ಮಡಿಕೇರಿ, ಫೆ. ೧೭: ಮುನೇಶ್ವರ ಯುವಕ ಸಂಘ ಹಾಗೂ ಅಮೆಚೂರು ಕಬಡ್ಡಿ ಅಸೋಸಿಯೇಷನ್ ಸಂಯುಕ್ತ ಆಶ್ರಯದಲ್ಲಿ ಹೊನಲು ಬೆಳಕಿನ ಹೊರಾಂಗಣ ಮ್ಯಾಟ್ ಕಬಡ್ಡಿ ಪಂದ್ಯಾವಳಿ ನಗರದ ಸುದರ್ಶನ ಬಡಾವಣೆಯ ಮುನೇಶ್ವರ ದೇವಸ್ಥಾನದ ಕ್ರೀಡಾ ಮೈದಾನದಲ್ಲಿ ತಾ. ೧೮ ರಂದು (ಇಂದು) ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಪಿ.ಟಿ.ಉಣ್ಣಿಕೃಷ್ಣ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕಾಲಿಕವಾಗಿ ನಿಧನರಾದ ಬಡಾವಣೆಯ ನಿವಾಸಿಗಳಾದ ಪಂದ್ಯAಡ ಆಶಾ, ರೋಶನ್ ಶೆಟ್ಟಿ, ಶಶಾಂಕ್ ಗೌಡ ಇವರ ಸ್ಮರರ್ಣಾಥ(ಎ.ಆರ್.ಎಸ್. ಮೆಮೋರಿಯಲ್ ಟ್ರೋಫಿ) ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ. ಕ್ರೀಡಾ ಪ್ರೇಮಿಗಳಿಗಾಗಿ ೨೦೦೦ ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಕ್ರೀಡಾಕೂಟಕ್ಕೆ ಸಂಜೆ ೭ ಗಂಟೆಗೆ ಬಂಟರ ಸಂಘದ ಅಧ್ಯಕ್ಷ ಜಗದೀಶ್ ರೈ ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ ವಾರ್ಡ್ನ ನಗರಸಭೆ ಸದಸ್ಯರು, ಸಂಘದ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.೯ ಗಂಟೆಗೆ ಆಯೋಜಿಸಿದ ಸಭಾಕಾರ್ಯಕ್ರಮದಲ್ಲಿ ಶಾಸಕ ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ, ಸಮಾಜಸೇವಕ ಮಂಥರ್ಗೌಡ, ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಜಿಲ್ಲಾಧಿಕಾರಿ ಡಾ.ಬಿ.ಸಿಸತೀಶ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ವಿಶೇಷ ಪೂಜೆ
ಶಿವರಾತ್ರಿ ಪ್ರಯುಕ್ತ ಮುನೀಶ್ವರ ದೇವಾಲಯದಲ್ಲಿ ಸಂಜೆ ೭ಗಂಟೆಗೆ ವಿಶೇಷ ಪೂಜೆ ನಡೆಯಲಿದೆ. ಇದೇ ಸಂದರ್ಭ ಆಗಮಿಸಿದ್ದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಲಿದೆ ಎಂದು ತಿಳಿಸಿದರು.
ಕ್ರೀಡಾಕೂಟಕ್ಕೆ ಈಗಾಗಲೇ ೧೨ ತಂಡಗಳು ನೋಂದಾಣಿಗೊAಡಿವೆ. ಕೇರಳ, ಬೆಂಗಳೂರು, ಮಂಗಳೂರು, ಸುಳ್ಯ, ತಮಿಳುನಾಡು, ಮಂಡ್ಯ, ಕೊಡಗು ಸೇರಿದಂತೆ ವಿವಿಧೆಡೆಯಿಂದ ತಂಡಗಳು ಆಗಮಿಸಲಿವೆ. ಪ್ರಥಮ ೫೦,೦೦೦, ದ್ವಿತೀಯ ೩೦,೦೦೦, ತೃತೀಯ ಹಾಗೂ ಚತುರ್ಥ ತಲಾ ೧೦,೦೦೦ ನಗದು ಜೊತೆಗೆ ವಿವಿಧ ವಿಭಾಗದಲ್ಲಿ ವೈಯಕ್ತಿಕ ಪ್ರಶಸ್ತಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮುನೇಶ್ವರ ದೇವಸ್ಥಾನದ ಉಪಾಧ್ಯಕ್ಷ ಕಾವೇರಪ್ಪ, ಖಜಾಂಚಿ ವಾಸು, ಸಂಘದ ಸಲಹೆಗಾರರಾದ ಅಂಬೆಕಲ್ ನವೀನ್, ಪದಾಧಿಕಾರಿಗಳಾದ ಎನ್.ಎನ್.ಕೌಶಿಕ್, ಎಂ.ಎ.ಸತೀಶ್, ಇದ್ದರು.