ಮಡಿಕೇರಿ, ಫೆ. ೧೫: ಕೊಡಗಿನ ಬಾಣೆ ಜಾಗಕ್ಕೆ ಸಂಬAಧಿಸಿದ ಗೊಂದಲಗಳು ಈಗಾಗಲೇ ನ್ಯಾಯಾಲಯದಲ್ಲಿ ನಿವಾರಣೆಯಾಗಿವೆೆ. ಆದರೆ ಕಂದಾಯ ಸಚಿವರು ಇತ್ತೀಚಿಗೆ ನೀಡಿರುವ ಹೇಳಿಕೆ ಜಿಲ್ಲೆಯ ಬೆಳೆಗಾರರಲ್ಲಿ ಗೊಂದಲ ಮತ್ತು ಆತಂಕವನ್ನು ಸೃಷ್ಟಿಸಿದೆ ಎಂದು ವ್ಯಾಲಿಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ ಹಂಚೆಟ್ಟಿರ ಮನು ಮುದ್ದಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಜಿಲ್ಲೆಯ ಜಮ್ಮಾ ಜಾಗದ ಕುರಿತು ಸರಿಯಾಗಿ ಅರ್ಥಮಾಡಿಕೊಂಡು ಸಚಿವರು ಹೇಳಿಕೆಗಳನ್ನು ನೀಡಬೇಕು, ಈಗ ನೀಡಿರುವ ಹೇಳಿಕೆಯನ್ನು ವಾಪಾಸ್ಸು ಪಡೆದು ಜಿಲ್ಲೆಯ ಜನ ನಿಶ್ಚಿಂತೆಯಿAದ ಬದುಕುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.