ಗಮನ ಸೆಳೆಯುತ್ತಿರುವ ಕೊಡಗಿನ ನಟ

ಮಡಿಕೇರಿ, ಫೆ. ೧೫: ಕೊಡಗು ಜಿಲ್ಲೆಯ ಹಲವಷ್ಟು ಮಂದಿ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ಈ ಸಾಲಿನಲ್ಲಿ ಮತ್ತೊಬ್ಬರು ಸೇರ್ಪಡೆಗೊಂಡಿದ್ದು ಗಮನ ಸೆಳೆಯುತ್ತಿದ್ದಾರೆ. ತಮಿಳು ಸಿನಿಮಾರಂಗದಲ್ಲಿ ಅರಪಟ್ಟು ಗ್ರಾಮದವರಾದ ಪಾಂಡAಡ ವಿಶ್ವನಾಥ್ ಅವರು ಹೆಸರು ಮಾಡುತ್ತಿದ್ದಾರೆ.

ಈ ಹಿಂದೆ ಫ್ಯಾಷನ್ ಶೋದ ಮೂಲಕ ಗಿನ್ನಿಸ್ ದಾಖಲೆಯಲ್ಲಿ ಸೇರ್ಪಡೆಗೊಂಡಿರುವ ವಿಶ್ವನಾಥ್ ಮಾಡಲಿಂಗ್ ಕ್ಷೇತ್ರದಿಂದ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ.

ತಮಿಳುನಾಡುವಿನಲ್ಲಿ ಪೊಂಗಲ್ ಸಂದರ್ಭ ಬಿಡುಗಡೆಯಾಗಿ ಹಿಟ್ ಆಗಿರುವ ಚಿತ್ರ ಖ್ಯಾತ ನಟ ಅಜಿತ್ ಕುಮಾರ್ ಜೊತೆಗೆ ಇವರು ನಟಿಸಿರುವ ‘ತುಣಿವು’ ಚಿತ್ರದಲ್ಲಿ ವಿಶೇಷ ಗಮನ ಸೆಳೆದಿದ್ದಾರೆ. ಈ ಚಿತ್ರದಲ್ಲಿ ಆರ್ಮಿ ಆಧಿಕಾರಿಯಾಗಿ ಕಮಾಂಡೋರೋಲ್ ನಿರ್ವಹಿಸಿರುವ ವಿಶ್ವನಾಥ್‌ಗೆ ಇದೀಗ ಇನ್ನೂ ಕೆಲವು ಚಿತ್ರಗಳಲ್ಲಿ ಬೇಡಿಕೆ ಬರುತ್ತಿದೆ.

ತುಣಿವು ಚಿತ್ರ ತಮಿಳು ಮಾತ್ರವಲ್ಲದೆ ಕನ್ನಡ, ಹಿಂದಿ, ತೆಲುಗು ಭಾಷೆಯಲ್ಲೂ ತೆರೆ ಕಂಡಿದೆ. ಈ ಹಿಂದೆ ಅಚ್ಚಂ ಎಂಟ್‌ದ್ ಮಡ್‌ವೆಯಾಟ್, ಮೊಗಮುಡಿ ಚಿತ್ರದಲ್ಲೂ ಇವರು ನಟಿಸಿದ್ದಾರೆ.

ತಮ್ಮ ತಂದೆಯೂ ಭಾರತೀಯ ಸೇನೆಯ ಅಧಿಕಾರಿಯಾಗಿದ್ದು, ತಮಗೆ ಸೇನೆಯತ್ತ ವಿಶೇಷ ಒಲವು ಇದೆ. ಈ ಆಸಕ್ತಿಗೆ ಪೂರಕವಾಗಿ ತುಣಿವ್ ಚಿತ್ರದಲ್ಲಿ ಕಮಾಂಡೋ ಪಾತ್ರ ನಿರ್ವಹಿಸಿರುವುದು ಹೆಚ್ಚಿನ ಸಂತಸ ತಂದಿರುವುದಾಗಿ ವಿಶ್ವನಾಥ್ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದರು.

ಇದೀಗ ಅಗೀನ್, ಟಕ್ಕರ್ ಹಾಗೂ ಇನ್ನೂ ಹೆಸರಿಡದ ಚಿತ್ರವೊಂದರಲ್ಲೂ ವಿಶ್ವನಾಥ್ ನಟಿಸಿದ್ದು, ಇನ್ನಷ್ಟೆ ತೆರೆಕಾಣಬೇಕಿದೆ. ಹಲವು ವರ್ಷದಿಂದ ಚೆನ್ನೆöÊಯಲ್ಲೇ ನೆಲೆಸಿರುವ ಇವರು ಇದೀಗ ಪೂರ್ಣ ಪ್ರಮಾಣದಲ್ಲಿ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಏರ್‌ಲೈನ್ಸ್ನಲ್ಲಿದ್ದ ಉದ್ಯೋಗ, ಮಾಡಲಿಂಗ್ ಕ್ಷೇತ್ರದಿಂದ ಹಿಂದೆ ಸರಿದು ಚಿತ್ರ ರಂಗದತ್ತ ಆಸಕ್ತಿ ವಹಿಸಿರುವ ಇವರಿಗೆ ತವರು ಜಿಲ್ಲೆ ಕೊಡಗು ಇಲ್ಲಿನ ಜಾಗ, ಸಂಸ್ಕೃತಿಯ ಮೇಲೆಯೂ ವಿಶೇಷ ಒಲವು ಇದೆ. ಸಾಧ್ಯವಾದ ಸಂದರ್ಭದಲ್ಲಿ ತವರು ಗ್ರಾಮಕ್ಕೆ ಆಗಮಿಸಿ ಐನ್‌ಮನೆ, ತೋಟ, ಮನೆ, ಕುಟುಂಬದ ಆಚಾರ-ವಿಚಾರಗಳತ್ತಲೂ ತೊಡಗಿಸಿಕೊಳ್ಳುತ್ತಿರುವುದಾಗಿ ಹೇಳಿದ ವಿಶ್ವನಾಥ್, ಇದೊಂದು ವಿಶಿಷ್ಟತೆಯಾಗಿದ್ದು, ಇದರ ಮಹತ್ವವನ್ನು ಎಲ್ಲರೂ ಅರಿತುಕೊಳ್ಳುವಂತಾಗಬೇಕು ಎನ್ನುತ್ತಾರೆ.

ಪ್ರಸ್ತುತ ಕೊಡಗಿನಲ್ಲಿ ಕಂದಾಯ ಇಲಾಖೆಯ ದಾಖಲಾತಿಯ ಸಂಕಷ್ಟದ ಅರಿವೂ ತಮಗಾಗಿದೆ. ಇದು ಸರಿಯಾಗಬೇಕಿದೆ ಎಂದು ಅವರು ಕೊಡಗಿನ ಜನರಪರವಾಗಿ ಮನವಿ ಮಾಡಿದರು.

ವಿಶ್ವನಾಥ್ ಮೂಲತಃ ಅರಪಟ್ಟು ಗ್ರಾಮದ ಪಾಂಡAಡ ದಿ. ಉತ್ತಪ್ಪ ಹಾಗೂ ಸುಬ್ಬಮ್ಮ (ತಾಮನೆ-ಕಳ್ಳಿಚಂಡ) ದಂಪತಿ ಪುತ್ರ.