ಸೋಮವಾರಪೇಟೆ, ಫೆ. ೧೬: ಇಲ್ಲಿನ ಶ್ರೀ ಸೋಮೇಶ್ವರ ದೇವಾಲ ಯದ ವತಿಯಿಂದ ಶಿವರಾತ್ರಿ ಹಬ್ಬದ ಪ್ರಯುಕ್ತ ತಾ. ೧೮ ಮತ್ತು ೧೯ ರಂದು ಮಹಾಶಿವರಾತ್ರಿ ಉತ್ಸವ ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಶ್ರೀನಿವಾಸ್ ತಿಳಿಸಿದ್ದಾರೆ. ತಾ. ೧೮ ರ ಬೆಳಿಗ್ಗೆ ೭.೩೦ಕ್ಕೆ ಶ್ರೀ ಸೋಮೇಶ್ವರ ಸನ್ನಿದಿಯಲ್ಲಿ ಏಕದಶವಾರ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ನಡೆಯಲಿದೆ. ೧೦.೩೦ಕ್ಕೆ ೧೨೧ ಕಲಶ ಪ್ರತಿಷ್ಠಾಪನೆ, ಏಕದಶವಾರ ರುದ್ರ ಪಾರಾಯಣ ಹಾಗೂ ಪೂಜೆ ನಡೆಯಲಿದೆ. ರಾತ್ರಿ ೭ ಗಂಟೆಗೆ ವಿಶ್ವರೂಪ ವಾದ್ಯಗೋಷ್ಠಿ ಕಲಾ ತಂಡದಿAದ ಭಕ್ತಿಗೀತೆ ಸಂಗಮ ನಡೆಯುವುದು. ೯ ಗಂಟೆಯಿAದ ವಿವಿಧ ಪೂಜೆಗಳೊಂದಿಗೆ ಏಕದಶವಾರ ರುದ್ರಾಭಿಷೇಕ, ರುದ್ರ ಬಸ್ಮಾರ್ಚನೆ, ಸಹಸ್ರನಾಮ ಹಾಗೂ ರುದ್ರತ್ರಿಶತಿ ಪೂಜೆ ನಡೆಯುವುದು. ತಾ. ೧೯ರ ಬೆಳಿಗ್ಗೆ ೭.೩೦ ರಿಂದ ರುದ್ರಹೋಮ ಸಂಕಲ್ಪ, ೮ ಉಪಕಲಶಗಳ ಪ್ರತಿಷ್ಠಾಪನೆ ಮತ್ತು ಅಭಿಷೇಕ ನಡೆಯುವುದು. ೯ ರಿಂದ ಕಲಶಾರಾಧನೆ, ರುದ್ರಹೋಮ, ಮಧ್ಯಾಹ್ನ ಮಹಾಮಂಗಳಾರತಿ, ನಂತರ ಅನ್ನಸಂತರ್ಪಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.