ಶ್ರೀಮಂಗಲ, ಫೆ. ೧೬: ಶ್ರೀಮಂಗಲದಲ್ಲಿ ರಸ್ತೆ ಬದಿಯಲ್ಲಿ ಮಾರಾಟ ಮಾಡಲಾಗುತ್ತಿದ್ದ ಅಡುಗೆ ಸ್ಟೌ ಸ್ಫೋಟಗೊಂಡ ಘಟನೆ ನಿನ್ನೆ ಸಂಭವಿಸಿದೆ.
ಶ್ರೀಮAಗಲ ಪ್ರವಾಸಿ ಮಂದಿರದ ಮುಂಭಾಗದ ರಸ್ತೆ ಬದಿಯಲ್ಲಿ ಗ್ರಾಹಕರಿಗೆ ಪ್ರಾತ್ಯಕ್ಷಿಕೆ ಮೂಲಕ ನೂತನ ಸ್ಟೌ ಬಗ್ಗೆ ಮಾಹಿತಿ ನೀಡಲಾಗುತ್ತಿತ್ತು. ಸೌದೆ ಬಳಸಿ ಉಪಯೋಗಿಸುವ ಸ್ಟೌ ಇದಾಗಿದ್ದು, ಬ್ಯಾಟರಿ ಅಳವಡಿತ ಸ್ಟೌ ಸ್ಫೋಟಗೊಂಡಿದೆ. ಇದರೊಂದಿಗೆ ಮಾರಾಟ ಮಾಡಲು ತಂದಿದ್ದ ಇತರ ಸ್ವೌಗಳೂ ಬೆಂಕಿಗಾಹುತಿಯಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಫೋಟಗೊಂಡ ಸ್ಟೌಗಳನ್ನು ಮಾರಾಟಗಾರರು ಅಲ್ಲೆ ಬಿಟ್ಟು ತೆರಳಿದ್ದು, ಘಟನೆ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.