ಮುಳ್ಳೂರು, ಫೆ. ೧೯: ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಜಿಲ್ಲೆಯ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.
ಸೋಮವಾರಪೇಟೆ ತಾಲೂಕು, ಶನಿವಾರಸಂತೆ ಸಮೀಪದ ಗುಡುಗಳಲೆಯಲ್ಲಿ ನೆಲಸಿರುವ ನಿವೃತ್ತ ಶಿಕ್ಷಕ ರವಿ ಮತ್ತು ಹಂಡ್ಲಿ ಸರಕಾರಿ ಪ್ರೌಢಶಾಲೆಯಲ್ಲಿ
ನೀರಿನಲ್ಲಿ ಮುಳುಗಿ ಸಾವು
(ಮೊದಲ ಪುಟದಿಂದ) ಸೇವೆಸಲ್ಲಿಸುತ್ತಿರುವ ಶಿಕ್ಷಕಿ ನಳಿನಿ ದಂಪತಿ ಪುತ್ರ ಜಗತ್ (೨೨) ಮೃತ ದುರ್ಧೈವಿ. ೩ನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಯಾಗಿರುವ ಜಗತ್ ಶನಿವಾರ ತರಗತಿಗೆ ಬಿಡುವು ಇದ್ದ ಹಿನ್ನೆಲೆಯಲ್ಲಿ ಸ್ನೇಹಿತರೊಂದಿಗೆ ನದಿಯೊಂದರಲ್ಲಿ ಈಜಾಡುಡುತ್ತಿದ್ದ ಸಂದರ್ಭ ನೀರಿಲ್ಲಿ ಮುಳುಗಿ ಮೃತಪಟ್ಟಿದ್ದಾರೆ.