ಮಡಿಕೇರಿ,ಫೆ. ೧೬: ವಿದ್ಯಾರ್ಥಿಗಳು, ಸಾರ್ವಜನಿಕರ ಅನುಕೂಲಕ್ಕೆಂದು ಸಂಸ್ಥೆಯೊAದು ನಿರ್ಮಾಣ ಮಾಡಿಕೊಟ್ಟಿರುವ ಸಾರ್ವಜನಿಕ ಬಸ್ ತಂಗುದಾಣದಲ್ಲಿ ಬಸ್ಗಳು ನಿಲುಗಡೆಗೊಳ್ಳದೇ ಮುಂದಕ್ಕೆ ಚಲಿಸುತ್ತಿರುವದರಿಂದ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿದ ತಂಗುದಾಣ ಸಾರ್ವಜನಿಕರ ಉಪಯೋಗಕ್ಕೆ ಬಾರದಂತಾಗಿದೆ.
ಕುಶಾಲನಗರ ಇನ್ನರ್ ವೀಲ್ ಸಂಸ್ಥೆ ವತಿಯಿಂದ ಇಂಜಿನಿಯರಿAಗ್ ಕಾಲೇಜು ಬಳಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ರೂ.೨ಲಕ್ಷ ವೆಚ್ಚದಲ್ಲಿ ಬಸ್ ತಂಗುದಾಣವೊAದನ್ನು ನಿರ್ಮಿಸಿದೆ. ಇಲ್ಲಿನ ನೂರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬಸ್ಸನ್ನೇರಲು ದೂರದಲ್ಲಿರುವ ಪಾಲಿಟೆಕ್ನಿಕ್ ಕಾಲೇಜು ಬಳಿಗೆ ತೆರಳಬೇಕಿತ್ತು. ಈ ಹೆದ್ದಾರಿಯಲ್ಲಿ ವಾಹನ ದಟ್ಟಣೆಯೊಂದಿಗೆ ಅಪಾಯಕಾರಿ ತಿರುವು ಇರುವದರಿಂದ ವಿದ್ಯಾರ್ಥಿಗಳು ರಸ್ತೆಯಲ್ಲಿ ನಡೆದಾಡಲು ತೊಂದರೆ ಆಗುತ್ತಿದ್ದುದರಿಂದ ಈ ತಂಗುದಾಣ ನಿರ್ಮಿಸಲಾಗಿದೆ.
ಆದರೆ, ಇಲ್ಲಿ ವೇಗದೂತ ಬಸ್ಗಳು ಹೋಗಲಿ ಶಟಲ್ ಬಸ್ಗಳು ಕೂಡ ನಿಲುಗಡೆಗೊಳ್ಳುತ್ತಿಲ್ಲ. ಬಸ್ಗಾಗಿ ಕಾದು ಕುಳಿತ ವಿದ್ಯಾರ್ಥಿಗಳು ಕೈ ತೋರಿಸಿದರೂ ಚಾಲಕರು ನಿಲ್ಲಿಸದೇ ನೇರವಾಗಿ ಪಾಲಿಟೆಕ್ನಿಕ್ ಬಳಿ ಹೋಗಿ ನಿಲ್ಲಿಸುತ್ತಾರೆ. ಅನ್ಯ ಮಾರ್ಗವಿಲ್ಲದೆ ವಿದ್ಯಾರ್ಥಿಗಳು ಬಸ್ನ ಹಿಂದೆ ಓಡುತ್ತಿದ್ದು, ಇದು ಇನ್ನೂ ಅಪಾಯಕಾರಿ ಪರಿಸ್ಥಿತಿಯಾಗಿ ಕಂಡುಬರುತ್ತಿದೆ. ಈ ಬಗ್ಗೆ ಸಾರಿಗೆ ಅಧಿಕಾರಿಯಲ್ಲಿ ವಿಚಾರಿಸಿದರೆ ಬಸ್ ನಿಲುಗಡೆಗೆ ಆದೇಶ ನೀಡಿರುವದಾಗಿ ಹೇಳಿದರೆ, ಚಾಲಕರನ್ನು ಕೇಳಿದರೆ ನಮಗಳಿಗೆ ಯಾವದೇ ಸೂಚನೆ ಬಂದಿಲ್ಲವೆAದು ಹೇಳುತ್ತಾರೆ. ಇವರುಗಳ ದ್ವಂದ್ವ ನಿಲುವಿನಿಂದಾಗಿ ವಿದ್ಯಾರ್ಥಿಗಳು ಪರದಾಡುವಂತಾಗಿದ್ದು, ತಂಗುದಾಣ ಮಾತ್ರ ‘ಏಕಾಂಗಿ’ಯಾಗಿ ನಿಂತಿದೆ..! -ಟಿ.ಜಿ. ಸತೀಶ್