ಮಡಿಕೇರಿ, ಫೆ. ೧೯: ಮೈಸೂರಿನಲ್ಲಿ ನಡೆದ ೨೯ನೇ ರಾಷ್ಟçಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಕಾವೇರಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ೩ ಚಿನ್ನದ ಪದಕ, ೩ ಬೆಳ್ಳಿ ಪದಕ ಹಾಗೂ ೩ ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ. ಸನತ್ ಮುತ್ತಣ್ಣ ೩ನೇ ತರಗತಿ, ೭ನೇ ತರಗತಿಯ ವಿದ್ಯಾರ್ಥಿಗಳಾದ ರಶ್ಮಿ ಪೂವಮ್ಮ ಎಸ್.ಎಸ್, ವೃಶಾಂಕ್ ಪೂವಯ್ಯ ಬಿ ಇವರು ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಶತಕ ಕಾವೇರಮ್ಮ ೫ನೇ ತರಗತಿ, ಶಿಪ್ರಾ ಕಾಳಪ್ಪ ೮ನೇ ತರಗತಿ, ಬೋಜಮ್ಮ ಎನ್. ಡಿ ೯ನೇ ತರಗತಿ ಇವರು ಬೆಳ್ಳಿ ಪದಕ ಮತ್ತು ಕೃತಿಕ ಅಕ್ಕಮ್ಮ ೬ನೇ ತರಗತಿ, ಮೊಹಮ್ಮದ್ ಅಫ್ಸರ್ ೭ನೇ ತರಗತಿ ,ಮುತ್ತಣ್ಣ ಸಿ. ಇ ೯ನೇ ತರಗತಿ ಈ ವಿದ್ಯಾರ್ಥಿಗಳು ಕಂಚಿನ ಪದಕವನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಇವರಿಗೆ ಶಾಲೆಯ ಕರಾಟೆ ಶಿಕ್ಷಕ ಸೋಮಣ್ಣ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಸುದೇಶ್ ಬಿ.ಎಸ್, ಕಾರ್ಯದರ್ಶಿ ವಿನೋದ್ ಪಿ.ಎನ್., ಮುಖ್ಯೋಪಾಧ್ಯಾಯಿನಿ ಪ್ರಮೀಳಾ ಎಂ.ಬಿ., ಸಹ ಮುಖ್ಯೋಪಾಧ್ಯಾಯಿನಿ ಅಮೃತ ಅರ್ಜುನ್, ಶಿಕ್ಷಕ ವೃಂದದವರು ತರಬೇತಿ ನೀಡಿದ್ದರು.