*ಗೋಣಿಕೊಪ್ಪ, ಫೆ. ೧೭: ಬಿ. ಶೆಟ್ಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾವೇರಿ ನೀರಾವರಿ ನಿಗಮದ ರೂ. ೧ ಕೋಟಿ ೧೫ ಲಕ್ಷ ಅನುದಾನದಲ್ಲಿ ಅಭಿವೃದ್ಧಿ ಹೊಂದುವ ರಸ್ತೆ ಕಾಮಗಾರಿಗಳಿಗೆ ರಾಜ್ಯ ಜಮೀನು ಸರಕಾರಿ ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ ಚಾಲನೆ ನೀಡಿದರು. ರೂ. ೫೫ ಲಕ್ಷ ಅನುದಾನದಲ್ಲಿ ಕೆಂದರೆಕಾಡು ಮತ್ತು ಪಾಂಡAಡ ಪರಿಶಿಷ್ಟ ಪಂಗಡ ಕಾಲೋನಿ ಸಂಪರ್ಕ ರಸ್ತೆ ಮತ್ತು ರೂ. ೬೦ ಲಕ್ಷದಲ್ಲಿ ಕೊಂಗಣ-ವೇಡಿಬೆಲು ಪರಿಶಿಷ್ಟ ಪಂಗಡ ಕಾಲೋನಿ ಸಂಪರ್ಕ ರಸ್ತೆಗೆ ಗ್ರಾಮಸ್ಥರ ಸಮ್ಮುಖದಲ್ಲಿ ಭೂಮಿಪೂಜೆ ನೆರವೇರಿಸಿದರು.
ಅಕ್ರಮ ಸಕ್ರಮ ತಾಲೂಕು ಸದಸ್ಯ ತೀತಮಾಡ ಲಾಲಾ ಭೀಮಯ್ಯ, ಬಿ. ಶೆಟ್ಟಿಗೇರಿ ಗ್ರಾ.ಪಂ. ಅಧ್ಯಕ್ಷೆ ಕೆ.ಎಸ್. ನೇತ್ರಾವತಿ, ಉಪಾಧ್ಯಕ್ಷ ಮದ್ರಿರ ಗಿರೀಶ್, ಸದಸ್ಯೆ ಸಿ.ಎಂ. ಕಾವೇರಮ್ಮ, ನಾರಾಯಣನಂದ ಆಶ್ರಮದ ಸ್ವಾಮಿಗಳಾದ ಪರಮಾನಂದ, ಶಕ್ತಿ ಕೇಂದ್ರದ ಪ್ರಮುಖ ವಿಜು ಕುಶಾಲಪ್ಪ, ಕೃಷಿ ಮೋರ್ಚಾ ಸದಸ್ಯ ರಮೇಶ್, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧುದೇವಯ್ಯ ಗುತ್ತಿಗೆದಾರರುಗಳಾದ ನಾಮೇರ ನವೀನ್, ವಿವೇಕ್, ಇಂಜಿನಿಯರ್ ಹಾಗೂ ಗ್ರಾಮಸ್ಥರು ಇದ್ದರು.