(ಹೆಚ್.ಕೆ.ಜಗದೀಶ್)
ಗೋಣಿಕೊಪ್ಪಲು, ಫೆ.೧೭: ಆಯ್ದ ಕಡೆಗಳಲ್ಲಿ ಹುಲಿಯ ಚಲನವಲನ ಕಂಡು ಹಿಡಿಯಲು ಕ್ಯಾಮರಾಗಳನ್ನು ಅಳವಡಿಸಿದ್ದರೂ ಇಲ್ಲಿಯ ತನಕ ಯಾವುದೇ ಹುಲಿಯ ಚಿತ್ರ ಸೆರೆಯಾಗಿಲ್ಲ. ವಿವಿಧ ಭಾಗದಲ್ಲಿ ಹುಲಿಯನ್ನು ಸೆರೆ ಹಿಡಿಯಲು ಬೋನನ್ನು ಅಳವಡಿಸಿದ್ದು ಬೋನಿಗೂ ಕೂಡ ಹುಲಿ ಬಿದ್ದಿಲ್ಲ. ಆದರೂ ಹುಲಿಯ ಸೆರೆಗೆ ಅರಣ್ಯ ಸಿಬ್ಬಂದಿಗಳು ತಮ್ಮ ಕಾರ್ಯಾಚರಣೆಯನ್ನು ಮುಂಜಾನೆಯಿAದಲೇ ೪ ಆನೆಗಳ ಮುಂಜಾನೆಯಿAದಲೇ ಕಾರ್ಯಾಚರಣೆ
ಕಳೆದ ೪ ದಿನಗಳಿಂದಲೂ ಸಾಕಾನೆಗಳ ಸಹಕಾರದಿಂದ ೧೫೦ಕ್ಕೂ ಅಧಿಕ ಸಿಬ್ಬಂದಿಗಳು ಹುಲಿ ಕಾರ್ಯಾಚರಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಳವಡಿಸಿರುವ ಕ್ಯಾಮರಾದಲ್ಲಿ ಹುಲಿಯ ಚಲನವಲನದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಹುಲಿಯ ಸಂಚಾರದ ಬಗ್ಗೆ ಖಚಿತ ಮಾಹಿತಿ ಇದ್ದಲ್ಲಿ ಇಲಾಖೆಯ ಸಿಬ್ಬಂದಿಗಳಿಗೆ ಮಾಹಿತಿ ನೀಡುವಂತೆ ಈಗಾಗಲೇ ಗ್ರಾಮಸ್ಥರಿಗೆ ತಿಳಿಸಲಾಗಿದೆ. ಮುಂಜಾನೆಯಿAದಲೇ ಕಾರ್ಯಾಚರಣೆಯನ್ನು ಅರಣ್ಯ ಪ್ರದೇಶ ಹಾಗೂ ರೈತರ ಕಾಫಿ ತೋಟದಲ್ಲಿ ನಡೆಸಲಾಗುತ್ತಿದೆ.
-ಗೋಪಾಲ್, ಎಸಿಎಫ್, ನಾಗರಹೊಳೆ ವನ್ಯಜೀವಿ ವಿಭಾಗ ಸಹಾಯದಿಂದ ಮುಂದುವರೆಸಿದ್ದಾರೆ.
ದ.ಕೊಡಗಿನ ಕೆ.ಬಾಡಗ ಪಂಚಾಯಿತಿ ವ್ಯಾಪ್ತಿಯ ಚೂರಿಕಾಡು ಬಳಿಯ ಕಾಫಿ ತೋಟದಲ್ಲಿ ಎರಡು ಅಮಾಯಕ ಜೀವಗಳನ್ನು ಬಲಿ ಪಡೆದಿದ್ದ ಘಟನೆಗೆ ಸಂಬAಧಿಸಿದAತೆ ಈ ಭಾಗದ ಕೆಲವು ಕಡೆ ಹುಲಿ ಬೋನನ್ನು ಇಟ್ಟು ಹುಲಿಯ ಬರುವಿಕೆಗಾಗಿ ಸಿಬ್ಬಂದಿಗಳು ಎದುರು ನೋಡುತ್ತಿದ್ದಾರೆ. ಹುಲಿಯ ಚಲನವಲನಗಳ ಬಗ್ಗೆ ಆಯಾಕಟ್ಟಿನ ಪ್ರದೇಶದಲ್ಲಿ ಸಾಕಾನೆ ಹಾಗೂ ನುರಿತ ಸಿಬ್ಬಂದಿಗಳೊAದಿಗೆ ಕಾಫಿ ತೋಟ ಹಾಗೂ ಅರಣ್ಯ ವ್ಯಾಪ್ತಿಯಲ್ಲಿ ಕೂಂಬಿAಗ್ ನಡೆಸಲಾಗುತ್ತಿದೆ.
ಹುಲಿಯ ಹೆಜ್ಜೆ ಗುರುತುಗಳನ್ನು ಪತ್ತೆ ಹಚ್ಚುವ ಸಲುವಾಗಿ ಪ್ರಮುಖ ಸ್ಥಳಗಳಲ್ಲಿ ಮರಳು, ಮಣ್ಣು ಮಿಶ್ರಿತ ಫ್ರೆಜರ್ ಇಂಪ್ರೆಶನ್ ಪ್ಯಾಡ್ಸ್(ಪಿಐಪಿ)ಗಳನ್ನು ಅಳವಡಿಸಿದ್ದರೂ ಹುಲಿಯ ಸಂಚಾರದ ಬಗ್ಗೆ ಯಾವುದೇ ಹೆಜ್ಜೆ ಗುರುತುಗಳು ಇನ್ನೂ ಕೂಡ ಕಂಡು ಬಂದಿಲ್ಲ. ೫ನೇ ದಿನದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳು ತಮ್ಮನ್ನು ತೊಡಗಿಸಿಕೊಂಡಿದ್ದು ಮುಂಜಾನೆ ಕಾಡಿನತ್ತ ತೆರಳಿದರೆ ಮತ್ತೆ ಸಂಜೆಯ ವೇಳೆಯಲ್ಲಿ ಕ್ಯಾಂಪಿನ ಬಳಿ ಆನೆಗಳು ಹಾಗೂ ಸಿಬ್ಬಂದಿಗಳು ವಾಪಸ್ಸಾಗುತ್ತಿದ್ದಾರೆ. ನಾಗರಹೊಳೆ ವೈಲ್ಡ್ ಲೈಫ್ನ ನಿರ್ದೇಶಕ ಹರ್ಷಕುಮಾರ್, ಎಸಿಎಫ್ ಗೋಪಾಲ್ ಹಾಗೂ ಇತರ ಅಧಿಕಾರಿಗಳು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದು ಹುಲಿಯ ಕಾರ್ಯಾಚರಣೆ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.