ಕುಶಾಲನಗರ, ಫೆ.೧೭: ಕುಶಾಲನಗರ ಪುರಸಭೆಯ ಸಾಮಾನ್ಯ ಸಭೆ ಯಾವುದೇ ಅಭಿವೃದ್ಧಿ ಬಗ್ಗೆ ಚರ್ಚೆ ಇಲ್ಲದೆ ಪ್ರತಿಭಟನೆ, ಗೊಂದಲದ ಚರ್ಚೆಗಳ ನಡುವೆ ನಡೆಯಿತು.

ಪುರಸಭೆಯ ಅಧ್ಯಕ್ಷ ಬಿ. ಜಯವರ್ಧನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿ, ಸಿಬ್ಬಂದಿಗಳ ಅಸಮರ್ಪಕ, ನಿಯಮಬಾಹಿರ ಕಾರ್ಯವೈಖರಿ ಬಗ್ಗೆ ಆಕ್ರೋಶಗಳು ವ್ಯಕ್ತಗೊಂಡವು. ಪಟ್ಟಣದ ಎಲ್ಲೆಡೆ ಸಂಚಾರಿ ಪೊಲೀಸರ ಕಿರುಕುಳ ಹೆಚ್ಚಾಗಿದೆ. ವಾಹನ ಸವಾರರಿಗೆ ನಿರಂತರ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಪಟ್ಟಣದ ವ್ಯಾಪಾರ ವಹಿವಾಟುಗಳಿಗೆ ಸಮಸ್ಯೆ ಉಂಟಾಗುತ್ತಿದೆ, ವಾಹನ ಸವಾರರು ಪಟ್ಟಣಕ್ಕೆ ಬರಲು ಭಯಭೀತರಾಗಿರುವಂತಹ ಪರಿಸ್ಥಿತಿ ಸೃಷ್ಟಿ ಮಾಡುತ್ತಿದ್ದಾರೆ. ಕುಶಾಲನಗರ ಪಟ್ಟಣಕ್ಕೆ ಸಂಚಾರಿ ಠಾಣೆಯ ಅಗತ್ಯವಿಲ್ಲ ಅನ್ನುವ ಮಟ್ಟಿಗೆ ಅಧಿಕಾರಿ, ಸಿಬ್ಬಂದಿಗಳ ವರ್ತನೆ ಕಂಡುಬರುತ್ತಿದೆ ಎಂದು ಬಹುತೇಕ ಸದಸ್ಯರು ಆರೋಪ ವ್ಯಕ್ತಪಡಿಸಿದರು. ಪಟ್ಟಣದಲ್ಲಿ ಟ್ರಾಫಿಕ್ ಠಾಣೆಯ ಅಗತ್ಯವಿಲ್ಲ ಎಂಬ ನಿರ್ಣಯ ಮಾಡಿ ಸರ್ಕಾರಕ್ಕೆ ವರದಿ ಕಳುಹಿಸುವಂತೆ ಸ್ಥಳೀಯ ಕೇಂದ್ರ ಕಾಮರ್ಸ್ ಅಧ್ಯಕ್ಷರು ಆಗಿರುವ ಪುರಸಭೆ ಸದಸ್ಯ ಅಮೃತರಾಜ್ ಒತ್ತಾಯಿಸಿದರು. ಪಟ್ಟಣದಲ್ಲಿ ಗಾಂಜಾ, ಮದ್ಯವ್ಯಸನಿಗಳ ಹಾವಳಿ, ಪುಂಡರ ಹಾವಳಿ ಮಿತಿಮೀರಿದೆ. ವೇಗದಿಂದ ವಾಹನಗಳನ್ನು ಚಾಲನೆ ಮಾಡುವ ಮೂಲಕ ಅಪಾಯಕ್ಕೆ ಆಹ್ವಾನಿಸುತ್ತಿದ್ದಾರೆ ಎಂಬ ಬಗ್ಗೆ ಸದಸ್ಯರಾದ ರೇಣುಕಾ, ಶೇಕ್ ಕಲಿಮುಲ್ಲಾ, ಪ್ರಮೋದ್ ಮುತ್ತಪ್ಪ ಅವರು ಸಭೆಯಲ್ಲಿದ್ದ ಸಹಾಯಕ ಠಾಣಾಧಿಕಾರಿ ಗೋಪಾಲ್ ಅವರ ಗಮನಕ್ಕೆ ತಂದರು. ಈ ಬಗ್ಗೆ ಸಂಬAಧಿಸಿದ ಅಧಿಕಾರಿಗಳು ಮತ್ತು ಸರ್ಕಾರಕ್ಕೆ ಪತ್ರ ಬರೆಯುವಂತೆ ಅಧ್ಯಕ್ಷರಲ್ಲಿ ಒತ್ತಾಯಿಸಿದರು.

ಕುಶಾಲನಗರ ಅಭಿವೃದ್ಧಿ ಪ್ರಾಧಿಕಾರ ಅಧಿಕಾರಿಗಳು, ಚೆಸ್ಕಾಂ ಅಧಿಕಾರಿಗಳು ಜನರಿಗೆ ಸ್ಪಂದಿಸುತ್ತಿಲ್ಲ, ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡುವಂತೆ ಸಭೆಯ ಗಮನಕ್ಕೆ ತಂದರು. ಪುರಸಭೆ ವ್ಯಾಪ್ತಿಯ ಬದ್ರುನ್ನಿಸ ಬಡಾವಣೆಯಲ್ಲಿ ಉದ್ಯಾನವನ ಮಾರಾಟವಾಗಿದೆ ಎಂಬ ವಿಷಯಕ್ಕೆ ಸಂಬAಧಿಸಿದAತೆ ಮುಖ್ಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ, ನಿರ್ಲಕ್ಷö್ಯ ತಾಳಿರುವುದಾಗಿ ಆರೋಪಿಸಿದ ಕಾಂಗ್ರೆಸ್ ಸದಸ್ಯ ಪ್ರಮೋದ್ ಮುತ್ತಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಪುರಸಭೆ ಮುಖ್ಯ ಅಧಿಕಾರಿ ಶಿವಪ್ಪ ನಾಯಕ್ ಅವರ ಮೇಲೆ ನಡೆದ ಹಲ್ಲೆ ಪ್ರಕರಣದ ಬಗ್ಗೆ ಚರ್ಚಿಸಲು ಸದಸ್ಯ ಜಗದೀಶ್, ಪ್ರಮೋದ್ ಮುತ್ತಪ್ಪ ಅವರುಗಳು ಮುಂದಾದಾಗ ಮುಖ್ಯ ಅಧಿಕಾರಿಗಳು ಇದಕ್ಕೆ ಉತ್ತರಿಸಿ ಇದು ತನ್ನ ವೈಯಕ್ತಿಕ ವಿಚಾರಕ್ಕೆ ಸಂಬAಧಿಸಿದ ವಿಷಯ ಹೊರತು ಪುರಸಭೆಗೆ ಸಂಬAಧಿಸಿದಲ್ಲ ಎಂದು ಸ್ಪಷ್ಟಪಡಿಸಿದರು. ಸಭೆಯಲ್ಲಿ ಉಪಾಧ್ಯಕ್ಷ ಸುರಯ್ಯಬಾನು, ಪುರಸಭೆ ಸದಸ್ಯರು ಅಧಿಕಾರಿಗಳು ಇದ್ದರು.