ಎವ್ವ ಮಕ್ಕ ದೇಬೂವ ರಲ್ಲಿ (ಪಟ್ಟೋಲೆ ಪಳಮೆಯ ಉಲ್ಲೇಖದಂತೆ ೭ ದೇವತಾ ಮಕ್ಕಳು) ನಾಲ್ಕನೆಯವನಾದ ಇಗ್ಗುತ್ತಪ್ಪನು ಕೇರಳದಿಂದ ಬಂದು ನೆಲೆನಿಂತಿದ್ದು ಪಾಡಿ ಶ್ರೀ ಕ್ಷೇತ್ರದಲ್ಲಿ ಇಂದಿಗೂ ಮಳೆಮಾಗುರು, ಅನ್ನದಾತ, ಕೊಡಗಿನ ಜನರ, ಕೊಡವರ ಕುಲದೈವ ಎಂದೆಲ್ಲ ಪ್ರಖ್ಯಾತಿಗಳಿಸಿದ್ದಾನೆ.
ಹಲವು ಬಾರಿ ಇಗ್ಗುತ್ತಪ್ಪ ದೇವರನ್ನು ‘ಈಶ್ವರ ಇಗ್ಗುತ್ತಪ್ಪನೆಂದು ಸಂಭೋದಿಸುವುದನ್ನು ನಾವು ಕೇಳಿದ್ದೇವೆ. ಇಲ್ಲಿ ರುದ್ರಾಭಿಷೇಕ ಪೂಜೆ ನಡೆಯುವುದರಿಂದ ಅವನು ಈಶ್ವರನೂ ಕೂಡ ಹಾಗೆಯೇ ಸುಬ್ರಮಣ್ಯೇಶ್ವರಾ ಎಂದು ಕೂಡ ಭಕ್ತರು ಕೊಂಡಾಡುತ್ತಾರೆ. ಸಾಮಾನ್ಯವಾಗಿ ಹಿಂದಿನ ತಲೆಮಾರಿನಲ್ಲಿ ಎಲ್ಲರ ಬಾಯಲ್ಲೂ ಶ್ರೀ ಇಗ್ಗುತ್ತಪ್ಪ ಎಂದರೆ ಸುಬ್ರಹ್ಮಣ್ಯ ದೇವ ಎಂಬುದಾಗಿ ಕೇಳಿ ಬರುತ್ತಿತ್ತು. ಅದರಂತೆ ಕೊಡಗಿನ ಹಿಂದಿನ ಕಾಲದ ರಾಜಶಾಸನಗಳಲ್ಲಿ ಶ್ರೀ ಲಿಂಗರಾಜೇAದ್ರ ಒಡೆಯರ್ ಅವರು ಪಾಡಿಯಲ್ಲಿ ಶ್ರೀ ಇಗ್ಗುತ್ತಪ್ಪ ದೇವರಿಗೆ ಒಪ್ಪಿಸಿದ ಬೆಳ್ಳಿಯ ಆನೆಯ ಮೇಲೆ ಕೆತ್ತಿಸಿದ ಶಾಸನದಲ್ಲಿ ‘ಪಾಡಿ ಸುಬ್ರಹ್ಮಣ್ಯ’ ಎಂಬ ಸ್ಪಷ್ಪ ಉಲ್ಲೇಖವಿದೆ. ದೇಗುಲದ ಗರ್ಭಗುಡಿಯ ಮೆಟ್ಟಿಲಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಎಂಬ ಶಿಲಾಬರಹವಿದೆ. ಕೊಡಗಿನಲ್ಲಿ ಶ್ರೀ ಇಗ್ಗುತ್ತಪ್ಪ ದೇವರ ಭಕ್ತರು ಬಹುತೇಕ ಮಂದಿ ಕೊಡವರೇ ಆಗಿರುವುದರಿಂದ ಕೊಡವ ಭಾಷೆಯಲ್ಲಿಯೇ ದೇವಸ್ಥಾನದಲ್ಲಿ ದೇವತಕ್ಕರು ಪ್ರಾರ್ಥನೆ-ನುಡಿಕಟ್ಟುಗಳನ್ನು ಹೇಳುವ ಸಂಪ್ರದಾಯ ಇರುವುದರಿಂದ ಜಾನಪದ ಪರಂಪರೆಯAತೆ ‘ಇಗ್ಗುತ್ತಪ್ಪ’ ಎಂಬ ಹೆಸರೇ ವಿಖ್ಯಾತವಾಯಿತು.
ಮುಂಜಾನೆ ಸುಮಾರು ೫.೩೦ ಘಂಟೆಗೆ ದೇವಸ್ಥಾನಕ್ಕೆ ಭಕ್ತರು ಭೇಟಿ ಕೊಟ್ಟಲ್ಲಿ ನಮಸ್ಕಾರ ಮಂಟಪದಲ್ಲಿ ನಿಂತು ನೋಡಿದಾಗ ಅರ್ಚಕರು ಗರ್ಭಗುಡಿಯ ಒಳಗೆ ಮಧ್ಯಭಾಗದಲ್ಲಿ ಪ್ರತಿಷ್ಠಾಪಿಸಿದ ಶಿವಲಿಂಗಕ್ಕೆ ಅಭಿಷೇಕ ಪೂಜೆ ಮಾಡುವುದನ್ನು ಕಣ್ತುಂಬಿಕೊಳ್ಳಬಹುದು. ಸೂರ್ಯೋದಯವಾಗುವ ಮೊದಲೇ ಬೆಳಗಿನ ಪೂಜಾವಿಧಿ ಮುಗಿಸಿ ಶಿವಲಿಂಗವನ್ನು ಬೆಳ್ಳಿಯ ಕವಚದಿಂದ ಮುಚ್ಚಲಾಗುವುದು. ಶಿವಲಿಂಗದ ಬಲಭಾಗದಲ್ಲಿ ಇಗ್ಗುತ್ತಪ್ಪನ ಉತ್ಸವ ಮೂರ್ತಿಯನ್ನು ಇಡಲಾಗಿದೆ.
ತಂದೆ ಶಿವನ ಸನ್ನಿಧಾನಕ್ಕೆ ಮಗ ಸುಬ್ರಹ್ಮಣ್ಯ ಇಗ್ಗುತ್ತಪ್ಪನ ರೂಪದಲ್ಲಿ ಬಂದು ಸೇರಿದುದಕ್ಕಾಗಿಯೋ ಅಥವಾ ಎರಡೂ ದೈವೀಶಕ್ತಿಗಳ ಅಸೀಮ ಬಲ ಸಂಗಮದಿAದಾಗಿಯೋ ಇಂದಿಗೂ ಇಗ್ಗುತ್ತಪ್ಪನು ಅತ್ಯಂತ ಶಕ್ತಿವಂತನೂ, ಪ್ರಬಲನೂ ಆಗಿರುವನು ಹೀಗಾಗಿಯೇ ಅವನನ್ನು ಕೊಡವ ಭಾಷೆಯಲ್ಲಿ ‘ತಲೆಬಲ್ಯ ತಂಬ್ರಾನ್’ ಎನ್ನುವುದು (ಕೇರಳದಲ್ಲಿ ‘ತಂಬ್ರಾನ್’ ಎಂದರೆ ನಾಯಕ ಎಂದರ್ಥ) (ಖಿhಚಿmbಡಿಚಿಟಿ-ಖಿಡಿಚಿಜiಣioಟಿಚಿಟ Pಡಿomiಟಿeಟಿಣ Peಡಿsoಟಿಚಿಟiಣಥಿ) ಉತ್ಸವಗಳ ದಿನ, ಪುತ್ತರಿ ಹಬ್ಬ ಹಾಗೂ ಮಾರ್ಚ್ ತಿಂಗಳ ಕುಂಬ್ಯಾರ್ಕಲ್ಯಾಡ್ಚ ಉತ್ಸವಗಳು ಅತ್ಯಂತ ಪ್ರಮುಖವಾಗಿದ್ದು ಇಗ್ಗುತ್ತಪ್ಪನಿಗೆ ಜೋಡೆತ್ತುಗಳ ಎತ್ತುಪೊರಾಟ್ ಬರಬೇಕು. ಪುತ್ತರಿ ಹಬ್ಬದ ಸಮಯದಲ್ಲಿ ಪರದಂಡ ಮತ್ತು ಪೇರಿಯಂಡ ಕುಟುಂಬಸ್ಥರಿAದ ‘ಜೋಡ್ಸೋಮ’ ಹಾಗೆಯೇ ಮಾರ್ಚ್ ತಿಂಗಳ ಕುಂಬ್ಯಾರ್-ಕಲಾಡ್ಚ ಹಬ್ಬಕ್ಕೆ ಮಾದಂಡ ಕೋಡಿಮಣಿಯಂಡ, ಚೌರೀರ, ಅಲ್ಲಾರಂಡ ಮನೆತನದವರಿಂದ ಕೂಡಾ ಜೋಡೆತ್ತುಗಳನ್ನು ಮೆರವಣಿಗೆಯಲ್ಲಿ ತಂದು ಒಪ್ಪಿಸಬೇಕು. ಎರಡು ಎತ್ತುಗಳು ಒಂದರಲ್ಲಿ ಈಶ್ವರ, ಮತ್ತೊಂದರಲ್ಲಿ ‘ಸುಬ್ರಹ್ಮಣ್ಯ’ ಎಂಬ ನಂಬಿಕೆ ಇಂದಿಗೂ ಇದೆ. ಹೀಗಾಗಿಯೇ ಕೊಡಗಿನ ಯಾವುದೇ ದೇವಸ್ಥಾನಗಳಲ್ಲಿ ‘ಜೋಡೆತ್ತುಗಳ ಎತ್ತು ಪೋರಾಟ’ ಕಂಡು ಬರುವುದಿಲ್ಲ.
ಹಿಂದಿನ ಕಾಲದಲ್ಲಿ ಪಾಡಿ ಶ್ರೀ ಇಗ್ಗುತ್ತಪ್ಪ ದೇವರ ಬಾಳುಭಂಡಾರವು ದೇವತಕ್ಕರಾದ ಪರದಂಡ ಮನೆಯಿಂದ ಒಂದು ಎತ್ತಿನ ಮೇಲೆ ದೇವರ ಬಾಳುಭಂಡಾರ ಆಭರಣಗಳು ಹಾಗೂ ಇನ್ನೊಂದು ಎತ್ತಿನ ಮೇಲೆ ಅಕ್ಕಿಯ ಹೇರು ಹಾಕಿ ಉತ್ಸವದ ದಿನ ‘ಎತ್ತು ಪೋರಾಟ ಬರುತ್ತಿತ್ತು. ದೇವಾಲಯದ ಆಡಳಿತ ೧೯೦೬ರಲ್ಲಿ ಕೊಡಗು ಮುಜರಾಯಿ ಇಲಾಖೆಗೆ ನಾಡವರ ಕೈಯಿಂದ ಹೋದ ಮೇಲೆ ಸಹಜವಾಗಿ ಇದು ನಿಂತಿತು.
ದೇವರ ಈ ಎರಡು ಪ್ರಮುಖ ಉತ್ಸವಗಳ ಸಂದರ್ಭದಲ್ಲಿ ಮಲ್ಮ ಬೆಟ್ಟದಲ್ಲಿ ಸರ್ವವಿಧಿವಿಧಾನಗಳೊಂದಿಗೆ ಎತ್ತು ಪೋರಾಟದ ನೈವೇದ್ಯ ಒಪ್ಪಿಸಿ ವಾಪಾಸು ಪಾಡಿ ದೇವಸ್ಥಾನಕ್ಕೆ ಬಂದ ನಂತರದ ದೇವರ ನರ್ತನ ಸುತ್ತುಗಳು ಪ್ರಾರಂಭವಾಗುತ್ತವೆ. ದೇವರ ಬಿಂಬವನ್ನು ತಲೆಯ ಮೇಲೆ ಹೊತ್ತ ಅರ್ಚಕರು, ಅಲಂಕಾರಿಕವಾಗಿ ತಾಳ ಲಯಬದ್ಧವಾಗಿ ನೃತ್ಯ ಮಾಡುತ್ತಾರೆ. ಈ ನರ್ತನ ಶಾಸ್ತçವೆಲ್ಲವೂ ಶಿವನ ನರ್ತನಗಳಾಗಿವೆ. ಎಲ್ಲಾ ಸುತ್ತುಗಳು ಮುಗಿದ ಬಳಿಕ ಅಯ್ಯಪ್ಪ ಸ್ವಾಮಿಯ ಸನ್ನಿಧಿಯಲ್ಲಿ ಈಡುಗಾಯಿ ಒಡೆದು ಓಡಿ ಬಂದು ದಿವ್ಯಾನುಗ್ರಹ-ಆಶೀರ್ವಾದ ನೀಡಲು ದೇಗುಲದ ಪೂರ್ವಭಾಗದ ಹಲಸಿನ ಮರದ ಅಡಿಗೆ ಅರ್ಚಕರು ಬಂದು ನಿಲ್ಲುತ್ತಾರೆ. ತಕ್ಕ ಮುಖ್ಯಸ್ಥರು ಭಕ್ತಾದಿಗಳು ಅಲ್ಲಿ ಬಂದು ಸೇರುತ್ತಾರೆ. ಈ ಸಂದರ್ಭದಲ್ಲಿ ದೇವತಕ್ಕರು ಕೊಡಗು ದೇಶದ ಜನರ ಸುಖ-ಶಾಂತಿಗಾಗಿ ‘ಕಾಲಕಾಲಕ್ಕೆ ಮಳೆ-ಬೆಳೆಗಾಗಿ ಪ್ರಾರ್ಥನೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಭಕ್ತಾದಿಗಳು ಇಗ್ಗುತ್ತಪ್ಪನ ಮುಖಭಾವವನ್ನು ಹತ್ತಿರದಿಂದ ನೋಡಬಹುದು. ಅವನ ಹಸನ್ಮುಖ ಮುಖಚರ್ಯೆ ಎಂಥಹ ಆಸ್ತಿಕನನ್ನೂ ಒಂದು ಕ್ಷಣ ನಿರ್ಲಿಪ್ತತೆಗೆ ಒಯ್ಯವಷ್ಟು ಪ್ರಭಾವಶಾಲಿ. ಅದನ್ನು ಭಕ್ತರು ಭಾವಪರವಶರಾಗಿ ನೋಡುತ್ತಿರುವಷ್ಟರಲ್ಲಿಯೇ ತಕ್ಕ ಮುಖ್ಯಸ್ಥರು ಪ್ರಾರ್ಥನೆ ಮುಗಿದ ತಕ್ಷಣ ಅರ್ಚಕರು ಉತ್ಸವಮೂರ್ತಿಯನ್ನು ತಲೆಯಿಂದ ಇಳಿಸಿ ಶರವೇಗದಲ್ಲಿ ಗರ್ಭಗುಡಿಗೆ ತೆರಳಿ ಯಥಾಸ್ಥಾನದಲ್ಲಿರಿಸಿದಾಗ ಹಿಂದೆ ಬರುವ ಭಕ್ತರು ನಮಸ್ಕಾರ ಮಂಟಪದಲ್ಲಿ ಘಂಟಾನಾದಗೈಯುವಾಗ ಅಖೀರಿ ಪೂಜೆಯೊಂದಿಗೆ ಉತ್ಸವ ಸಂಪನ್ನಗೊಳ್ಳುವುದು.
ಹೀಗೆ ಈಶ್ವರ ಇಗ್ಗುತ್ತಪ್ಪನ ದಿವ್ಯ ತೇಜಸ್ಸು, ಅಗಾಧಶಕ್ತಿಯಿಂದಾಗಿಯೇ ಅನವರÀತವೂ ಕೊಡಗಿನ ರಕ್ಷಣಾದೇವನ ವಿಶಿಷ್ಟ ಸ್ಥಾನ ಪಡೆದಿದ್ದಾನೆ. ಹಾಗಾಗಿಯೇ ಅನಾದಿಕಾಲದಿಂದಲೂ ಇಲ್ಲಿಯವರೆಗೆ ಅವನ ಸನ್ನಿಧಾನದಲ್ಲಿ ಮಧ್ಯಾಹ್ನದ ಅನ್ನಸಂತರ್ಪಣೆ ನಿಂತಿಲ್ಲ. ಭಕ್ತಾದಿಗಳ ಹಿಂಡೇ ಬಂದರೂ ಅನುದಿನವೂ ಇಗ್ಗುತ್ತಪ್ಪನಲ್ಲಿ ಯಾವುದೇ ಕೊರತೆಯುಂಟಾಗಿಲ್ಲ.
ಇಷ್ಟೆಲ್ಲಾ ವೈಶಿಷ್ಟö್ಯತೆಗಳಿದ್ದೂ ಇಲ್ಲಿ ಕೆಲವು ಕೌತುಕದ ಸಂಗತಿಗಳಿವೆ. ಕೊಡಗಿನ ಅನೇಕ ದೇವಾಲಯಗಳಲ್ಲಿ ವಿವಾಹ ನಡೆಸಬಹುದು ಆದರೆ ಇಲ್ಲಿ ವಿವಾಹ ನಿಷಿದ್ಧ, ಲಗ್ನಪಟ್ಟಿ, ಆರತಕ್ಷತೆಯೂ ಸಲ್ಲದು.
ಈ ಬಗ್ಗೆ ನೀಲೇಶ್ವರ ತಂತ್ರಿಗಳು ಹೇಳುವ ಮಾತು. ಈಶ್ವರನು ಇರುವಲ್ಲಿಗೆ ಬಾಲಸುಬ್ರಹ್ಮಣ್ಯನು ಬಂದು ಸೇರಿರುವುದು ಹಾಗಾಗಿ ವಿವಾಹ ನಿಷಿದ್ಧ. ಇದು ಇಂದಿಗೂ ಬಿಡಿಸಲಾರದ ರಹಸ್ಯವಾಗಿಯೇ ಉಳಿದಿದೆ.
ಆದರೆ ಹೊಸದಾಗಿ ಮದುವೆಯಾದ ವಧೂ-ವರರು, ಅದರಲ್ಲೂ ಕೊಡವ ಸಂಪ್ರದಾಯಸ್ಥರಿಗೆ ಇಲ್ಲಿ ವಿಶೇಷ ಪೂಜೆ ಲಭ್ಯ. ಅವರ ಶ್ರೇಯೋಭಿವೃದ್ಧಿಗಾಗಿ ಸಂತಾನ ಪ್ರಾಪ್ತಿಗಾಗಿ ಅರ್ಚಕರು ತುಂಬಾ ಶ್ರದ್ಧೆಯಿಂದ ಪೂಜೆ ಮಾಡುತ್ತಾರೆ. ಹೀಗೆಯೇ ತಂದೆ ಈಶ್ವರ, ಮಗ ಸುಬ್ರಹ್ಮಣ್ಯನ ಅಗಾಧ ಶಕ್ತಿಯ ಅಪರೂಪದ ಶಕ್ತಿಯ ಭಂಡಾರವೇ ಆಗಿರುವ ಇಗ್ಗುತ್ತಪ್ಪ ದೇವಸ್ಥಾನ ಕೊಡಗಿನ ವಿಶೇಷವೆಂದರೆ ತಪ್ಪಾಗಲಾರದು.
-ಪರದಂಡ ಸುಬ್ರಮಣಿ ಕಾವೇರಪ್ಪ
ಅಧ್ಯಕ್ಷರು-ಅಖಿಲ ಕೊಡವ ಸಮಾಜ.