ಬೆಂಗಳೂರು, ಫೆ. ೧೭: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ೨೦೨೩-೨೪ನೇ ಸಾಲಿನ ಆದಾಯ ಹೆಚ್ಚುವರಿ ಬಜೆಟ್ ಮಂಡಿಸಿದ್ದಾರೆ. ಚುನಾವಣಾ ಪೂರ್ವ ಬಜೆಟ್‌ನಲ್ಲಿ ಕೆಲವೊಂದು ವಲಯಗಳಿಗೆ ಅಧಿಕ ಆದ್ಯತೆ ನೀಡಿ ಹೆಚ್ಚಿನ ಹಣ ಒದಗಿಸಲಾಗಿದೆ. ಸಿಎಂ ಬೊಮ್ಮಾಯಿ ಪ್ರಕಾರ, ರಾಜ್ಯದಲ್ಲಿ ಮೊದಲ ಬಾರಿಗೆ ಕೋವಿಡ್ ನಂತರ, ಆದಾಯದ ಸ್ವೀಕೃತಿಯು ಆದಾಯದ ವೆಚ್ಚಕ್ಕಿಂತ ೪೦೨ ಕೋಟಿ ರೂಪಾಯಿಗಳಾಗಿದೆ. ಆದಾಯ ವೆಚ್ಚ ೨,೨೫,೫೦೭ ಕೋಟಿ, ಬಂಡವಾಳ ವೆಚ್ಚ ೬೧,೨೩೪ ಕೋಟಿ ಮತ್ತು ಸಾಲ ಮರುಪಾವತಿ ೨೨,೪೪೧ ಕೋಟಿ ಸೇರಿದಂತೆ ಒಟ್ಟು ವೆಚ್ಚ ೩,೦೯,೧೮೨ ಕೋಟಿ ಎಂದು ಅಂದಾಜಿಸಲಾಗಿದೆ.

ಮಾನವ-ವನ್ಯಪ್ರಾಣಿ ಸಂಘರ್ಷ - ಪರಿಹಾರ ದ್ವಿಗುಣ

್ಡಕೊಡಗೂ ಸೇರಿದಂತೆ ಮಲೆನಾಡು ಜಿಲ್ಲೆಗಳಲ್ಲಿ ಆತಂಕಕ್ಕೆ ಕಾರಣವಾಗುತ್ತಿರುವ ಮಾನವ-ವನ್ಯಪ್ರಾಣಿ ಸಂಘರ್ಷದಿAದ ಸಂಭವಿಸುವ ಮಾನವ ಪ್ರಾಣ ಹಾನಿಗೆ ನೀಡುವ ಪರಿಹಾರವನ್ನು ೭.೫೦ ಲಕ್ಷ ರೂ. ಗಳಿಂದ ೧೫ ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಬೆಳೆಹಾನಿ ಪ್ರಕರಣಗಳಲ್ಲಿ ನೀಡುತ್ತಿರುವ ಪರಿಹಾರ ಧನವನ್ನೂ ದ್ವಿಗುಣಗೊಳಿಸಲಾಗಿದೆ.

್ಡಮಾನವ-ಪ್ರಾಣಿ ಸಂಘರ್ಷವನ್ನು ನಿಯಂತ್ರಿಸಲು, ಸಂಘರ್ಷ ಕ್ಷೇತ್ರದಿಂದ ಸೆರೆಹಿಡಿಯಲ್ಪಟ್ಟ ವನ್ಯಪ್ರಾಣಿಗಳನ್ನು, ಅವುಗಳ ನೈಸರ್ಗಿಕ ಆವಾಸ ಸ್ಥಾನ ಪ್ರದೇಶಗಳನ್ನು ಗುರುತಿಸಿ ಬಿಡುಗಡೆ ಮಾಡಲು ಭದ್ರಾ ಮತ್ತು ಬಂಡೀಮಠ ರಾಷ್ಟಿçÃಯ ಉದ್ಯಾನ ವನಗಳಲ್ಲಿ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗುವುದು.

್ಡಕಾಡಾನೆ ಹಾವಳಿ ತಡೆಗಟ್ಟಲು ಕೊಡಗು ಸೇರಿದಂತೆ ಚಿಕ್ಕಮಗಳೂರು, ಹಾಸನ, ಮೈಸೂರು ಜಿಲ್ಲೆಗಳಲ್ಲಿ ಕಾಡಾನೆ ಕಾರ್ಯಪಡೆಯನ್ನು ರಚಿಸಲಾಗಿದೆ. ಇದೇ ಮಾದರಿಯಲ್ಲಿ ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಚಿರತೆ ದಾಳಿ ತಡೆಯಲು ಸಹ ಕಾರ್ಯಪಡೆಯನ್ನು ರಚಿಸಲಾಗಿದೆ. ಕಾರ್ಯಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹೆಚ್ಚುವರಿಯಾಗಿ ೧೯೯ ಸಿಬ್ಬಂದಿಗಳನ್ನು ನೇಮಿಸಲು ಅನುಮೋದನೆ ನೀಡಲಾಗಿದೆ.

್ಡಮಾನವ-ಆನೆ ಸಂಘರ್ಷವನ್ನು ಪರಿಣಾಮಕಾರಿಯಾಗಿ ತಡೆಯುವ ಸಲುವಾಗಿ ೧೨ ಕಿ.ಮೀ. ರೈಲ್ವೆ ಬ್ಯಾರಿಕೇಡ್, ೩೬ ಕಿ.ಮೀ. ಆನೆ ನಿರೋಧಕ ಕಂದಕ, ೮೬ ಕಿ.ಮೀ. ಸೌರಶಕ್ತಿ ಬೇಲಿ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿವೆ. ೨೦೨೨-೨೩ನೇ ಸಾಲಿನಲ್ಲಿ ಈ ಕಾಮಗಾರಿಗಳಿಗೆ ರೂ.೧೫೦ ಕೋಟಿ ಒದಗಿಸಲಾಗಿದೆ.ಒಟ್ಟು ಬಾಧ್ಯತೆಗಳನ್ನು ಅಂದಾಜು ೫,೬೪,೮೯೬ ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದ್ದು, ಹಸಿರು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ ಶೇ.೨೪.೨೦ ಆಗಿದೆ. "ಕರ್ನಾಟಕ ಹಣಕಾಸಿನ ಜವಾಬ್ದಾರಿ ಕಾಯಿದೆ ೨೦೦೨ ರಲ್ಲಿ ನಿರ್ದಿಷ್ಟಪಡಿಸಿದ ಎಲ್ಲಾ ನಿಯತಾಂಕಗಳನ್ನು ಗಮನಿಸಲಾಗಿದೆ ಎಂದು ತಿಳಿಸಲು ನನಗೆ ಸಂತೋಷವಾಗಿದೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಯಾವ ವಲಯಕ್ಕೆ ಎಷ್ಟು ಹಣ?

ಶಿಕ್ಷಣ ಕ್ಷೇತ್ರಕ್ಕೆ - ರೂ.೩೭,೯೬೦ ಕೋಟಿ , ಜಲಸಂಪನ್ಮೂಲ ಯೋಜನೆಗಳಿಗೆ- ರೂ.೨೨,೮೫೪ ಕೋಟಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಲಯಕ್ಕೆ - ರೂ.೨೦,೪೯೪ ಕೋಟಿ, ನಗರಾಭಿವೃದ್ಧಿಗೆ - ರೂ.೧೭,೯೩೮ ಕೋಟಿ, ಕಂದಾಯ ಇಲಾಖೆಯ ಕಾರ್ಯಗಳಿಗೆ - ರೂ.೧೫,೯೪೩ ಕೋಟಿ, ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆಗೆ - ರೂ.೧೫,೧೫೧ ಕೋಟಿ, ಒಳಾಡಳಿತ ಮತ್ತು ಸಾರಿಗೆ - ರೂ.೧೪,೫೦೯ ಕೋಟಿ, ಇಂಧನ ವಿಭಾಗಕ್ಕೆÀ - ರೂ.೧೩,೮೦೩ ಕೋಟಿ, ಸಮಾಜ ಕಲ್ಯಾಣ ಯೋಜನೆಗಳಿಗೆ - ರೂ. ೧೧,೧೬೩ ಕೋಟಿ, ಲೋಕೋಪಯೋಗಿ ಕಾಮಗಾರಿಗಳಿಗೆ - ರೂ.೧೦,೭೪೧ ಕೋಟಿ, ಕೃಷಿ ಮತ್ತು ತೋಟಗಾರಿಕೆ - ರೂ.೯,೪೫೬ ಕೋಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ - ರೂ.೫,೬೭೬ ಕೋಟಿ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು - ರೂ.೪,೬೦೦ ಕೋಟಿ ಒದಗಿಸಲಿರುವುದಾಗಿ ಮುಖ್ಯಮಂತ್ರಿ ಘೋಷಿಸಿದರು. ಅಲ್ಲದೆ, ವಸತಿ ವಿಭಾಗಕ್ಕೆ - ರೂ.೩,೭೮೭ ಕೋಟಿ, ನೀರಾವರಿ ವಲಯಕ್ಕೆ - ರೂ.೨೫,೦೦೦ ಕೋಟಿ, ದೇವಸ್ಥಾನ, ಮಠಗಳ ಅಭಿವೃದ್ಧಿಗೆ - ರೂ. ೧,೦೦೦ ಕೋಟಿ ಮತ್ತಿತರ ಅಭಿವೃದ್ಧಿ ಯೋಜನೆಗಳಿಗಾಗಿ - ರೂ.೧,೧೬,೯೬೮ ಕೋಟಿಯನ್ನು ನಿಗದಿಪಡಿಸಿರುವದಾಗಿ ಅವರು ವಿವರಿಸಿದರು. ೩ಆರನೇ ಪುಟಕ್ಕೆ ್ಥರೈತರಿಗೆ ಈ ಹಿಂದೆ ಇದ್ದ ರೂ.೩ ಲಕ್ಷದವರೆಗಿನ ಬಡ್ಡಿ ರಹಿತ ಸಾಲ ಸೌಲಭ್ಯವನ್ನು ಇದೀಗ ರೂ.೫ ಲಕ್ಷದವರೆಗೆ ವಿಸ್ತರಿಸಲಾಗಿದೆ.

್ಥರಾಜ್ಯದ ೫೦ ಲಕ್ಷ ರೈತರಿಗೆ ಉಪಯೋಗವಾಗುವಂತೆ ಭೂ-ಸಿರಿ ಯೋಜನೆ ಘೋಷಣೆಯಾಗಿದೆ.

್ಥರೈತರಿಗೆ ಹಾಗೂ ಅವರ ಕುಟುಂಬಗಳಿಗೆ ಜೀವನ್ ಜ್ಯೋತಿ ವಿಮಾ ಯೋಜನೆ ಅಸ್ತಿತ್ವಕ್ಕೆ ತರಲಾಗಿದೆ. ಇದಕ್ಕೆ ರೂ.೧೫೦ ಕೋಟಿ ಮೀಸಲಿಡಲಾಗಿದೆ.

್ಥ೩೦೦ ಅತ್ಯಾಧುನಿಕ ಕೊಯ್ಲು ಯಂತ್ರಗಳನ್ನು ರೈತರಿಗೆ ನೀಡುವ ಯೋಜನೆ ರೂಪಿಸಲಾಗಿದ್ದು, ಪ್ರಸ್ತುತ ವರ್ಷವೇ ಈ ಸಂಬAಧ ೧೦೦ ಯಂತ್ರಗಳನ್ನು ರೈತರಿಗೆ ವಿತರಿಸುವ ನಿಟ್ಟಿನಲ್ಲಿ ರೂ.೫೦ ಕೋಟಿ ಬಳಕೆಯಾಗಲಿದೆ.

್ಥಕೃಷಿ ಉತ್ಪನ್ನ ಸಂಸ್ಥೆಗಳಿಗೆ ಪ್ರತಿ ಸಂ¸ಗೆ ರೂ.೧೦ ಲಕ್ಷ ಎಂಬAತೆ ಬಂಡವಾಳ ಹೂಡಿಕೆ ಮಾಡಲಾಗುವುದು.

್ಥಅಂತರ್ಜಲ ಅಭಿವೃದ್ಧಿಗಾಗಿ ‘ಜಲ-ನಿಧಿ’ ಎಂಬ ವಿನೂತನ ಯೋಜನೆಯನ್ನು ನರೇಗಾ ಮೂಲಕ ಅನುಷ್ಠಾನ ಮಾಡಲಾಗುವುದು.

್ಥಸ್ಯಾಂಡಲ್‌ವುಡ್ ನೂತನ ತಳಿಯನ್ನು ರೈತರಿಗೆ ವಿತರಣೆ ಮಾಡಲಾಗುವುದು.

್ಥರೇಷ್ಮೆ ಕೃಷಿಗೆ ಒತ್ತು ನೀಡುವ ನಿಟ್ಟಿನಲ್ಲಿ ೧೦,೦೦೦ ಎಕರೆ ಹೆಚ್ಚುವರಿ ಪ್ರದೇಶವನ್ನು ಮೀಸಲಿಡಲಾಗುವುದು.

್ಥ೨ ಲಕ್ಷ ಕಿಲೋಲೀಟರ್ ನಷ್ಟು ತೆರಿಗೆ ರಹಿತ ಡೀಸಲ್ ಸರಬರಾಜನ್ನು ರೈತರಿಗೆ ವಿತರಿಸಲಾಗುವುದು.

ಶಿಕ್ಷಣ: ವಿದ್ಯಾರ್ಥಿಗಳಿಗೆ ವಿದ್ಯಾಶಕ್ತಿ ಯೋಜನೆ - ಅಂಗನವಾಡಿ ಕಾರ್ಯಕರ್ತರಿಗೆ ಸಂಭಾವನೆ ಹೆಚ್ಚಳ

್ಥಫ್ರೌಢ ಶಾಲೆ ಮುಗಿಸಿ ಕಾಲೇಜು ಶಿಕ್ಷಣಕ್ಕೆ ಕಾಲಿಡುವ ವಿದ್ಯಾರ್ಥಿಗಳಿಗೆ ವಿದ್ಯಾಶಕ್ತಿ ಯೋಜನೆ ಸಹಕಾರಿಯಾಗಲಿದೆ. ೮ ಲಕ್ಷ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ.

್ಥಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಬಿಸಿಯೂಟ ಯೋಜನೆಯಡಿಯ ಅಡುಗೆ ಸಿಬ್ಬಂದಿ ಹಾಗೂ ಸಹಾಯಕರಿಗೆ ಮಾಸಿಕ ಸಂಭಾವನೆಯಲ್ಲಿ ರೂ.೧,೦೦೦ ಹೆಚ್ಚಳ ಮಾಡಲಾಗುತ್ತದೆ.

್ಥಚಿಕ್ಕಮಗಳೂರಿನಲ್ಲಿ ನೂತನ ವಿಶ್ವವಿದ್ಯಾಲಯ ನಿರ್ಮಾಣ ಮಾಡಲಾಗುವುದು.

್ಥರಾಜ್ಯದ ೯೩ ಆಯ್ದ ತಾಲೂಕುಗಳಲ್ಲಿ ೧,೨೩೦ ಶಾಲಾ ಕೊಠಡಿಗಳ ನಿರ್ಮಾಣ ಹಾಗೂ ಶೌಚಾಲಯಗಳ ನಿರ್ಮಾಣ, ೨,೭೭೭ ಶಾಲಾ ಕೊಠಡಿಗಳ ದುರಸ್ತಿಗೆ ಕ್ರಮವಹಿಸಲಾಗುವುದು.

್ಥಆಯ್ದ ೧೦೦ ಪದವಿ ಕಾಲೇಜುಗಳಲ್ಲಿ ಪ್ರೋ.ಸಿ.ಎನ್ ರಾವ್ ಕಾರ್ಯಕ್ರಮದಡಿ ವಿಜ್ಞಾನ ವಿಭಾಗಗಳನ್ನು ಸ್ಥಾಪಿಸಲಾಗಲಿದೆ.

್ಥ‘ಹಳ್ಳಿ ಮುತ್ತು’ ಯೋಜನೆಯಲ್ಲಿ ಗ್ರಾಮೀಣ ಪ್ರದೇಶಗಳ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿತು ವೃತ್ತಿಪರ ಕ್ಷೇತ್ರಗಳಲ್ಲಿ ಶಿಕ್ಷಣ ಪಡೆಯುತ್ತಿರುವ ೫೦೦ ನುರಿತ ವಿದ್ಯಾರ್ಥಿಗಳ ಶುಲ್ಕವನ್ನು ಸರಕಾರವೇ ಭರಿಸಲಿದೆ.

ಪೊಲೀಸ್ ಕ್ವಾಟರ‍್ಸ್ಗಳ ನಿರ್ಮಾಣಕ್ಕೆ ರೂ.೪೫೦ ಕೋಟಿ

್ಥರಾಜ್ಯದಲ್ಲಿ ೩,೦೦೦ ಪೊಲೀಸ್ ಕ್ವಾಟರ‍್ಸ್ಗಳ ನಿರ್ಮಾಣಕ್ಕೆ ಒಟ್ಟು ರೂ.೪೫೦ ಕೋಟಿ ಮೀಸಲಿಡಲಾಗಿದೆ.

್ಥರೂ.೧೦ ಕೋಟಿ ವೆಚ್ಚದಲ್ಲಿ ತುಮಕೂರು ಹಾಗೂ ಶಿವಮೊಗ್ಗದಲ್ಲಿ ಫೊರೆನ್ಸಿಕ್ ಲ್ಯಾಬ್‌ಗಳ ನಿರ್ಮಾಣವಾಗಲಿದೆ ಹಾಗೂ ಧಾರವಾಡದಲ್ಲಿ ಫೊರೆನ್ಸಿಕ್ ವಿಶ್ವವಿದ್ಯಾಲಯ ಸ್ಥಾಪನೆಯಾಗಲಿದೆ.

್ಥಹೋಮ್‌ಗಾರ್ಡ್ಸ್ಗಳ ಕರ್ತವ್ಯ ಭತ್ಯೆಯನ್ನು ದೈನಿಕ ರೂ.೧೦೦ಕ್ಕೆ ಏರಿಸಲಾಗಿದೆ.

್ಥಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯನ್ನು ಬಲಿಷ್ಠಗೊಳಿಸಲು ೧,೦೦೦ ಸಿಬ್ಬಂದಿ ನೂತನವಾಗಿ ನೇಮಕಗೊಳಿಸಲಾಗುವುದು.

್ಥಸರಕಾರಿ ವೆಬ್‌ಸೈಟ್‌ಗಳ ಸುರಕ್ಷತೆಗಾಗಿ ೨೪x೭ ಕಾರ್ಯಾಚರಿಸಲು ಉದ್ದೇಶಿಸಿರುವ ಸೈಬರ್ ಭದ್ರತಾ ಆಪರೇಷನ್ ಕೇಂದ್ರವನ್ನು ನಿರ್ಮಾಣ ಮಾಡಲಾಗುವುದು.ಮಹಿಳೆಯರ ಅಭಿವೃದ್ಧಿಗೆ ಗೃಹಿಣಿ ಶಕ್ತಿ

ಟಿಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ಗೃಹಿಣಿ ಶಕ್ತಿ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುವುದಾಗಿ ಬೊಮ್ಮಾಯಿ ಅವರು ನುಡಿದರು. ಇದರಡಿಯಲ್ಲಿನ ಶ್ರಮ ಶಕ್ತಿ ಯೋಜನೆಯಡಿಯಲ್ಲಿ ಆಸ್ತಿ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಮಾಸಿಕ ರೂ.೫೦೦ ಸಹಾಯಧನ ನೀಡಲಾಗುವುದು.

ಟಿ೧ ಲಕ್ಷ ಮಹಿಳೆಯರಿಗೆ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುವುದು.

ಟಿಆರೋಗ್ಯ ಪುಷ್ಠಿ ಯೋಜನೆಯಡಿಯಲ್ಲಿ ವಿವಾಹಿತ ಅರ್ಹ ಮಹಿಳೆಯರಿಗೆ ೬ ತಿಂಗಳುಗಳ ಕಾಲ ಉಚಿತವಾಗಿ ಬಿಸಿಯೂಟ ನೀಡಲಾಗುವುದು.

ಟಿಸಂಘಟಿತ ಕ್ಷೇತ್ರದಲ್ಲಿ ದುಡಿಯುತ್ತಿರುವ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪಾಸ್ ಸೌಲಭ್ಯ ನೀಡಲಾಗುವುದು.

ಟಿವಿದ್ಯಾ ವಾಹಿನಿ ಯೋಜನೆಯಡಿಯಲ್ಲಿ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಸೌಲಭ್ಯವನ್ನು ಕಲ್ಪಿಸಲಾಗುವುದು. ಇದಕ್ಕಾಗಿ ಸರಕಾರ ರೂ.೩೫೦ ಕೋಟಿ ಮೀಸಲಿಟ್ಟಿದೆ.

ಆರೋಗ್ಯ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ - ದೇಶದಲ್ಲೇ ಮೊದಲ ಅಂಗಾAಗ ಕಸಿ ವಿಭಾಗ

ಣದೇಶದಲ್ಲೇ ಮೊದಲೆಂಬAತೆ ರೂ.೧೪೬ ಕೋಟಿ ವೆಚ್ಚದಲ್ಲಿ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಅಂಗಾAಗ ಕಸಿ ವಿಭಾಗ ನಿರ್ಮಾಣ ಮಾಡಲಾಗುವುದು.

ಣಕನಕಪುರ, ಆನೆಕಲ್, ಶಿರಹಟ್ಟಿ, ಶೃಂಗೇರಿ, ಎಲಂದೂರು, ನೆಲಮಂಗಲ ಹಾಗೂ ಹೊಸಕೋಟೆ ತಾಲೂಕುಗಳಲ್ಲಿನ ಸಮುದಾಯ ಆರೋಗ್ಯ ಕೇಂದ್ರಗಳನ್ನು ಅಭಿವೃದ್ಧಿ ಪಡಿಸಿ ೧೦೦ ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗಳಾಗಿ ಮಾರ್ಪಾಡು ಮಾಡಲಾಗುವುದು.

ಣಅನೇಮಿಯಾ ರೋಗ ನಿವಾರಣೆಗೆ ರೂ.೧೦೦ ಕೋಟಿ ಮೀಸಲಿಡಲಾಗಿದೆ.

ಣ‘ಮನೆ ಮನೆಗೆ ಆರೋಗ್ಯ’ ಯೋಜನೆಯಡಿಯಲ್ಲಿ ಪ್ರತಿ ವರ್ಷ ೨ ಬಾರಿ ಆರೋಗ್ಯ ಶಿಬಿರ ಏರ್ಪಡಿಸಲಾಗುವುದು.

ಣನಿಮ್ಹಾನ್ಸ್ ಸಹಯೋಗದಡಿಯಲ್ಲಿ ಮಾನಸಿಕ ಆರೋಗ್ಯ ಕಾರ್ಯಕ್ರಮಕ್ಕೆ ರೂ.೨೫ ಕೋಟಿ ಬಳಕೆಯಾಗಲಿದೆ.

ಣಕ್ಯಾನ್ಸರ್ ಕಾಯಿಲೆ ಪತ್ತೆ ಹಚ್ಚಲು ಸ್ಕಿçÃನಿಂಗ್ ಶಿಬಿರಗಳನ್ನು ಆಯೋಜಿಸಲಾಗುವುದು. ಇದಕ್ಕೆ ರೂ.೧೨ ಕೋಟಿಯನ್ನು ಪರಿಕರಗಳ ಖರೀದಿಗೆ ಬಳಸಲಾಗುವುದು.

ಣಆಯ್ದ ತಾಲೂಕುಗಳ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ಶಿಬಿರಗಳ ಆಯೋಜನೆಗೆ ಒತ್ತು ನೀಡಲಾಗಿದ್ದು, ೨೮ ಸಮುದಾಯ ಕೇಂದ್ರಗಳಿಗೆ ರೂ.೨೮ ಕೋಟಿ, ೬೫ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ರೂ.೧೩೭ ಕೋಟಿ ಮೀಸಲಿಡಲಾಗಿದ್ದು, ಪರಿಕರಗಳ ಖರೀದಿಗೆ ರೂ.೫೦ ಕೋಟಿ ಬಳಕೆಯಾಗಲಿದೆ.

ಣಉತ್ತರ ಕನ್ನಡ ಜಿಲ್ಲೆಯ ಕುಮ್ಟದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಈ ವರ್ಷ ನಿರ್ಮಾಣ ಮಾಡಲಾಗುವುದು.

ಕಿವಿಯಲ್ಲಿ ಹೂ - ಪ್ರಾರಂಭದಲ್ಲೇ ವಾಗ್ವಾದ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ೨ನೇ ಬಾರಿ ಬಜೆಟ್ ಮಂಡಿಸುವಾಗ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರು ಕಿವಿ ಮೇಲೆ ಕೇಸರಿ ಬಣ್ಣದ ಹೂವು ಇಟ್ಟುಕೊಂಡು ಸದನಕ್ಕೆ ಬಂದಿದ್ದರಿAದ ಕೆಲಹೊತ್ತು ಕಲಾಪದಲ್ಲಿ ಗದ್ದಲ ಉಂಟಾಯಿತು.

ಸಿದ್ದರಾಮಯ್ಯ ಅವರು ಕಿವಿ ಮೇಲೆ ಹೂವು ಇಟ್ಟುಕೊಂಡು ಬಂದಿದ್ದಕ್ಕೆ ಸಚಿವ ಅಶೋಕ್ ಆಕ್ಷೇಪ ವ್ಯಕ್ತಪಡಿಸಿದರು. ಅವರೊಂದಿಗೆ ಧ್ವನಿಗೂಡಿಸಿದ ಸಿಎಂ ಬೊಮ್ಮಾಯಿ ಅವರು, ಇಷ್ಟು ದಿನ ಅವರು ಜನರ ಕಿವಿ ಮೇಲೆ ಹೂವಿಟ್ಟಿದ್ದಾರೆ. ಈಗ ಅವರೇ ಕಿವಿ ಮೇಲೆ ಹೂವು ಇಟ್ಟುಕೊಂಡಿದ್ದಾರೆ. ಮುಂದೆ ಜನ ಇವರ ಕಿವಿ ಮೇಲೆ ಹೂವಿಡುತ್ತಾರೆ ಎಂದರು.

ಇದಕ್ಕೆ ಗರಂ ಆದ ಸಿದ್ದರಾಮಯ್ಯ, ನೀವು ಜನರ ಕಿವಿ ಮೇಲೆ ಹೂವಿಡುತ್ತಿದ್ದೀರಿ. ನಾನು ಹೂವು ಇಟ್ಟುಕೊಂಡಿದ್ದು, ಈ ಬಜೆಟ್ ಮೂಲಕ ಇವರು ೭ ಕೋಟಿ ಜನರ ಕಿವಿ ಮೇಲೆ ಹೂ ಇಡುತ್ತಿದ್ದಾರೆ ಅಂತ ತಿಳಿಸಲು, ಎಂದು ಅಸಮಾಧಾನ ಹೊರಹಾಕಿದರು.

ಈ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಸದಸ್ಯರ ನಡುವೆ ವಾಕ್ಸಮರ ನಡೆಯಿತು. ಮಧ್ಯಪ್ರವೇಶ ಮಾಡಿದ ಸಭಾಧ್ಯಕ್ಷ ಕಾಗೇರಿಯವರು, ‘ಇಷ್ಟುದಿನ ಕೇಸರಿ ಬಣ್ಣ ನಿಮ್ಮ ಪಕ್ಷದ್ದು ಎನ್ನುತ್ತಿದ್ದ ಸಿದ್ದರಾಮಯ್ಯನವರೇ ಇಂದು ಕೇಸರಿ ಬಣ್ಣದ ಹೂ ಇಟ್ಟುಕೊಂಡು ಬಂದಿದ್ದಾರೆ’ ಎಂದರು. ನಂತರ ಸದಸ್ಯರನ್ನು ಸಮಾಧಾನಪಡಿಸಿ ಬಜೆಟ್ ಮಂಡನೆಗೆ ಅವಕಾಶ ಕಲ್ಪಿಸಿದರು.

ಪರಿಶಿಷ್ಟ ಜಾತಿ/ಪಂಗಡದ ಅಭಿವೃದ್ಧಿಗೆ ಒತ್ತು

ಪರಿಶಿಷ್ಟ ಜಾತಿ/ಪಂಗಡದ ಆಯ್ದ ೫ ವಿದ್ಯಾರ್ಥಿಗಳಿಗೆ ಐ.ಸಿ.ಇ.ಎಸ್ ಸಂಸ್ಥೆಯಲ್ಲಿ ಪಿ.ಎಚ್.ಡಿ ಪದವಿಗಾಗಿ ರೂ.೨ ಕೋಟಿ ಮೀಸಲಿಡಲಾಗಿದೆ.

ಪರಿಶಿಷ್ಟ ಜಾತಿ/ಪಂಗಡದವರಿಗೆ, ಹಿಂದುಳಿದ ವರ್ಗದವರಿಗೆ ಹಾಗೂ ಅಲ್ಪಸಂಖ್ಯಾತ ೧೦,೦೦೦ ಯುವಕ-ಯುವತಿಯರಿಗೆ ಅಗ್ನಿವೀರ್ ಆಯ್ಕೆ ಪ್ರಕ್ರಿಯೆಗೆ ಉಚಿತ ತರಬೇತಿ ನೀಡಲಾಗುವುದು.

ಪರಿಶಿಷ್ಟ ಜಾತಿ/ಪಂಗಡದ ಅಭಿವೃದ್ಧಿಗೆ ಒತ್ತು

ಪರಿಶಿಷ್ಟ ಜಾತಿ/ಪಂಗಡದ ಆಯ್ದ ೫ ವಿದ್ಯಾರ್ಥಿಗಳಿಗೆ ಐ.ಸಿ.ಇ.ಎಸ್ ಸಂಸ್ಥೆಯಲ್ಲಿ ಪಿ.ಎಚ್.ಡಿ ಪದವಿಗಾಗಿ ರೂ.೨ ಕೋಟಿ ಮೀಸಲಿಡಲಾಗಿದೆ.

ಪರಿಶಿಷ್ಟ ಜಾತಿ/ಪಂಗಡದವರಿಗೆ, ಹಿಂದುಳಿದ ವರ್ಗದವರಿಗೆ ಹಾಗೂ ಅಲ್ಪಸಂಖ್ಯಾತ ೧೦,೦೦೦ ಯುವಕ-ಯುವತಿಯರಿಗೆ ಅಗ್ನಿವೀರ್ ಆಯ್ಕೆ ಪ್ರಕ್ರಿಯೆಗೆ ಉಚಿತ ತರಬೇತಿ ನೀಡಲಾಗುವುದು.

ವಸತಿ ಯೋಜನೆಯಲ್ಲಿ ಮನೆಗಳ ನಿರ್ಮಾಣ

ವಸತಿ ನಿರ್ಮಾಣ ಸಂಬAಧ ೨,೦೦೦ ಎಕ್ರೆ ಜಾಗವನ್ನು ಖರೀದಿಸಿ ೩೦,೦೦೦ ಮನೆಗಳ ನಿರ್ಮಾಣಕ್ಕೆ ಒತ್ತು ನೀಡಲಾಗುವುದು.

ಪಶು ಅಭಿವೃದ್ಧಿ ನಿಗಮಕ್ಕೆ ರೂ.೫ ಕೋಟಿ

ಪ್ರಾಣಿಗಳ ವಿರುದ್ಧದ ದೌರ್ಜನ್ಯ, ಹಿಂಸೆಯನ್ನು ತಡೆಹಟ್ಟುವ ನಿಟ್ಟಿನಲ್ಲಿ ಪಶು ಅಭಿವೃದ್ಧಿ ನಿಗಮಕ್ಕೆ ರೂ.೫ ಕೋಟಿ ಘೋಷಿಸಿದ ಬೊಮ್ಮಾಯಿ ಅವರು, ದೇಶೀಯ ಮುಧೋಳ್ ತಳಿಯ ಶ್ವಾನ ಜಾತಿ ಅಭಿವೃದ್ಧಿಗೂ ರೂ.೫ ಕೋಟಿ ಮೀಸಲಿಟ್ಟು, ಈ ನಾಯಿಯನ್ನು ದತ್ತು ಪಡೆಯಲು ಶ್ವಾನ ಪ್ರಿಯರಿಗೆ ಪ್ರೋತ್ಸಾಹಿಸಲಾಗುವುದು.