ಮುಳ್ಳೂರು, ಫೆ. ೧೯: ಶೌಚಗುಂಡಿಗೆ ಬಿದ್ದು ಕಾಡಾನೆ ಮೃತಪಟ್ಟ ಘಟನೆ ಶನಿವಾರ ಮುಂಜಾನೆ ಎಳನೀರುಗುಂಡಿ ಗ್ರಾಮದಲ್ಲಿ ನಡೆದಿದೆ.
ಶನಿವಾರಸಂತೆ ಹೋಬಳಿ ವ್ಯಾಪ್ತಿಯ ಎಳನೀರುಗುಂಡಿ ಗ್ರಾಮದ ಚಂದ್ರಶೇಖರ್ ಎಂಬವರ ಕಾಫಿ ತೋಟದಲ್ಲಿ ನೀರಾವರಿ ಸೌಲಭ್ಯಕ್ಕಾಗಿ ನಿರ್ಮಿಸಿದ ಶೌಚಾಲಯ ಗುಂಡಿಗೆ ಸುಮಾರು ೨೦ ವರ್ಷದ ಹೆಣ್ಣಾನೆ ಯೊಂದು ಬಿದ್ದು ಮೃತಪಟ್ಟಿದೆ.
ಪಕ್ಕದ ಮೀಸಲು ಅರಣ್ಯದಿಂದ ಹೆಣ್ಣಾನೆ
(ಮೊದಲ ಪುಟದಿಂದ) ಸೇರಿದಂತೆ ೩ ಕಾಡಾನೆ ಹಿಂಡು ತೋಟದೊಳಗೆ ಬಾಳೆ ತಿನ್ನಲೆಂದು ನುಸುಳಿದೆ. ಈ ಸಂದರ್ಭದಲ್ಲಿ ಹೆಣ್ಣಾನೆ ಆಕಸ್ಮಿಕವಾಗಿ ಸುಮಾರು ೧೦ ಅಡಿಯಷ್ಟು ಆಳದ ಗುಂಡಿಗೆ ಬಿದ್ದಿದೆ. ನೀರಿನೊಳಗೆ ಬಿದ್ದ ಆನೆಗೆ ಹೊರ ಬರಲು ಸಾಧ್ಯವಾಗದೆ ಉಸಿರುಗಟ್ಟಿ ಮೃತಪಟ್ಟಿದೆ. ಶನಿವಾರ ಬೆಳಿಗ್ಗೆ ಕಾರ್ಮಿಕರು ತೋಟಕ್ಕೆ ತೆರಳಿದ ಸಂದರ್ಭ ದುರ್ಘಟನೆ ಬೆಳಕಿಗೆ ಬಂದಿದೆ.
ಘಟನಾ ಸ್ಥಳದಲ್ಲಿ ಎರಡು ಮೂರು ಕಾಡಾನೆಗಳು ಸಂಚರಿಸುತ್ತಿರುವುದರಿAದ ಕಾರ್ಮಿಕರು, ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ಸ್ಥಳೀಯರಿಂದ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಶನಿವಾರಸಂತೆ ಅರಣ್ಯ ವಲಯಾಧಿಕಾರಿ ಪ್ರಪುಲ್ಕುಮಾರ್ ಶೆಟ್ಟಿ, ಸಿಬ್ಬಂದಿ ಪರಿಶೀಲಿಸಿ ಆನೆಯ ಮೃತ ದೇಹವನ್ನು ಹೊರತೆಗೆದು, ಶನಿವಾರಸಂತೆ ಪಶುವೈದ್ಯಾಧಿಕಾರಿ ಡಾ. ಸತೀಶ್ ಮರಣೋತ್ತರ ಪರೀಕ್ಷೆ ನಡೆಸಿದರು. ಪಕ್ಕದ ಮೀಸಲು ಅರಣ್ಯದಲ್ಲಿ ಆನೆಯ ಶವ ಸಂಸ್ಕಾರ ಮಾಡಲಾಯಿತು.