ಮಡಿಕೇರಿ, ಫೆ. ೧೭: ಪಾಳುಬಿದ್ದ ಮನೆಯೊಂದರಲ್ಲಿ ಅಕ್ರಮವಾಗಿ ಗಾಂಜಾ ಸಂಗ್ರಹಿಸಿಟ್ಟುಕೊAಡಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಮಡಿಕೇರಿ ನಗರ ಅಪರಾಧ ವಿಭಾಗದ ಪೊಲೀಸರು ಈ ಸಂಬAಧ ನಾಲ್ವರನ್ನು ಬಂಧಿಸಿದ್ದಾರೆ.
ನಗರ ವ್ಯಾಪ್ತಿಯ ರಾಣಿಪೇಟೆ ನಿವಾಸಿ ದೀಕ್ಷಿತ್ ಎಂಬವರಿಗೆ ಸೇರಿದ ಪಾಳುಬಿದ್ದ ಮನೆಯಲ್ಲಿ ಗಾಂಜಾ ಇರಿಸಿಕೊಂಡು ಮಾರಾಟ ಹಾಗೂ ಗಾಂಜಾ ಸೇವನೆ ಮಾಡುತ್ತಿರುವ ಬಗ್ಗೆ ದೊರೆತ ಮಾಹಿತಿಯನ್ವಯ ಇಂದು ಪೊಲೀಸರು ದಾಳಿ ನಡೆಸಿದ್ದಾರೆ. ಮನೆಯೊಳಗಡೆ ಇದ್ದ ಆರೋಪಿಗಳಾದ ತ್ಯಾಗರಾಜ ಕಾಲೋನಿಯ ಎಂ.ಎಚ್. ಅಬ್ಬಾಸ್ ಎಂಬವರ ಪುತ್ರ ಅಸ್ಗರ್ ಅಲಿ (೪೨), ಆಜಾದ್ ನಗರದ ದಿ. ಅಬ್ದುಲ್ ಖಾದರ್ ಅವರ ಪುತ್ರ ನೌಷದ್ ಅಲಿ (೧೭), ಮಹದೇವಪೇಟೆಯ ಎಂ.ಇ. ಹಂಸ ಅವರ ಪುತ್ರ ಎಂ.ಹೆಚ್. ರಫೀಕ್ (೪೩) ಹಾಗೂ ತ್ಯಾಗರಾಜ ಕಾಲೋನಿಯ ಜೇಕಬ್ ಎಂಬವರ ಪುತ್ರ ಮಂಜುನಾಥ (೪೨) ಎಂಬವರುಗಳನ್ನು ಬಂಧಿಸಿದ್ದಾರೆ. ೩ಆರನೇ ಪುಟಕ್ಕೆ
(ಮೊದಲ ಪುಟದಿಂದ) ಸ್ಥಳದಲ್ಲಿ ರೂ. ೫೦ ಸಾವಿರ ಮೌಲ್ಯದ ೫೦೦ ಗ್ರಾಂ ಗಾಂಜಾ ಸಿಕ್ಕಿದ್ದು, ಅದನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಅವರ ಮಾರ್ಗದರ್ಶನ, ಡಿವೈಎಸ್ಪಿ, ವೃತ್ತ ನಿರೀಕ್ಷಕರ ಸೂಚನೆಯಂತೆ ಠಾಣಾಧಿಕಾರಿ ಶ್ರೀನಿವಾಸ್ ಅವರ ಮುಂದಾಳತ್ವದಲ್ಲಿ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.