ಮಡಿಕೇರಿ, ಫೆ. ೨೦: ನಗರದ ಹೊರವಲಯದಲ್ಲಿ ಕೆ. ನಿಡುಗಣೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಪ್ರವಾಸಿ ತಾಣವಾದ ಅಬ್ಬಿಫಾಲ್ಸ್ನಲ್ಲಿನ ಟಿಕೆಟ್ (ಪ್ರವೇಶ ಶುಲ್ಕ) ಸಂಗ್ರಹ ವಿಚಾರ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಅಬ್ಬಿಫಾಲ್ಸ್ ಇರುವ ಜಾಗ ಖಾಸಗಿ ಸ್ಥಳವಾಗಿದ್ದು, ಇದು ನೆರವಂಡ ನಾಣಯ್ಯ ಹಾಗೂ ಕುಟುಂಬದವರಿಗೆ ಸೇರಿದೆ. ಇಲ್ಲಿಗೆ ತೆರಳಲು ಈ ಹಿಂದೆ ಕುಟುಂಬದವರು ಜಾಗ ಬಿಟ್ಟುಕೊಟ್ಟಿದ್ದಾರೆ. ಆದರೆ ಇದು ದಾನವಾಗಿ ನೀಡಿದ್ದಲ್ಲ. ಬದಲಿಗೆ ಪ್ರವಾಸಿಗರನ್ನು ಉಚಿತವಾಗಿ ವೀಕ್ಷಣೆಗೆ ಬಿಡಬೇಕು ಎಂಬ ಒಡಂಬಡಿಕೆ ಮೂಲಕ ದಾರಿಯನ್ನು ಬಿಡಲಾಗಿದೆ.
ಆದರೆ ಕೆಲವು ತಿಂಗಳುಗಳಿAದ ಪಂಚಾಯಿತಿ ಇಲ್ಲಿ ಟಿಕೆಟ್ ಕೌಂಟರ್ ತೆಗೆದು ಜನರಿಂದ ಹಣ ವಸೂಲಿ ಮಾಡುತ್ತಿರುವುದು ಕಾನೂನು ಬಾಹಿರವಾಗಿದೆ. ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ ಸೇರಿದಂತೆ ಸಂಬAಧಿಸಿದ ಇತರರಿಗೆ ದೂರು ನೀಡಲಾಗಿದೆ ಎಂಬುದು ಕುಟುಂಬದವರ ವಾದ. ಇದೀಗ ನಿನ್ನೆ ಸ್ಥಳಕ್ಕೆ ತೆರಳಿದ್ದ ನೆರವಂಡ ನಾಣಯ್ಯ ಅವರ ಪುತ್ರಿ, ನಿವೃತ್ತ ಎಸ್.ಪಿ. ಇಂದಿರಾ ನಾಣಯ್ಯ ಅವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಟಿಕೆಟ್ ಸಂಗ್ರಹ ಮಾಡದಂತೆ ತಾಕೀತು ಮಾಡಿ ಕೌಂಟರ್ ಮುಚ್ಚಿಸಿದ್ದರು. ಮತ್ತೆಯೂ ಇದಕ್ಕೆ ಮುಂದಾದಲ್ಲಿ ಗೇಟ್ಗೆ ಬೀಗ ಜಡಿಯುವುದಾಗಿ ಅವರು ಸೂಚಿಸಿ ಮರಳಿದ್ದಾರೆ.
ಇದೀಗ ಸೋಮವಾರದಂದು ಸ್ಥಳಕ್ಕೆ ಪಂಚಾಯಿತಿ ಪ್ರಮುಖರು, ಸಿಬ್ಬಂದಿಗಳು ತೆರಳಿ ಮತ್ತೆ ಟಿಕೆಟ್ ಸಂಗ್ರಹ ಮಾಡುತ್ತಿದ್ದಾರೆ. ಅಲ್ಲದೆ ಟಿಕೆಟ್ ಸಂಗ್ರಹಕ್ಕೆ ಇಂದಿರಾ ನಾಣಯ್ಯ ಅವರು ಅಡ್ಡಿಪಡಿಸಿದ್ದಾರೆ.
ನಿನ್ನೆ ಸ್ಥಳಕ್ಕೆ ತೆರಳಿದ್ದ ನೆರವಂಡ ನಾಣಯ್ಯ ಅವರ ಪುತ್ರಿ, ನಿವೃತ್ತ ಎಸ್.ಪಿ. ಇಂದಿರಾ ನಾಣಯ್ಯ ಅವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಟಿಕೆಟ್ ಸಂಗ್ರಹ ಮಾಡದಂತೆ ತಾಕೀತು ಮಾಡಿ ಕೌಂಟರ್ ಮುಚ್ಚಿಸಿದ್ದರು. ಮತ್ತೆಯೂ ಇದಕ್ಕೆ ಮುಂದಾದಲ್ಲಿ ಗೇಟ್ಗೆ ಬೀಗ ಜಡಿಯುವುದಾಗಿ ಅವರು ಸೂಚಿಸಿ ಮರಳಿದ್ದಾರೆ.
ಇದೀಗ ಸೋಮವಾರದಂದು ಸ್ಥಳಕ್ಕೆ ಪಂಚಾಯಿತಿ ಪ್ರಮುಖರು, ಸಿಬ್ಬಂದಿಗಳು ತೆರಳಿ ಮತ್ತೆ ಟಿಕೆಟ್ ಸಂಗ್ರಹ ಮಾಡುತ್ತಿದ್ದಾರೆ. ಅಲ್ಲದೆ ಟಿಕೆಟ್ ಸಂಗ್ರಹಕ್ಕೆ ಇಂದಿರಾ ನಾಣಯ್ಯ ಅವರು ಅಡ್ಡಿಪಡಿಸಿದ್ದಾರೆ.
ಕಾರಿಗಳು ತಿಳಿಸಿದ್ದಾರೆನ್ನಲಾಗಿದೆ.
ಜಿಲ್ಲಾಧಿಕಾರಿಗಳ ಹಾಗೂ ಸಂಬAಧಿಸಿದವರ ತೀರ್ಮಾನದ ನಂತರ ಮುಂದಿನ ನಿಲುವಿಗೆ ಬರುವುದಾಗಿ ಇಂದಿರಾ ನಾಣಯ್ಯ ಅವರು ಪ್ರತಿಕ್ರಿಯಿಸಿದ್ದಾರೆ. ಈ ವಿವಾದ ಮುಂದೆ ಯಾವ ಹಂತಕ್ಕೆ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.