ಮಡಿಕೇರಿ, ಫೆ. ೨೦: ದೇಶದ ರಕ್ಷಣಾ ಪಡೆಗೆ ಸಂಬAಧಿಸಿದAತೆ ಹೊಸದಾಗಿ ರೂಪಿಸಿದ ಯೋಜನೆ ಯಂತೆ ಸೇನೆಗೆ ಆಯ್ಕೆಗೊಂಡಿರುವ ‘ಅಗ್ನಿವೀರ್’ ಸೇನಾ ತರಬೇತಿ ಯಲ್ಲಿರುವ ಮೊದಲ ಬ್ಯಾಚ್‌ನ ಸೈನಿಕರೊಂದಿಗೆ ಕೊಡಗಿನವರಾದ ಲೆಫ್ಟಿನೆಂಟ್ ಜನರಲ್ ಚೆನ್ನೀರ ಬನ್ಸಿ ಪೊನ್ನಪ್ಪ ಅವರು ಸಮಾಲೋಚನೆ ನಡೆಸುತ್ತಿರುವ ಚಿತ್ರವಿದು.

ಲೆಫ್ಟಿನೆಂಟ್ ಜನರಲ್ ರ‍್ಯಾಂಕ್‌ನೊAದಿಗೆ

(ಮೊದಲ ಪುಟದಿಂದ) ಅಡ್ಜುಟೆಂಟ್ ಜನರಲ್ ಜವಾಬ್ದಾರಿಯನ್ನೂ ಹೊಂದಿರುವ ಬನ್ಸಿ ಪೊನ್ನಪ್ಪ ಅವರು ಮಧ್ಯಪ್ರದೇಶದ ಸೌಗಾರ್‌ನಲ್ಲಿ ಮಹಾರ್ ರೆಜಿಮೆಂಟ್‌ನ ತರಬೇತಿ ಕ್ಯಾಂಪ್‌ನಲ್ಲಿ ತರಬೇತಿಯಲ್ಲಿರುವವರೊಂದಿಗೆ ಚರ್ಚಿಸಿದರು. ತರಬೇತಿಯ ಅಗತ್ಯತೆ, ಭಾರತೀಯ ಸೇನೆಯ ಮಹತ್ವದ ಬಗ್ಗೆ ಅಗ್ನಿವೀರರಿಗೆ ವಿವರಿಸಿದ ಅವರು, ಹೊಸ ಸೈನಿಕರಿಗೆ ಉತ್ತೇಜನ ತುಂಬಿದರು. ಈ ಬಗ್ಗೆ ಸೇನೆಯ ಮೂಲಕ ಪ್ರಕಟಣೆ ನೀಡಲಾಗಿದೆ.