುಗಿದವು. ಮಹಾಮಂಗಳಾರತಿ, ಅಭಿಷೇಕ ಅರ್ಚನೆ ಪೂಜೆ, ಕಾರ್ಯಕ್ರಮಗಳು ಜರಗಿದವು. ಕಾವೇರಿ ನಿಸರ್ಗಧಾಮ ಬಳಿ ಇರುವ ಏಳು ಹೊಳೆ ಶಿವ ದೇವಾಲಯದಲ್ಲಿ ಅನ್ನದಾನ ಏರ್ಪಡಿಸಲಾಗಿತ್ತು.

ಚೆಟ್ಟಳ್ಳಿ : ಚೆಟ್ಟಳ್ಳಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಚೆಟ್ಟಳ್ಳಿ , ಜನಪರಹೋರಾಟ ಸಮಿತಿ, ಶ್ರೀ ವೀರಾಂಜನೇಯ ಯುವಕ ಸಂಘ, ಶ್ರೀ ಗೌರಿಗಣೆಶೋತ್ಸವ ಸಮಿತಿ ಚೆಟ್ಟಳ್ಳಿ , ಶ್ರೀ ವಿನಾಯಕ ದೇವಾಲಯ ಸಮಿತಿ ಕೂಡ್ಲೂರು ಚೆಟ್ಟಳ್ಳಿ ಇವುಗಳ ಸಂಯುಕ್ತಾಶ್ರಯದಲ್ಲಿ ಸಂಜೆ ೫ ಗಂಟೆಗೆ ಈರಳೆ ವಳಮುಡಿ ಗ್ರಾಮದಲ್ಲಿರುವ ಪಂಚಮುಖಿ ವಾಯುಪುತ್ರ ಮೂರ್ತಿಗೆ ಹಾಗೂ ಚೆಟ್ಟಳ್ಳಿ ಸಹಕಾರ ಸಂಘದ ಮುಖ್ಯ ಕಚೇರಿ ಮುಂದಿರುವ ಪಶುಪತಿನಾಥ, ಕಾವೇರಿಮಾತೆ, ಶ್ರೀ ಕೃಷ್ಣ, ಗೋಮಾತೆಗೆ ಹಾಗೂ ಶ್ರೀ ನರೇಂದ್ರ ಮೋದಿ ಸಹಕಾರ ಭವನದಲ್ಲಿರುವ ಶ್ರೀವಿನಾಯಕ, ವೀರಾಂಜನೇಯಹಾಗು ಮಹಾವಿಷ್ಣುವಿನ ಮೂರ್ತಿಗೆ ದೀಪಾರಾಧನೆ ಹಾಗೂ ವಿಶೇಷ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ನಂತರ ಪ್ರಸಾದ ವಿತರಣೆ ನೆರವೇರಿತು.

ಚೆಟ್ಟಳ್ಳಿ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಮತ್ತಿತರರು ಹಾಜರಿದ್ದರು. ಕಾರ್ಯಕ್ರಮದ ಅಂಗವಾಗಿ ಚೆಟ್ಟಳ್ಳಿ ಶ್ರೀ ಮೋದಿ ಭವನದಲ್ಲಿ ಸಹಕಾರ ಸಂಘದ ನಿರ್ದೇಶಕಿ ಪುತ್ತರಿರ ಸೀತಮ್ಮ ಮೊಣ್ಣಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯದಲ್ಲಿ ಕೃಷಿ ಇಲಾಖೆಯ ನಿವೃತ್ತ ಉಪ ನಿರ್ದೇಶಕ ರಾದ ರಾಜಶೇಖರ್ ಹಾಗೂ ಸಹಕಾರ ಸಂಘಗಳ ನಿವೃತ್ತ ಹಿರಿಯ ಲೆಕ್ಕ ಪರಿಶೋಧಕ ಡಿ.ಎನ್. ಚಂದ್ರಶೇಖರ್ ಇವರುಗಳನ್ನು ಪೇರಿಯನ ಜಯಾನಂದ ಸನ್ಮಾನಿಸಿದರು. ರಾತ್ರಿ ೭ ಗಂಟೆ ಬಳಿಕ ಗೋಣಿಕೊಪ್ಪಲಿನ ಯುವಗಾಯಕ ಅನ್ವಿತ್ ಕುಮಾರ್ ಸಿ.ಪಿ ಹಾಗೂ ದೀಪಿಕಾ ಉಡುಪಿ ಅವರಿಂದ ಗಾಯನ ಹಾಗೂ ಸುರಕ್ಷಾ ವೈಲಾಯ ಅವರಿಂದ ನೃತ್ಯ ಕಾರ್ಯಕ್ರಮ ನಡೆಯಿತು. ನಂತರ ಅನ್ನ ಸಂತರ್ಪಣೆ ನಡೆಯಿತು.

ವೀರಾಂಜನೇಯ ಯುವಕ ಸಂಘದ ಅಧ್ಯಕ್ಷ ಬಲ್ಲಾರಂಡ ಕಂಠಿ ಕಾರ್ಯಪ್ಪ, ಗೌರಿಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪುತ್ತರಿರ ಶಿವುನಂಜಪ್ಪ, ಜನಪರಹೋರಾಟ ಸಮಿತಿ ಅಧ್ಯಕ್ಷ ನೂಜಿಬೈಲು ನಾಣಯ್ಯ, ಶ್ರೀ ವಿನಾಯಕ ದೇವಾಲಯ ಸಮಿತಿ ಕೂಡ್ಲೂರು ಚೆಟ್ಟಳ್ಳಿಯ ಅಧ್ಯಕ್ಷ ಎನ್.ಎಸ್. ರವಿ, ಸಹಕಾರ ಸಂಘದ ಉಪಾಧ್ಯಕ್ಷ ಕಣಜಾಲು ಪೂವಯ್ಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಂದಿನಿ ಕೆ.ಎಸ್, ಆಂತರಿಕ ಲೆಕ್ಕಪರಿಶೋಧಕ ಹೆಚ್.ಬಿ. ರಮೇಶ್ ಸಂಘದ ನಿರ್ದೇಶಕರುಗಳು, ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.

ನಾಪೋಕ್ಲು: ನಾಪೋಕ್ಲುವಿನ ವಿವಿಧ ದೇವಾಲಯಗಳಲ್ಲಿ ಶಿವರಾತ್ರಿ ಆಚರಿಸಲಾಯಿತು. ಸಮೀಪದ ಪಾಲೂರು ಶ್ರೀ ಮಹಾಲಿಂಗೇಶ್ವರ ದೇವಾಲಯ, ಮಕ್ಕಿ ಶ್ರೀ ಶಾಸ್ತçವು ದೇವಾಲಯ, ಬಿದ್ದಾಟಂಡ ವಾಡೆಯ ಶ್ರೀ ಮಹಾದೇವ ದೇವಾಲಯ, ಕಕ್ಕುಂದ ಕಾಡು ಶ್ರೀ ಲಕ್ಷಿö್ಮ ವೆಂಕಟೇಶ್ವರ ದೇವಾಲಯ, ನೆಲಜಿ ಶ್ರೀ ಭಗವತಿ, ಇಗ್ಗುತ್ತಪ್ಪ ಸೇರಿದಂತೆ ಹಲವು ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಯಿತು.

ಪಾಲೂರು ಗ್ರಾಮದ ಮಹಾಲಿಂಗೇಶ್ವರ ದೇವಾಲಯದಲ್ಲಿ ಬೆಳಗಿನಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಪ್ರತಿ ವರ್ಷದಂತೆ ಈ ವರ್ಷವೂ ಗಂಗಾಜಲವನ್ನು ಭಕ್ತರಿಗೆ ವಿತರಿಸಲಾಯಿತು.

ಈ ಸಂದರ್ಭ ದೇವಾಲಯದ ತಕ್ಕ ಮುಖ್ಯಸ್ಥರು, ಪಾರುಪತ್ತೆಗಾರ ತೊರೆರ ಮನು, ಅರ್ಚಕ ಅರುಣ್ ಕುಮಾರ್ ಮತ್ತಿತರರು ಇದ್ದರು. ದೇವಾಲಯದ ಮುಖ್ಯ ಅರ್ಚಕ ದೇವಿ ಪ್ರಸಾದ್, ನಿವೃತ್ತ ಪ್ರಾಂಶುಪಾಲ ಬೈತಡ್ಕ ಕುಂಜಪ್ಪ, ಕಾಫಿ ಬೋರ್ಡ್ನ ನಿವೃತ್ತ ಅಧಿಕಾರಿ ಎ.ಪಿ. ಅನಂತಕುಮಾರ್ ಮಾತನಾಡಿದರು. ವೀರಾಜಪೇಟೆ: ಪಟ್ಟಣದ ತೆಲುಗು ಶೆಟ್ಟರ ಬೀದಿಯಲ್ಲಿನ ಇತಿಹಾಸ ಪ್ರಸಿದ್ಧ ಅಂಗಾಳಪರಮೇಶ್ವರಿ ದೇವಾಲಯದಲ್ಲಿ ಶಿವರಾತ್ರಿ ಉತ್ಸವವು ಪಂಚ ದಿನಗಳ ಕಾಲ ದೈವಿಕ ಕೈಂಕರ್ಯಗಳ ವಿವಿಧ ಪೂಜಾ ವಿಧಿ ವಿಧಾನಗಳಿಂದ ವಿಜೃಂಭಣೆಯಿAದ ನಡೆಯಿತು.

ವಿವಿಧ ಪೂಜಾ ವಿಧಿ ವಿಧಾನಗಳು ನಡೆದು ಮಧ್ಯಾಹ್ನ ಶ್ರೀ ದೇವಿಗೆ ಸರ್ವ ಅಲಂಕಾರಗಳು ನಡೆದು ವಿಶೇಷ ಮಹಾಪೂಜೆ ಬಳಿಕ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು. ಶಿವರಾತ್ರಿ ಮಹೋತ್ಸದ ಸಂದರ್ಭದಲ್ಲಿ ನಾಡಿನ ಭಕ್ತರು ದೇಗುಲಕ್ಕೆ ಆಗಮಿಸಿ ದೇವಿಯ ಅನುಗ್ರಹ ಪಡೆದುಕೊಂಡರು. ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿಯವರು ಇದ್ದರು.

ಮುಳ್ಳೂರು: ಆಲೂರುಸಿದ್ದಾಪುರ ಗ್ರಾ.ಪಂ.ವ್ಯಾಪ್ತಿಯ ಮಾಲಂಬಿ ಗ್ರಾಮದಲ್ಲಿರುವ ನೂರಾರು ವರ್ಷಗಳ ಇತಿಹಾಸ ಉಳ್ಳ ಶ್ರೀ ಮಳೆ ಮಲ್ಲೇಶ್ವರ ಬೆಟ್ಟದಲ್ಲಿ ಶನಿವಾರ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿತು. ದೇವಾಲಯದ ಗಭsðಗುಡಿಯಲ್ಲಿರುವ ಶ್ರೀ ಮಲ್ಲೇಶ್ವರ ಸ್ವಾಮಿ, ಶ್ರೀ ಗಣಪತಿ ದೇವರಿಗೆ ವಿಶೇಷ ಪೂಜಾ ವಿದಿ ವಿಧಾನ ನೆರವೇರಿಸಲಾಯಿತು. ಬೆಳಗ್ಗೆಯಿಂದ ಸಂಜೆಯವರೆಗೂ ಅಕ್ಕಪಕ್ಕದ ಗ್ರಾಮಗಳಿಂದ ಜಿಲ್ಲೆ, ಹೊರ ಜಿಲ್ಲೆಯಿಂದ ಸಾವಿರಾರು ಭಕ್ತರು ಬೆಟ್ಟವನ್ನೇರಿ ದೇವರಿಗೆ ಪೂಜೆ ಸಲ್ಲಿಸಿದರು. ಸುಮಾರು ೮ ಸಾವಿರಕ್ಕೂ ಅಧಿಕ ಭಕ್ತಾದಿಗಳು ಬೆಟ್ಟವನ್ನೇರಿ ಶಿವನ ದರ್ಶನ ಪಡೆದರು. ಭಕ್ತಾದಿಗಳಿಗೆ ದೇವಸ್ಥಾನ ಸಮಿತಿ ವತಿಯಿಂದ ಅನ್ನ ಸಂತರ್ಪಣೆ ನಡೆಯಿತು. ಹೆಗ್ಗುಳ ದೀಣೆಕೊಪ್ಪ ಗ್ರಾಮದ ಗೆಳೆಯರ ಬಳಗದವರು ಬೆಟ್ಟದ ದಾರಿ ಮಧ್ಯೆ ಭಕ್ತಾದಿಗಳಿಗೆ ಮಜ್ಜಿಗೆ ವಿತರಿಸಿದರು. ಅರ್ಚಕರಾದ ಲಿಂಗರಾಜು, ಬಾಲು, ದಿವ್ಯಕುಮಾರ್ ಪೂಜಾ ವಿದಿವಿಧಾನ ನೆರವೇರಿಸಿದರು.

ಗುಡ್ಡೆಹೊಸೂರು: ಸಮೀಪದ ಬೊಳ್ಳೂರು ಗ್ರಾಮದ ಸುಣ್ಣದಕೆರೆಯ ಶ್ರೀ ಮುನೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ವಿಶೇಷ ಪೂಜೆಯನ್ನು ನಡೆಸಲಾಯಿತು.ಸಿದ್ದಾಪುರ: ಬಾಡಗ ಬಾಣಂಗಾಲ ಗ್ರಾಮದ ಮೈಲಾಪುರದ ಸಿದ್ಧಾಪ್ಪಾಜಿ ದೇವಾಲಯದಲ್ಲಿ ಮಹಾಶಿವರಾತ್ರಿ ಉತ್ಸವವು ವಿವಿಧ ಪೂಜಾ ಕೈಂಕರ್ಯಗಳೊAದಿಗೆ ನಡೆಯಿತು.ಬೆಳಗ್ಗಿನ ಜಾವ ಗಣಪತಿ ಹೋಮ, ಗಂಗಾಪೂಜೆ ನಡೆಯಿತು.

ಶಂಕರ ಮತ್ತು ತಂಡದವರಿAದ ನಾದಸ್ವರ ಹುಣಸೂರು ತಂಡದಿAದ ಡೊಳ್ಳು ನಗಾರಿ ಕುಣಿತ ನಂತರ ಸಿದ್ದಪ್ಪಾಜಿ ಮೆರವಣಿಗೆ ಹಾಗೂ ದೊಡ್ಡಮ್ಮ ತಾಯಿ ಮೆರವಣಿಗೆ ಪೂಜೆಯೊಂದಿಗೆ ನೆರವೇರಿತು. ಮದ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ರಾತ್ರಿ ಪೊನ್ನಂಪೇಟೆಯ ಕಾವೇರಿ ಮೆಲೋಡಿಸ್ ತಂಡದಿAದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಶಾಸಕ ಕೆ.ಜಿ ಬೋಪಯ್ಯ, ದೇವಾಲಯದ ಪ್ರಮುಖರಾದ ಬಾಲಸ್ವಾಮಿ ಹಾಗೂ ಗಣೇಶ್ ಸ್ಥಳೀಯ ಜನ ಪ್ರತಿನಿಧಿಗಳು ಹಾಜರಿದ್ದರು.

ಭಾಗಮಂಡಲ : ಭಗಂಡೇಶ್ವರ ದೇವಾಲಯ ಹಾಗೂ ತಲಕಾವೇರಿ ಕ್ಷೇತ್ರಗಳಲ್ಲಿ ಮಹಾಶಿವರಾತ್ರಿ ಉತ್ಸವವನ್ನು ಶನಿವಾರ ವಿಜೃಂಭಣೆಯಿAದ ಆಚರಿಸಲಾಯಿತು. ಸುತ್ತಮುತ್ತಲ ಊರುಗಳಿಂದ ಆಗಮಿಸಿದ್ದ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.

ರುದ್ರಾಭಿಷೇಕ , ಶತರುದ್ರ, ಮಹಾಮಂಗಳಾರತಿ ಸೇರಿದಂತೆ ವಿವಿಧ ಕಾರ್ಯಕ್ರಮ ಜರುಗಿದವು . ಮಧ್ಯಾಹ್ನ ಭಕ್ತರಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಸಂಜೆ ಭಗಂಡೇಶ್ವರ ದೇವಾಲಯದಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿತು. ಉತ್ಸವದಲ್ಲಿ ಸಂಜೆ ನಡೆದ ದೇವರ ನೃತ್ಯ ಬಲಿಯನ್ನು ಭಕ್ತರು ವೀಕ್ಷಿಸಿದರು. ಕಾಸರಗೋಡಿನ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾಮಂಡಳಿ ಹಾಗೂ ಸುಳ್ಯದ ಯುವಕವೇದಿಕೆ ಕಲಾರಂಗ ವತಿಯಿಂದ ಶ್ರೀ ಕೃಷ್ಣ ಲೀಲಾಮೃತ ಕಂಸ ವದೆ ಶಿವ ತಪೋಭಂಗ ಯಕ್ಷಗಾನ ಬಯಲಾಟವನ್ನು ಏರ್ಪಡಿಸಲಾಗಿತ್ತು. ಸಿಡಿಮದ್ದು ಪ್ರದರ್ಶನದೊಂದಿಗೆ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅಪರ ಜಿಲ್ಲಾಧಿಕಾರಿ ನಂಜುAಡೇಗೌಡ. ಜಿಲ್ಲಾ ಪಂಚಾಯಿತಿ ಸಿಇಓ ಆಕಾಶ್, ತಕ್ಕರಾದ ಬಳ್ಳಡ್ಕ ಅಪ್ಪಾಜಿ, ಕೋಡಿ ಮೋಟಯ್ಯ ಪಂಚಾಯಿತಿ , ಪಂಚಾಯಿತಿ ಉಪಾಧ್ಯಕ್ಷ ಹೊಸೂರು ಸತೀಶ್ ಕುಮಾರ್, ಎಸ್.ಎಸ್. ಸಂಪತ್ ಕುಮಾರ್, ಪಾರುಪತ್ತೆಗಾರ ಪೊನ್ನಣ್ಣ ಇನ್ನಿತರರು ಉಪಸ್ಥಿತರಿದ್ದರು. ಕೂಡಿಗೆ: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು, ದೊಡ್ಡತ್ತೂರು ಗ್ರಾಮದಲ್ಲಿರುವ ಶ್ರೀ ಉದ್ಭವ ಗೌರಿಶಂಕರ ದೇವಸ್ಥಾನದಲ್ಲಿ ಶಿವರಾತ್ರಿ ಆಚರಣೆ ನಡೆಯಿತು.

ಹಾರಂಗಿ ನದಿಯಿಂದ ನೂರಾರು ಮಹಿಳೆಯರು ಗಂಗಾ ಪೂಜೆ ಮಾಡಿ ನಂತರ ನೂರಾರು ಕಳಸವನ್ನು ಮೆರವಣಿಗೆ ಮೂಲಕ ಹೊತ್ತು ತಂದು, ದೇವಸ್ಥಾನದಲ್ಲಿ ಕಳಸ ಸ್ಥಾಪನೆ ಮಾಡಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.

ಶನಿವಾರ ಬೆಳಿಗ್ಗೆ ೫ ಗಂಟೆಗೆ ಶ್ರೀ ಸ್ವಾಮಿಗೆ ಪಂಚಾಮೃತ ಅಭಿಷೇಕ, ಮಹಾರುದ್ರಾಭಿಷೇಕ, ಕಳಸ ಅಭಿಷೇಕ, ವಿಶೇಷ ಅಲಂಕಾರ, ರುದ್ರಹೋಮ, ಮತ್ತು ಮೃತುಂಜಯ ಹೋಮ, ಪಂಚಕಳಸ ಆರಾಧನೆ, ದುರ್ಗಾಹೋಮ, ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಅನ್ನಸಂರ್ತಣೆ ನಂತರ ರಾತ್ರಿ ಭಜನೆ ನಡೆಯಿತು.

ಈ ಸಂದರ್ಭ ದೇವಾಲಯ ಸಮಿತಿಯ ಅಧ್ಯಕ್ಷ ಡಿ. ರಾಜು, ಉಪಾಧ್ಯಕ್ಷ ಸಿ. ಎಂ. ರಾಮೇಗೌಡ, ಕಾರ್ಯದರ್ಶಿ ಕೆ.ಆರ್. ರವಿ, ಖಜಾಂಚಿ ಪರಮಶಿವ, ಜಿಲ್ಲಾ ಕುರುಬ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಪ್ರಭಾಕರ್, ಸಮಿತಿಯ ನಿರ್ದೇಶಕರಾದ ರಾಮು, ಗಣೇಶ್, ಉದಯಕುಮಾರ್, ಕುಮಾರಸ್ವಾಮಿ, ಅಶ್ವಿನಿ ಕುಮಾರ್, ಮಂಜು, ಸಿದ್ದರಾಜು, ಸೇರಿದಂತೆ ಸಮಿತಿಯ ಸದಸ್ಯರು ಹಾಜರಿದ್ದರು. (ಐದನೇ ಪುಟಕ್ಕೆ) (ನಾಲ್ಕನೇ ಪುಟದಿಂದ) ಸೋಮವಾರಪೇಟೆ: ಮಹಾಶಿವರಾತ್ರಿ ಹಬ್ಬವನ್ನು ಸೋಮವಾರಪೇಟೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಶ್ರದ್ಧಾಭಕ್ತಿಯೊಂದಿಗೆ ಆಚರಿಸಲಾಯಿತು. ೧೦೮ ಎಳನೀರು ಅಭಿಷೇಕ: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಸಿನಕುಪ್ಪೆ ಸಿದ್ದಲಿಂಗಪುರ ಗ್ರಾಮದಲ್ಲಿರುವ ಶ್ರೀ ಮಂಜುನಾಥಸ್ವಾಮಿ ದೇವಾಲಯದಲ್ಲಿ ನಿನ್ನೆ ಬೆಳಗ್ಗೆಯಿಂದ ಇಂದು ಬೆಳಗ್ಗಿನವರೆಗೂ ವಿಶೇಷ ಪೂಜೆಗಳು ನಡೆದವು.

ದೇವಾಲಯದ ಪ್ರಧಾನ ಗುರುಗಳಾದ ಶ್ರೀ ರಾಜೇಶ್‌ನಾಥ್‌ಜೀ ಅವರ ಮಾರ್ಗದರ್ಶನದಲ್ಲಿ, ಪ್ರಧಾನ ಅರ್ಚಕ ಜಗದೀಶ್ ಉಡುಪ ಅವರ ಪೌರೋಹಿತ್ವದಲ್ಲಿ ಮಂಜುನಾಥಸ್ವಾಮಿ ದೇವರಿಗೆ ಹಾಲಿನ ಅಭೀಷೇಕ, ೧೧೦೮ ಎಳನೀರು ಅಭಿಷೇಕ, ಕಬ್ಬಿನ ಹಾಲಿನ ಅಭಿಷೇಕ, ಕಲಶಾಭಿಷೇಕ, ಪಂಚಾಮೃತ ಅಭಿಷೇಕ, ಜೇನುತುಪ್ಪದ ಅಭಿಷೇಕ, ಜಲಾಭಿಷೇಕ, ಭಸ್ಮಾಭಿಷೇಕ ಪೂಜೆಗಳು ನಡೆದವು.

ಇದರೊಂದಿಗೆ ದೇವಾಲಯದಲ್ಲಿ ರುದ್ರಾಭಿಷೇಕ, ರುದ್ರಹೋಮ, ಏಕದಶವಾರ ರುದ್ರಾಭಿಷೇಕ, ಪೂರ್ಣಾಹುತಿ ಸೇರಿದಂತೆ ಇತರ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ಜರುಗಿತು. ದೇವಾಲಯದಲ್ಲಿ ನಿನ್ನೆ ರಾತ್ರಿಯಿಂದ ಇಂದು ಬೆಳಗ್ಗಿನವರೆಗೂ ಜಾಗರಣೆ ಹಾಗೂ ಭಜನಾ ಕಾರ್ಯಕ್ರಮ ಜರುಗಿತು.

ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾಪಂಡ ಮುತ್ತಪ್ಪ, ಕಾರ್ಯಾಧ್ಯಕ್ಷ ನಾಪಂಡ ಮುದ್ದಪ್ಪ, ದೇವಾಲಯ ಸಮಿತಿ ಅಧ್ಯಕ್ಷ ಎಂ.ಸಿ. ಮೋಹನ್, ಕಾರ್ಯದರ್ಶಿಗಳಾದ ಪ್ರಕಾಶ್, ರಮೇಶ್ ಸೇರಿದಂತೆ ಸಾವಿರಾರು ಭಕ್ತಾದಿಗಳು ಪೂಜಾ ಕಾರ್ಯದಲ್ಲಿ ಭಾಗಿಯಾಗಿದ್ದರು. ಇಂದು ಬೆಳಿಗ್ಗೆ ಭಕ್ತಾದಿಗಳಿಗೆ ಪವಿತ್ರ ತೀರ್ಥ ಸ್ನಾನ ನಡೆಯಿತು.

ಶಾಂತಳ್ಳಿ ಗ್ರಾಮದ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಸಂಜೆ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ವಿಭಾಗದಲ್ಲಿ ಮಡಿಕೆ ಹೊಡೆಯುವ ಸ್ಪರ್ಧೆ ಮತ್ತು ಡ್ರಂಗೆ ಚೆಂಡು ಹಾಕುವ ಸ್ಪರ್ಧೆಗಳು ನಡೆದವು. ಈ ಸಂದರ್ಭ ದೇವ