ಮಡಿಕೇರಿ, ಫೆ. ೨೦: ಮುಂಜಾನೆ ೩ ಗಂಟೆಯಿAದಲೇ ೧೦-೧೫ ನಿಮಿಷಕ್ಕೊಂದರAತೆ ಜೋರಾಗಿ ಸೈರನ್ ಸದ್ದು ಮಾಡುತ್ತಾ ವೇಗದಿಂದ ಚಲಿಸುತ್ತಿದ್ದ ಅಗ್ನಿಶಾಮಕದಳದ ವಾಹನಗಳು ಗಾಡ ನಿದ್ರೆಯಲ್ಲಿದ್ದ ಮಡಿಕೇರಿ ನಗರದ ಜನತೆಯನ್ನು ಆತಂಕಕ್ಕೆ ಒಳಪಡುವಂತೆ ಮಾಡಿತು. ಮಧ್ಯಾಹ್ನ ೧ ಗಂಟೆಯವರೆಗೂ ಇದೇ ರೀತಿ ಸೈರನ್ ಸದ್ದು ಮಾಡುತ್ತಾ ೪ ವಾಹನಗಳು ಒಟ್ಟಾಗಿ ಸುಮಾರು ೭೦ ಬಾರಿಯಾದರೂ ನೀರು ತುಂಬಿಸಿಕೊAಡು ನಗರದ ಕೈಗಾರಿಕಾ ಬಡಾವಣೆಯಲ್ಲಿನ ಕಟ್ಟಡವೊಂದರಲ್ಲಿನ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಯಿತು. ಮಧ್ಯಾಹ್ನದ ಬಳಿಕ ಬೆಂಕಿ ಪ್ರಮಾಣ ಕೊಂಚ ಕಡಿಮೆಯಾದರೂ ಸಂಜೆವರೆಗೂ ಕಾರ್ಯಾಚರಣೆ ಮುಂದುವರೆಯಿತು.

ಮಡಿಕೇರಿಯ ಕೈಗಾರಿಕಾ ಬಡಾವಣೆಯಲ್ಲಿನ ಪ್ರಶಾಂತ್ ವುಡ್ ವರ್ಕ್ಸ್ಗೆ ಸೇರಿದ ಪೀಠೋಪಕರಣ ತಯಾರಿಕಾ ಘಟಕದಲ್ಲಿ ನಿನ್ನೆ ನಡುರಾತ್ರಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಇಂದು ಸಂಜೆವರೆಗೂ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಅಗ್ನಿಶಾಮಕದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಯಿತು. ಮರದ ಪೀಠೋಪಕರಣ ತಯಾರಿಕ ಘಟಕವು ಮರದ ತುಂಡುಗಳಿAದ ಕೂಡಿದ್ದ ಕಾರಣ ಬೆಂಕಿ ಸುಲಭವಾಗಿ ಆರದಿದ್ದುದರಿಂದ, ಮಧ್ಯಾಹ್ನ ವೇಳೆಗೆ ಅಗ್ನಿ ಪ್ರಮಾಣ ಕಡಿಮೆಯಾದ ಬಳಿಕ ಸ್ಥಳೀಯರ ಸಹಕಾರದಿಂದ ಮರದ ತುಂಡುಗಳನ್ನು ಘಟಕದಿಂದ ಹೊರತೆಗೆದು ನಂತರ ಸಂಪೂರ್ಣವಾಗಿ ಬೆಂಕಿ ನಂದಿಸುವ ಕಾರ್ಯವನ್ನು ಅಗ್ನಿಶಾಮಕದಳ ಸಂಜೆಯವರೆಗೂ ನಡೆಸಿತು.

ಮಧ್ಯರಾತ್ರಿ ಸುಮಾರು ೧:೩೦ ಗಂಟೆಗೆ ಬೆಂಕಿ ಕಾಣಿಸಿಕೊಂಡಿದ್ದು, ಈ ಸಂದರ್ಭ ಪೀಠೋಪಕರಣ ಘಟಕದಲ್ಲಿ ಇಬ್ಬರು ಸಿಬ್ಬಂದಿ ಬೆಂಕಿಯ ಬಗ್ಗೆ ಯಾವುದೇ ಅರಿವಿಲ್ಲದೆ ಗಾಢ ನಿದ್ರೆಯಲ್ಲಿದ್ದರು. ಪಕ್ಕದಲ್ಲೇ ಇದ್ದ ಬಿ.ಎಫ್.ಪಿ ಕಟ್ಟಡದಲ್ಲಿನ ಸಿಬ್ಬಂದಿ ಸಂತೋಷ್ ಬೆಂಕಿ ಹತ್ತಿಕೊಂಡದನ್ನು ಗಮನಿಸಿದರು. ತಕ್ಷಣ ಕಾರ್ಯೋನ್ಮುಖರಾದ ಅವರು ಅಗ್ನಿಶಾಮಕದಳಕ್ಕೆ ಕರೆ ಮಾಡಿದ್ದಾರೆ. ಈ ನಡುವೆ ಪೀಠೋಪಕರಣ ಘಟಕದ ಮೊದಲನೆ ಮಹಡಿಯಲ್ಲಿ ಮಲಗಿದ್ದ ಇಬ್ಬರನ್ನು ಜೋರಾಗಿ ಕಿರುಚುವ ಮೂಲಕÀ ಸಂತೋಷ್ ಎಬ್ಬಿಸಿದ್ದಾರೆ. ಸುಮಾರು ೩ ಗಂಟೆಗೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕÀದಳ ಸಿಬ್ಬಂದಿ ಏಣಿ ಸಹಾಯದಿಂದ ಮೊದಲನೆ ಮಹಡಿ ಏರಿ ಕಿಟಕಿಯ ರಾಡ್‌ಗಳನ್ನು ಕತ್ತರಿಸಿ ಇಬ್ಬರನ್ನು ರಕ್ಷಿಸಿ ನಂತರ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾದರು. ಕೆಲ ನಿಮಿಷಗಳು ತಡವಾಗಿದ್ದರೆ ಇಬ್ಬರೂ ಉಸಿರುಗಟ್ಟಿ ಪ್ರಾಣ ಕಳೆದುಕೊಳ್ಳುವ ಅಪಾಯವಿತ್ತು.

(ಮೊದಲ ಪುಟದಿಂದ)

ಲಕ್ಷಾನುಗಟ್ಟಲೆ ನೀರು ಬಳಕೆ

೧ ಅಗ್ನಿಶಾಮಕ ವಾಹನವು ೪,೫೦೦ ಲೀಟರ್ ನೀರು ಹೊರುವ ಸಾಮರ್ಥ್ಯ ಹೊಂದಿದ್ದು, ಇಂತಹ ೪ ವಾಹನಗಳನ್ನು ಬಳಸಿ ಸುಮಾರು ೭೦ಕ್ಕೂ ಹೆಚ್ಚು ಬಾರಿ ನಗರದ ಮೈತ್ರಿ ಹಾಲ್ ಬಳಿಯಿಂದ ವಾಹನಗಳು ನೀರು ತುಂಬಿಸಿಕೊAಡು ಬಂದು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡವು. ಮಡಿಕೇರಿಯ ೨ ವಾಹನಗಳು, ಗೋಣಿಕೊಪ್ಪ ಹಾಗೂ ಕುಶಾಲನಗರದಿಂದ ತಲಾ ೨ ವಾಹನಗಳು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾಗಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಚಂದನ್.ಪಿ ಅವರು ಮಾಹಿತಿ ಇತ್ತರು. ಮುಖ್ಯ ಅಗ್ನಿಶಾಮಕ ಅಧಿಕಾರಿ ಜಯರಾಮ್, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್, ಮಡಿಕೇರಿ ನಗರ ವೃತ್ತ ನಿರೀಕ್ಷಕ ಶಿವಶಂಕರ್ ಅವರುಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ಈ ನಡುವೆ ಅಗ್ನಿಶಾಮಕದಳದ ೪ ವಾಹನಗಳು ಕೈಗಾರಿಕಾ ಬಡಾವಣೆಯಲ್ಲಿನ ರಸ್ತೆಯಲ್ಲಿಯೇ ಇದ್ದ ಕಾರಣ ಈ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲು ಸಂಚಾರಿ ಪೊಲೀಸ್ ಸಹಕರಿಸಿದರು.

ಸಂಜೆವರೆಗೂ ಬೆಂಕಿ ಉರಿದ ಕಾರಣ ಘಟಕದಲ್ಲಿನ ಬಹುತೇಕ ಮರದ ತುಂಡುಗಳು ಸೇರಿದಂತೆ ಯಂತ್ರಗಳು ಸುಟ್ಟು ಕರಕಲಾಗಿವೆ. ಬಿಸಿ ಶಾಖೆಯಿಂದ ಕಟ್ಟಡದ ಹಲವೆಡೆ ಬಿರುಕುಗಳಾಗಿವೆ. ಸನಿಹದ ಬಿ.ಎಫ್.ಪಿ ಕಟ್ಟಡದಲ್ಲಿಯೂ ಬಿರುಕು ಕಾಣಿಸಿಕೊಂಡಿದ್ದು ಕಟ್ಟಡದ ಹಿಂಭಾಗದ ಶೌಚಾಲಯದ ಗೋಡೆ ಬಿರುಕು ಬಿಟ್ಟಿದ್ದು ಪುನರ್‌ನಿರ್ಮಾಣದ ಅಗತ್ಯವಿದೆ ಎಂದು ಬಿ.ಎಫ್.ಪಿ ಮಾಲೀಕ ಸುರೇಶ್ ಚಂಗಪ್ಪ ಮಾಹಿತಿ ನೀಡಿದ್ದಾರೆ.

ಸುಮಾರು ರೂ.೨೦ ಲಕ್ಷದಷ್ಟು ವೆಚ್ಚದ ಪೀಠೋಪಕರಣ ತಯಾರಾಗಿ ಗ್ರಾಹಕರಿಗೆ ನೀಡಲು ಸಿದ್ಧಗೊಂಡಿತ್ತು. ಇದೀಗ ಪೀಠೋಪಕರಣ ಸಂಪೂರ್ಣ ನಾಶವಾಗಿದೆ. ಇದರೊಂದಿಗೆ ಎಲ್ಲಾ ಯಂತ್ರಗಳೂ ಭಸ್ಮವಾಗಿವೆ ಎಂದು ಘಟಕದ ಮಾಲೀಕ ಪ್ರಶಾಂತ್ ಅವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.