ಗೋಣಿಕೊಪ್ಪ ವರದಿ, ಫೆ. ೨೦ : ತಾ. ೨೨, ೨೩ ರಂದು ನಡೆಯುವ ಪಯ್ಯಾವೂರ್ ಹಬ್ಬಕ್ಕೆ ವಾಡಿಕೆಯಂತೆ ಕಡಿಯತ್ನಾಡ್‌ಗೆ ಸೇರಿದ ಕುಟುಂಬಸ್ಥರು ನಾಡ್‌ಎತ್ತ್ ಪೋರಾಟದ ಮೂಲಕ ತೆರಳಿದರು.

ಕಡಿಯತ್ನಾಡ್‌ಗೆ ಸೇರುವ ಕರಡ, ಪಾಲಂಗಾಲ, ಕರಿನೆರವಂಡ, ಪಟ್ರಪಂಡ, ಐತಿಚಂಡ, ಬೇಪಡಿಯಂಡ, ವಾನಂಡ, ಕರ್ತಂಡ ಕುಟುಂಬದ ಪ್ರಮುಖರು ಎತ್ತ್ಪೋರಾಟ ಮೂಲಕ ಪಾಲ್ಗೊಂಡರು. ಎತ್ತುಗಳಲ್ಲಿ ಅನ್ನದಾನಕ್ಕೆ ಬೇಕಾಗುವ ಅಕ್ಕಿ ಹೊತ್ತು ತೆರಳಲಾಯಿತು. ತಾ. ೨೨, ೨೩ ರಂದು ನಡೆಯುವ ಪತ್ತೂಟ್ ಕಾರ್ಯದಲ್ಲಿ ಪಾಲ್ಗೊಳ್ಳಲು ಒಂದಾಗಿ ತೆರಳಿದರು. ಪತ್ತೂಟ್‌ನಲ್ಲಿ ಪ್ರಸಾದವಾಗಿ ನೀಡುವ ಬಾಳೆ ಕಾಯ್ಚೆಗೆ ಸೋಮವಾರ ಬಾಳೆಗೊನೆಯನ್ನು ಹಣ್ಣು ಮಾಡಲು ಗುಂಡಿಯಲ್ಲಿ ಇಡುವ ಶಾಸ್ತç ನಡೆಯಿತು. ದೇವರ ಮೂರ್ತಿ ಪ್ರದಕ್ಷಿಣೆ ನಡೆಯಿತು.