ಗೋಣಿಕೊಪ್ಪ ವರದಿ, ಫೆ. ೨೦: ವಿ.ಎಸ್. ಕರಾಟೆ ಅಕಾಡೆಮಿ ವತಿಯಿಂದ ಮೈಸೂರು ಮಹಾರಾಜ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ರಾಷ್ಟçಮಟ್ಟದ ಮುಕ್ತ ಕರಾಟೆ ಪಂದ್ಯಾವಳಿಯಲ್ಲಿ ಅರುಣ್ ಮಾಚಯ್ಯ ನೇತೃತ್ವದ ಜೆನ್‌ಶಿಟೋರಿಯೋ ಕರಾಟೆ ಸಂಸ್ಥೆಯ ಹುದಿಕೇರಿ ಶಾಖೆಯ ನಾಲ್ವರಿಗೆ ಪದಕ ಲಭಿಸಿದೆ.
ನಿಕಿತ್ ನಾಚಪ್ಪಗೆ ೨ ಚಿನ್ನ, ಶಾನ್ ಬಿದ್ದಣ್ಣಗೆ ಬೆಳ್ಳಿ, ಶಾನ್ ನಂಜಪ್ಪಗೆ ಚಿನ್ನ ಮತ್ತು ಕಂಚು, ತೇಜಲ್ ಮಾದಪ್ಪಗೆ ೨ ಕಂಚು ಲಭಿಸಿದೆ. ಇವರಿಗೆ ಕಳ್ಳಿಕಂಡ ಕಿಶೋರ್ ತರಬೇತಿ ನೀಡಿದ್ದಾರೆ.