ವೀರಾಜಪೇಟೆ, ಫೆ. ೧೫: ಕ್ರೀಡೆಗಳು ಯುವ ಮನಸ್ಸುಗಳನ್ನು ಬೆಸೆಯಲು ಸಹಕಾರಿ ಎಂದು ಹೈಕೋರ್ಟ್ ಹಿರಿಯ ವಕೀಲರು, ಕೆ.ಪಿ.ಸಿ.ಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್. ಪೊನ್ನಣ್ಣ ಹೇಳಿದರು.

ಇಲ್ಲಿನ ಕೂರ್ಗ್ ಕಾವೇರಿ ಬ್ರಿಗೇಡಿರ‍್ಸ್ ಫುಟ್ಬಾಲ್ ಕ್ಲಬ್ ಆಶ್ರಯದಲ್ಲಿ ೭ನೇ ವರ್ಷದ ರಾಷ್ಟçಮಟ್ಟದ ಪುರುಷರ ಹೊನಲು ಬೆಳಕಿನ ಸೂಪರ್ ಸೆವೆನ್ ಕಾಲ್ಚೆಂಡು ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಕ್ರೀಡೆಗಳ ತವರೂರು ಕೊಡಗು ಜಿಲ್ಲೆಯಲ್ಲಿ ಕ್ರೀಡೆಗಳನ್ನು ಆಯೋಜಿಸುವ ಮೂಲಕ ಕ್ರೀಡಾ ಪತ್ರಿಭೆಗಳಿಗೆ ಅವಕಾಶ ಕಲ್ಪಿಸುತ್ತಿರುವುದು ಸಂತೋಷದಾಯಕ ಬೆಳೆವಣಿಗೆಯಾಗಿದೆ ಎಂದರು.

ಸಾಮಾಜಿಕ ಕಾರ್ಯಕರ್ತ ಪ್ರತೀಕ್ ಪೊನ್ನಣ್ಣ ಮಾತನಾಡಿ, ಸರ್ಕಾರ ಕ್ರೀಡೆಗೆ ಮಹತ್ವ ನೀಡಿ ಕ್ರೀಡಾಂಗಣಗಳನ್ನು ನಿರ್ಮಾಣ ಮಾಡಿ ಉತ್ತಮ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಬೇಕೆಂದರು.

ಅAರ‍್ರಾಷ್ಟಿçÃಯ ರಗ್ಬಿಪಟು ಮಾದಂಡ ತಿಮ್ಮಯ್ಯ ಮಾತನಾಡಿ, ಕ್ರೀಡಾಂಗಣದ ಬೇಡಿಕೆಗಾಗಿ ಹಲವಾರು ಹೋರಾಟಗಳು ಮಾಡಿದರೂ ಸ್ಥಳೀಯ ಆಡಳಿತ, ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ. ಕ್ರೀಡಾಂಗಣ ವ್ಯವಸ್ಥೆಗಳು ಇಲ್ಲದಿರುವಾಗ ಕ್ರೀಡಾಪಟುಗಳು ಹೇಗೆ ಹೊರಹೊಮ್ಮಲು ಸಾಧÀ್ಯ? ಎಂದು ಪ್ರಶ್ನಿಸಿದರು. ಪುರಸಭೆಯ ಸದಸ್ಯರಾದ ಮೊಹಮ್ಮದ್ ರಾಫಿ ಮತ್ತು ಹೆಚ್.ಎಸ್. ಮತೀನ್ ಮಾತನಾಡಿದರು. ವೇದಿಕೆಯಲ್ಲಿ ಕಾಫಿ ಬೆಳೆಗಾರರಾದ ಬೆಲ್ಲು ಮೇದಪ್ಪ, ಬಟ್ಟೀರ ತಮ್ಮಯ್ಯ, ಹಾಗೂ ಇತರ ದಾನಿಗಳು ಹಾಜರಿದ್ದರು.

ಕ್ರೀಡಾ ವರದಿ: ಪ್ರಥಮ ಸೆಮಿಫೈನಲ್ ಆರ್.ಎಸ್.ಎಲ್ ಬ್ರರ‍್ಸ್ ಮತ್ತು ಹಿಲ್ ಪ್ಯಾಲೇಸ್ (ಬಿ) ತಂಡಗಳ ಮಧ್ಯೆ ನಡೆದು ಆರ್.ಎಸ್.ಎಲ್ ತಂಡವು ೩-೦ ಗೋಲಿನಿಂದ ಹಿಲ್ ಪ್ಯಾಲೇಸ್ (ಬಿ) ತಂಡವನ್ನು ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟಿತ್ತು. ದ್ವಿತೀಯ ಸೆಮಿಫೈನಲ್ ಹಿಲ್ ಪ್ಯಾಲೇಸ್ (ಎ) ಮತ್ತು ಬಿ.ಎಸ್.ಎ ಕುಂದಾ ತಂಡಗಳ ಮಧ್ಯೆ ನಡೆದು ಹಿಲ್ ಪ್ಯಾಲೇಸ್ (ಎ) ೧-೦ ಗೋಲುಗಳಿಂದ ಬಿ.ಎಸ್.ಎ ಕುಂದಾವನ್ನು ಸೋಲಿಸಿ ಫೈನಲ್‌ಗೆ ಪ್ರವೇಶ ಪಡೆಯಿತು. ಫೈನಲ್ ಪಂದ್ಯಾಟ ಆರ್.ಎಸ್.ಎಲ್. ಬ್ರರ‍್ಸ್ ತಂಡ ಮತ್ತು ಹಿಲ್ ಪ್ಯಾಲೇಸ್ (ಎ) ತಂಡಗಳ ಮಧ್ಯೆ ನಡೆದು ಹಿಲ್ ಪ್ಯಾಲೇಸ್ (ಎ) ತಂಡವು ೩-೦ ಗೋಲುಗಳಿಂದ ಜಯ ಸಾಧಿಸಿತು.

ವಿಜೇತ ತಂಡಕ್ಕೆ ಆಕರ್ಷಕ ಟ್ರೋಫಿ ಮತ್ತು ನಗದು ನೀಡಿ ಗೌರವಿಸಲಾಯಿತು. ಉತ್ತಮ ಡಿಫೆಂಡರ್ ಹಿಲ್ ಪ್ಯಾಲೇಸ್ ತಂಡದ ಅರವಿಂದ್, ಉತ್ತಮ ಗೋಲಿ ಪ್ರಶಸ್ತಿ ಹಿಲ್ ಪ್ಯಾಲೇಸ್ ತಂಡದ ಮಣಿ, ಭರವಸೆಯ ಆಟಗಾರ ಆರ್.ಎಸ್. ಎಲ್ ತಂಡದ ಫೈಜಲ್, ಅತಿ ಹೆಚ್ಚು ಗೋಲು ಗಳಿಕೆ ಪ್ರಶಸ್ತಿಯನ್ನು ಹಿಲ್ ಪ್ಯಾಲೇಸ್ ತಂಡದ ಇಳಂಗೋ, ಉತ್ತಮ ಮುನ್ನಡೆ ಆಟಗಾರ ಆರ್.ಎಸ್.ಎಲ್ ತಂಡದ ಸಂಶಾಜ್, ಉತ್ತಮ ಕ್ರೀಡಾ ತಂಡ ಪ್ರಶಸ್ತಿಯನ್ನು ಬಿ.ಎಸ್.ಎ ಕುಂದಾ ತಂಡ ಪಡೆದು ಕೊಂಡಿತು. ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಆರ್.ಎಸ್.ಎಲ್ ತಂಡದ ಚಾಚು ಪಡೆದುಕೊಂಡರು.